Select Your Language

Notifications

webdunia
webdunia
webdunia
webdunia

ಕ್ಯಾರೆಟ್ ಉಪ್ಪಿನಕಾಯಿ

ಕ್ಯಾರೆಟ್ ಉಪ್ಪಿನಕಾಯಿ
ಬೆಂಗಳೂರು , ಶುಕ್ರವಾರ, 21 ಆಗಸ್ಟ್ 2020 (08:45 IST)
ಬೆಂಗಳೂರು : ಕ್ಯಾರೆಟ್ ನಿಂದ ಪಲ್ಯ, ಸಾಂಬಾರು ಹಲವು ಬಗೆಯ ಅಡುಗೆಗಳನ್ನು ಮಾಡಬಹುದು. ಅದೇರೀತಿ ಕ್ಯಾರೆಟ್ ನಿಂದ ತಯಾರಿಸಿದ ಉಪ್ಪಿನಕಾಯಿ ಕೂಡ ಊಟದ ರುಚಿಯನ್ನು ಹೆಚ್ಚಿಸುತ್ತದೆ.

ಬೇಕಾಗುವ ಸಾಮಾಗ್ರಿಗಳು :  ½ ಕಪ್ ಕ್ಯಾರೆಟ್ ಪೀಸ್,  ¼ ಚಮಚ ಹುರಿದ ಮೆಂತ್ಯ ಪುಡಿ, ¼ ಚಮಚ ಅರಿಶಿನ, 1/ ಚಮಚ ಜೀರಿಗೆ ಪುಡಿ, 1 ಚಮಚ ಉಪ್ಪು,  ನಿಂಬೆ ರಸ, 1 ಚಮಚ ಕೆಂಪು ಮೆಣಸಿನ ಪುಡಿ, 1 ಚಮಚ ಎಣ್ಣೆ, ¼ ಚಮಚ ಸಾಸಿವೆ, ಚಿಟಿಕೆ ಇಂಗು.

ಮಾಡುವ ವಿಧಾನ : ಕ್ಯಾರೆಟ್ ಪೀಸ್ ಗೆ  ಮೆಂತ್ಯ ಪುಡಿ, ಅರಿಶಿನ, ಜೀರಿಗೆ ಪುಡಿ, ಉಪ್ಪು, ಕೆಂಪು ಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಆಮೇಲೆ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಇಂಗು ಹಾಕಿದ ಒಗ್ಗರಣೆ ಈ ಕ್ಯಾರೆಟ್ ಮಿಶ್ರಣಕ್ಕೆ ಹಾಕಿದರೆ ಕ್ಯಾರೆಟ್ ಉಪ್ಪಿನಕಾಯಿ ರೆಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದಲ್ಲಿ ನಾಲ್ಕು ಜನರಲ್ಲಿ ಒಬ್ಬರಿಗೆ ಕೊರೋನಾ ಗ್ಯಾರಂಟಿ!