ಒಮ್ಮೆ ಮೋಸ ಮಾಡಿದ ಬಾಯ್ ಫ್ರೆಂಡ್ ಗೆ ಮತ್ತೊಮ್ಮೆ ಅವಕಾಶ ನೀಡಬಹುದೇ?

Webdunia
ಬುಧವಾರ, 13 ಮಾರ್ಚ್ 2019 (07:03 IST)
ಪ್ರಶ್ನೆ : ಹಾಯ್. ನಾನು 9 ವರ್ಷದಿಂದ ನನ್ನ ಬಾಯ್ ಫ್ರೆಂಡ್ ಜೊತೆ ಡೇಟಿಂಗ್ ನಲ್ಲಿದ್ದೆ. ನಮ್ಮ ಪ್ರೀತಿ ಪ್ರಾಮಾಣಿಕವಾಗಿತ್ತು. ಆದರೆ ಕಳೆದ 1 ವರ್ಷದ ಹಿಂದೆ ಆತ ನನಗೆ ಮೋಸ ಮಾಡಿ ಬೇರೆಯವರ ಜೊತೆ ಸಂಬಂಧ ಹೊಂದಿದ್ದನು. ಆದರೆ ಈಗ ಆತ ಮತ್ತೆ ನನ್ನ ಬಳಿ ಬಂದು ಕ್ಷಮೆ ಕೇಳಿ ಮತ್ತೊಂದು ಅವಕಾಶ ಕೊಡು ಎಂದು ಕೇಳುತ್ತಿದ್ದಾನೆ. ನಿಜ ಹೇಳಬೇಕೆಂದರೆ ಅವನಿಲ್ಲದೆ ನನ್ನ ಜೀವನವನ್ನು ಊಹಿಸಲು ಸಾಧ್ಯವಿಲ್ಲ. ಕಳೆದ ವಾರ ಆತ ನನ್ನ ಜೊತೆ ಮದುವೆ ಪ್ರಸ್ತಾಪ ಮಾಡಿದ್ದಾನೆ. ಈಗ ನಾನು ಏನು ಮಾಡಬೇಕು? ಆತ ಮತ್ತೆ ನನಗೆ ಮೋಸ ಮಾಡುತ್ತಾನಾ?-


ಉತ್ತರ : ದೀರ್ಘ ಕಾಲದ ಸಂಬಂಧಗಳಲ್ಲಿ ಸಮಸ್ಯೆಗಳು ಸಾಮಾನ್ಯ. ಜೀವನದಲ್ಲಿ ಆಗಾಗ ಸವಾಲುಗಳು ಎದುರಾಗುತ್ತಿರುತ್ತದೆ. ಅಂತಹ ಪರಿಸ್ಥಿತಿಗಳನ್ನು ನಿಮ್ಮ ಸಂಗಾತಿಯೊಂದಿಗೆ ನೀವು ಹೇಗೆ ನಿಭಾಯಿಸುತ್ತಿರಿ ಎನ್ನುವುದು ಮುಖ್ಯ. ಮದುವೆ ಒಂದು ಬಿಡಿಸಲಾಗದ ಬಂಧನವಾಗಿದ್ದು, ಇಲ್ಲಿ ಇಬ್ಬರು ತಮ್ಮನ್ನು ತಾವು ಅರ್ಪಿಸಿಕೊಳ್ಳಬೇಕು. ಹಾಗೇ ಜೊತೆಯಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.


ನಿಮಗೆ ಈ ಹಿಂದೆ ಆತ ಮೋಸ ಮಾಡಿದ್ದರಿಂದ  ಆತನ ಜೊತೆ ಸಂಬಂಧ ಮುಂದುವರಿಸಲು ಹೆದರುತ್ತಿದ್ದೀರಿ. ಹಾಗೇ ಮದುವೆ ಪ್ರಸ್ತಾಪವನ್ನು ಒಪ್ಪಿಕೊಳ್ಳಬೇಕೆ? ಬೇಡವೇ ಎಂಬ ಗೊಂದಲದಲ್ಲಿದ್ದೀರಿ. ಆದ್ದರಿಂದ ನೀವು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು.
ಆದರೆ ಮೊದಲಿನೇಯದಾಗಿ ನಾನು ಸಲಹೆ ನೀಡುವುದೆನೆಂದರೆ  ಆತನಿಲ್ಲದೇ ನಿಮ್ಮ ಜೀವನ ಊಹಿಸಲು ಸಾಧ್ಯವಿಲ್ಲ ನೀವು  ಭಾವಿಸಬಾರದು. ಎರಡನೇಯದಾಗಿ ಅವನ ಬಗ್ಗೆ ಇರುವ ನಿಮ್ಮ ಅನುಮಾನವನ್ನು ವ್ಯಕ್ತಪಡಿಸಿ ಇಬ್ಬರ ಸಂಬಂಧ ಗಟ್ಟಿಯಾಗಿರಬೇಕೆಂಬ ನಿಟ್ಟಿನಲ್ಲಿ ಕೆಲವು   ನಿಯಮಗಳನ್ನು ಹಾಕಿಕೊಳ್ಳಿ. ಕೊನೆಯದಾಗಿ ಮದುವೆಗೆ ಮುನ್ನ ಕೌನ್ಸಲಿಂಗ್ ನ್ನು ತೆಗೆದುಕೊಳ್ಳಿ


ಭವಿಷ್ಯದಲ್ಲಿ ಅವರು ನಿಮಗೆ ಮೋಸ ಮಾಡುತ್ತಾರೆಯೇ ಇಲ್ಲವೇ ಎಂದು ಹೇಳಲು ಸಾಧ್ಯವಿಲ್ಲ. ಆದರೆ ನೀವು ಆತನ ಜೊತೆಯಲ್ಲಿ  ಇರಬೇಕೆಂದುಕೊಂಡಿದ್ದರೆ  ನೀವು ಆಯ್ಕೆ ಮಾಡಿದ ದಾರಿಯಲ್ಲಿ ಆರಾಮವಾಗಿ ಜೀವನ ಸಾಗಿಸಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಈ ಸಂದರ್ಭದಲ್ಲಿ ಕೈಗೆ ಮೆಹಂದಿ ಹಾಕಿಕೊಳ್ಳಬಾರದು

ಚಳಿಗಾಲದಲ್ಲಿ ಜೀರ್ಣ ಶಕ್ತಿ ಹೆಚ್ಚಿಸಲು ಏನು ಮಾಡಬೇಕು

ಮದುವೆಯಾಗುವಾಗ ವಯಸ್ಸಿನಲ್ಲಿ ಹುಡುಗಿ ದೊಡ್ಡಳಾಗಿದ್ರೆ ಏನ್ ಸಮಸ್ಯೆ, ಡಾ.ಪದ್ಮಿನಿ ಪ್ರಸಾದ್‌ ಏನ್‌ ಹೇಳ್ತಾರೆ

ಚಳಿಗಾಲದಲ್ಲಿ ಈ ತರಕಾರಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿ, ಭಾರೀ ಪ್ರಯೋಜನ ಪಡೆದುಕೊಳ್ಳಿ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಮುಂದಿನ ಸುದ್ದಿ
Show comments