Publish Date: Wed, 21 Nov 2018 (08:49 IST)
Updated Date: Wed, 21 Nov 2018 (08:50 IST)
ಬೆಂಗಳೂರು: ಒಂದು ಕಪ್ ಕಾಫಿ ಕುಡಿದರೆ ಸಿಗುವ ಮಜವೇ ಬೇರೆ ಎನ್ನುವವರು, ಕಾಫಿಯನ್ನು ಇನ್ನೊಂದು ರೀತಿಯಲ್ಲಿ ಹೇಗೆ ಬಳಸಬಹುದು ಎಂದು ತಿಳಿಯಿರಿ.
ಹೊಳೆಯುವ ಕೂದಲು ನಿಮ್ಮದಾಗಬೇಕಾದರೆ ಕಾಫಿ ಪೌಡರ್ ಬಳಸಬಹುದು. ಹೇಗೆ ಅಂತೀರಾ? ಇಲ್ಲಿ ನೋಡಿ.
ಹಾಲು ಬೆರೆಸದೆ ಕಾಫಿ ತಯಾರಿಸಿಕೊಳ್ಳಿ. ಇದನ್ನು ಸ್ವಲ್ಪ ಆರಲು ಬಿಡಿ. ನಂತರ ತಲೆ ಬಾಗಿದಂತೆ ಇಟ್ಟುಕೊಂಡು ಕೂದಲುಗಳಿಗೆ, ಕೂದಲಿನ ಬೇರಿನ ಭಾಗಕ್ಕೆ ಚೆನ್ನಾಗಿ ಹಚ್ಚಿಕೊಂಡು ಮಸಾಜ್ ಮಾಡಿ. ಕಾಫಿ ಕೂದಲಿನ ಬೇರು ಗಟ್ಟಿಗೊಳಿಸುವುದಲ್ಲದೆ, ಕೂದಲಿನ ಅಂಗಾಂಶಗಳಿಗೆ ಜೀವ ತುಂಬುವ ಕೆಲಸ ಮಾಡುತ್ತದೆ. ಹೀಗಾಗಿ ಸದೃಢ ಕೂದಲು ನಿಮ್ಮದಾಗುವುದಲ್ಲದೆ, ಕಾಂತಿಯುತವಾಗಿ ಕಂಗೊಳಿಸುವಂತೆ ಮಾಡುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.