Webdunia - Bharat's app for daily news and videos

Install App

ಮುಟ್ಟಾದಾಗ ಅಧಿಕ ರಕ್ತಸ್ರಾವವಾಗಲು ಕಾರಣ

Webdunia
ಶುಕ್ರವಾರ, 8 ಅಕ್ಟೋಬರ್ 2021 (14:43 IST)
ಅಧಿಕ ರಕ್ತಸ್ರಾವದಿಂದ ಪದೇ ಪದೇ ಪ್ಯಾಡ್ನ ಬದಲಾಯಿಸಬೇಕು. ಒಂದು ಗಂಟೆಗೊಮ್ಮೆ ಬದಲಾಯಿಸಬೇಕು. ಇದನ್ನು ವೈದ್ಯಕೀಯ ಭಾಷೆಯಲ್ಲಿ ಮೆನೊರ್ಹೇಜಿಯಾ ಎಂದು ಕರೆಯಲಾಗುತ್ತದೆ.

ಮುಟ್ಟಿನ ಸಮಯ ಬಂತೆಂದರೆ ಮಹಿಳೆಯರಿಗೆ ಒಂದು ರೀತಿ ಭಯ ಶುರುವಾಗುತ್ತದೆ. ಮುಟ್ಟಾದಾಗ ಆಗುವ ನೋವು ಯಾವ ಶತ್ರುಗೂ ಬೇಡ ಅಂತಾರೆ. ಹೊಟ್ಟೆ, ಸೊಂಟ ವಿಪರೀತವಾಗಿ ನೋವಾಗುತ್ತದೆ. ಹಾಗಂತ ಈ ಅನುಭವ ಎಲ್ಲರಿಗೂ ಆಗಲ್ಲ. ಕೆಲವರಿಗೆ ಮುಟ್ಟಾದಾಗ ಯಾವ ನೋವು ಕಾಣಿಸಿಕೊಳ್ಳಲ್ಲ. ಇನ್ನು ಕೆಲವರಿಗೆ ಎರಡರಿಂದ ಮೂರು ದಿನ ನೋವು ಇರುತ್ತದೆ. ಇದರ ಜೊತೆಗೆ ರಕ್ತಸ್ರಾವವೂ ಅಧಿಕವಾಗಿರುತ್ತದೆ. ಎಷ್ಟೇ ನೋವಾದರೂ ಪ್ರತಿ ತಿಂಗಳು ಇದನ್ನು ಅನುಭವಿಸಲೇ ಬೇಕು. ಇದನ್ನ ಅನಿಷ್ಟ ಅಂತ ಹೇಳಬಾರದು. ಪ್ರಕೃತಿ ನಿಯಮವಿದು.
ಅಧಿಕ ರಕ್ತಸ್ರಾವದಿಂದ ಪದೇ ಪದೇ ಪ್ಯಾಡ್ನ ಬದಲಾಯಿಸಬೇಕು. ಒಂದು ಗಂಟೆಗೊಮ್ಮೆ ಬದಲಾಯಿಸಬೇಕು. ಇದನ್ನು ವೈದ್ಯಕೀಯ ಭಾಷೆಯಲ್ಲಿ ಮೆನೊರ್ಹೇಜಿಯಾ ಎಂದು ಕರೆಯಲಾಗುತ್ತದೆ.

