ಸರಕಾರಿ ನೌಕರಿ ಇಲ್ಲಾ ಅಂತ ಹುಡುಗಿ ಸಿಗದ ಯುವಕ - ಇಂಥ ಕೆಲಸ ಮಾಡೋದಾ

Webdunia
ಮಂಗಳವಾರ, 7 ಜನವರಿ 2020 (14:24 IST)
ಪ್ರಶ್ನೆ: ನಾನು 38 ವರ್ಷದ ಯುವಕ. ಸರಕಾರಿ ನೌಕರಿ ಸಿಗದ ಕಾರಣದಿಂದ ಬ್ಯುಸಿನೆಸ್ ಮಾಡಿಕೊಂಡಿರುವೆ. ಹೀಗಾಗಿ ನೌಕರಿ ಇಲ್ಲಾ ಅಂತ ನನಗೆ ಯಾರೂ ಹೆಣ್ಣು ಕೊಡಲು ಮುಂದೆ ಬರುತ್ತಿಲ್ಲ.

ಮದುವೆಗಾಗಿ ಹುಡುಗಿಯನ್ನು ಹುಡುಕಿ ಸಾಕಾಗಿ ಹೋಗಿದೆ. ಎಲ್ಲೂ ಹುಡುಗಿ ಸೆಟ್ ಆಗ್ತಿಲ್ಲ. ಹೀಗಾಗಿ ಕಾಲ್ ಗರ್ಲ್ ಗಳ ಸಹವಾಸ ಮಾಡುತ್ತಿರುವೆ. ಇದರಿಂದ ನನ್ನ ಮದುವೆಯಾದ ಬಳಿಕ ಪತ್ನಿಯಾಗೋಳಿಗೆ ಏನಾದರೂ ತೊಂದರೆಯಾಗುತ್ತಾ?

ಉತ್ತರ: ಹಗಲು ಕಂಡ ಬಾವಿಗೆ ರಾತ್ರಿ ಬೀಳೋದು ಅಂತ ಹಿರಿಯರು ನಿಮ್ಮ ಈ ನಡೆ ನೋಡಿಯೇ ಹೇಳಿರಬೇಕು. ಕಾಲ್ ಗರ್ಲ್ ಗಳ ಸಹವಾಸ ಬಿಟ್ಟುಬಿಡಿ. ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಏಡ್ಸ್ ನಂತಹ ಮಾರಕ ಕಾಯಿಲೆಗಳು ನಿಮ್ಮ ಜೀವವನ್ನೇ ಬಲಿ ತೆಗೆದುಕೊಳ್ಳಬಲ್ಲದು. ಆಕರ್ಷಣೆ ಹಾಗೂ ವಯೋಸಹಜ ಕುತೂಹಲಕ್ಕೆ ನೀವು ಮಾಡಿದ್ದು ತಪ್ಪು.

ನಿಮ್ಮ ಪತ್ನಿಯೂ ನಿಮ್ಮಂತೆ ನಿಮ್ಮ ಮದುವೆಗೂ ಮೊದಲೇ ಬೇರೋಬ್ಬರ ಜತೆ ಇದನ್ನೇ ಮಾಡ್ತಿದ್ದರೆ ಆಗ ಅವರನ್ನು ನೀವು ಸ್ವೀಕಾರ ಮಾಡ್ತಿದ್ದರಾ? ಇಲ್ಲಾ ತಾನೇ? ನೀವು ಪರಿಶುದ್ಧ ಹೆಣ್ಣನ್ನು ಮದುವೆಗೆ ಆಸೆ ಪಡುವಂತೆ ಆಕೆ ಕೂಡ ನನ್ನ ಗಂಡ ಶ್ರೀರಾಮನಂತೆ ಇರಲಿ ಎಂದುಕೊಂಡಿರುತ್ತಾಳೆ.

ನಿಮ್ಮ  ಕ್ಷಣಿಕ ಸುಖಕ್ಕಾಗಿ ಭವಿಷ್ಯವನ್ನ ಬಲಿಕೊಡಬೇಡಿ. ಒಳ್ಳೆಯತನ ರೂಢಿಸಿಕೊಳ್ಳಿ. ಖಂಡಿತವಾಗಿ ಉತ್ತಮ ಹುಡುಗಿ ನಿಮ್ಮ ಪತ್ನಿಯಾಗುತ್ತಾಳೆ. ಲೈಂಗಿಕ ಕ್ರಿಯೆಗೆ ಕಾಲ್ ಗರ್ಲ್ ಗಳ ಸಹವಾಸಕ್ಕೆ ಇನ್ಮುಂದೆ ಹೋಗಬೇಡಿ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ರಾತ್ರಿಯ ಆಹಾರ ಕ್ರಮದಲ್ಲಿ ಈ ಬದಲಾವಣೆ ಮಾಡಿ, ತೂಕದಲ್ಲಿ ಬದಲಾವಣೆ ನೋಡಿ

ಏನಿದು ಮಂಗನ ಕಾಯಿಲೆ, ಇದರ ಲಕ್ಷಣಗಳೇನು, ಇಲ್ಲಿದೆ ಸಂಪೂರ್ಣ ವಿವರ

ಉತ್ತಮ ಆರೋಗ್ಯಕ್ಕೆ ಮಧ್ಯಾಹ್ನದ ಊಟದ ಸಮಯ ಹೀಗಿರಲಿ

ಉತ್ತಮ ಆರೋಗ್ಯಕ್ಕೆ ಊಟದ ಬಳಿಕ ಹೀಗಿರಲಿ ಚಟುವಟಿಕೆ

ಕುಕ್ಕರ್ ಬ್ಲಾಸ್ಟ್ ಆಗುವ ಸೂಚನೆ ಕೊಡುವ ಲಕ್ಷಣಗಳಿವು

ಮುಂದಿನ ಸುದ್ದಿ