ಮೆನೊರ್ಹೇಜಿಯಾಕ್ಕೆ ಕಾರಣವೇನು?
* ಮೆನೊರ್ಹೇಜಿಯಾಕ್ಕೆ ಹಲವು ಕಾರಣಗಳಿವೆ. ಕೆಲವೊಮ್ಮೆ ಇದು ಹಾರ್ಮೋನ್ ಅಸಮತೋಲನದಿಂದಾಗಿ ಸಂಭವಿಸುತ್ತದೆ. ಮಹಿಳೆಯರ ಗರ್ಭಾಶಯದಲ್ಲಿ ಪ್ರತಿ ತಿಂಗಳು ಒಂದು ಪದರವು ರೂಪುಗೊಳ್ಳುತ್ತದೆ. ಈ ಪದರವು ಮುಟ್ಟಿನ ಸಮಯದಲ್ಲಿ ದೇಹದಿಂದ ರಕ್ತಸ್ರಾವದ ಮೂಲಕ ಹೊರಬರುತ್ತದೆ. ದೇಹದಲ್ಲಿ ಹಾರ್ಮೋನುಗಳ ಅಸಮತೋಲನ ಇದ್ದಾಗ ಈ ಪದರವು ತುಂಬಾ ದಪ್ಪವಾಗುತ್ತದೆ. ಆಗ ಇದು ಅಧಿಕ ರಕ್ತಸ್ರಾವದ ರೂಪದಲ್ಲಿ ಹೊರಬರುತ್ತದೆ.
* ಗರ್ಭಾಶಯದಲ್ಲಿ ಫೈಬ್ರಾಯ್ಡ್ಗಳು ಇರುವುದರಿಂದ ಕೆಲವೊಮ್ಮೆ ಅಧಿಕ ರಕ್ತಸ್ರಾವ ಪ್ರಾರಂಭವಾಗುತ್ತದೆ.
* ಗರ್ಭಾಶಯದಲ್ಲಿನ ಕ್ಯಾನ್ಸರ್ ಅಥವಾ ಅಂಡಾಶಯದಲ್ಲಿನ ಕ್ಯಾನ್ಸರ್ ಕೂಡ ಹೆಚ್ಚು ರಕ್ತಸ್ರಾವಕ್ಕೆ ಕಾರಣವಾಗಬಹುದು.
* ಹಾರ್ಮೋನ್ ಸಮಸ್ಯೆಯಿದ್ದಾಗ ಔಷಧಿಗಳನ್ನು ತೆಗೆದುಕೊಳ್ಳಲು ತಜ್ಞರು ಸೂಚಿಸುತ್ತಾರೆ. ವೈದ್ಯರು ನೀಡಿದ ಕೆಲ ಸಲಹೆಗಳನ್ನು ಚಾಚು ತಪ್ಪದೆ ಪಾಲಿಸಬೇಕು. ಆಗ ಮಾತ್ರ ಮೆನೊರ್ಹೇಜಿಯಾ ಸಮಸ್ಯೆಯನ್ನು ದೂರ ಮಾಡಬಹದು.
* ರಕ್ತಸ್ರಾವ ಅಧಿಕವಾಗುತ್ತಿದ್ದರೆ ಅಂತವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ. ಶಸ್ತ್ರಚಿಕಿತ್ಸೆಯಲ್ಲಿ ಗರ್ಭಾಶಯವನ್ನು ತೆಗೆಯಬಹುದು. ಆ ಬಳಿಕ ಮುಟ್ಟಾಗುವುದು ನಿಲ್ಲುತ್ತದೆ.
ಮನೆಮದ್ದುಗಳು ಇಲ್ಲಿವೆ

* ಸಾಸಿವೆಯನ್ನು ಚೆನ್ನಾಗಿ ಪುಡಿ ಮಾಡಿ. ಮುಟ್ಟಿನ ವೇಳೆ ಅಧಿಕ ರಕ್ತಸ್ರಾವವಾಗುತ್ತಿದ್ದರೆ, ಒಂದು ಚಮಚ ಸಾಸಿವೆ ಪುಡಿಯನ್ನು ತಣ್ಣಗಿರುವ ಹಾಲಿನೊಂದಿಗೆ ಸೇರಿಸಿ ಕುಡಿಯಿರಿ.
* ಜೀರಿಗೆಯನ್ನು ಪುಡಿ ಮಾಡಿ. ಎರಡು ಚಮಚ ಜೀರಿಗೆ ಪುಡಿಯನ್ನು ಒಂದು ಲೋಟ ನೀರಿನೊಂದಿಗೆ ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಅದನ್ನು ಸೋಸಿ, ಕುಡಿಯಿರಿ. ಕುಡಿಯುವಾಗ ಜೀರಿಗೆ ನೀರು ಬಿಸಿಯಾಗಿರಬೇಕು.
* ಒಂದು ಬಟ್ಟೆ ಅಥವಾ ಟವೆಲ್ಗೆ ಐಸ್ ಕ್ಯೂಬ್ಗಳನ್ನು ಹಾಕಿ. ಅದನ್ನು ಚೆನ್ನಾಗಿ ಹೊಟ್ಟೆಗೆ ಕಟ್ಟಿಕೊಳ್ಳಿ. ಹೊಟ್ಟೆಯ ಕೆಳಭಾಗದಲ್ಲಿ 15 ರಿಂದ 20 ನಿಮಿಷಗಳ ಕಾಲ ಇರಿಸಿ.
* ಒಂದು ಚಮಚ ಮೆಂತ್ಯ ಬೀಜವನ್ನು ಎರಡು ಕಪ್ ನೀರಿನಲ್ಲಿ ಕುದಿಸಿ. ನೀರು ಅರ್ಧದಷ್ಟು ಉಳಿದಿರುವಾಗ ಸೋಸಿ. ಅದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಕುಡಿಯಿರಿ. ಇದನ್ನು ದಿನಕ್ಕೆ ಎರಡು ಮೂರು ಬಾರಿ ಕುಡಿಯಬೇಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

ಹೀಗೇ ಮಾಡಿದರೆ ಮಕ್ಕಳಲ್ಲಿ ಕಟ್ಟುನಿಟ್ಟಾಗಿರದೆ ಶಿಸ್ತುಬದ್ಧವಾಗಿ ಬೆಳೆಸಬಹುದು

Men health: ಪುರುಷರಲ್ಲಿ ಬಂಜೆತನ ನಿವಾರಣೆಯಾಗಬೇಕೆಂದರೆ ಇದೊಂದು ಜ್ಯೂಸ್ ಸಾಕು

ಮುಂದಿನ ಸುದ್ದಿ
Show comments