ಆಲೂಗಡ್ಡೆಯಿಂದ ಈ ಸಮಸ್ಯೆಗಳು ಕಾಡಬಹುದು ಎಚ್ಚರ!

Webdunia
ಶುಕ್ರವಾರ, 5 ನವೆಂಬರ್ 2021 (21:31 IST)
ಆಲೂಗಡ್ಡೆಇದನ್ನು ಸೇವನೆ ಮಾಡಿದರೆ ಅದು ಆರೋಗ್ಯಕ್ಕೆ ಹಲವಾರು ರೀತಿಯಿಂದ ನೆರವಾಗುವುದು.
ಕೆಲವರು ನಿತ್ಯವೂ ತಮ್ಮ ಆಹಾರ ಕ್ರಮದಲ್ಲಿ ಬಟಾಟೆ ಸೇವನೆ ಮಾಡುವರು. ಆದರೆ ಅತಿಯಾದರೆ ಅಮೃತವು ವಿಷ ಎನ್ನುವ ಮಾತಿನಂತೆ ಆಲೂಗಡ್ಡೆಯನ್ನು ಕೂಡ ಅತಿಯಾಗಿ ಸೇವನೆ ಮಾಡಿದರೆ ಅದರಿಂದ ಸಮಸ್ಯೆಗಳು ಕಂಡುಬರುವುದು.
ಆಲೂಗಡ್ಡೆಯಲ್ಲಿ ವಿಟಮಿನ್ ಗಳು, ಖನಿಜಾಂಶಗಳು, ಆಂಟಿಆಕ್ಸಿಡೆಂಟ್ ಗಳೂ, ಪೈಥೋನ್ಯೂಟ್ರಿಯೆಂಟ್ಸ್ ಮತ್ತು ಆಹಾರದ ನಾರಿನಾಂಶವು ಇದೆ. ಆದರೆ ಇದನ್ನು ಮಿತವಾಗಿ ಸೇವನೆ ಮಾಡಬೇಕು. ಇಲ್ಲವಾದಲ್ಲಿ ಅದರಿಂದ ವ್ಯತಿರಿಕ್ತ ಪರಿಣಾಮ ಬೀರುವುದು. ಅಂತಹ ಕೆಲವು ಅಡ್ಡಪರಿಣಾಮಗಳು ಯಾವುದು ಎಂದು ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ.
ತೂಕ ನಿರ್ವಹಣೆ
ಆಲೂಗಡ್ಡೆಯಿಂದ ಬೊಜ್ಜು ಆವರಿಸುವ ಸಾಧ್ಯತೆಯು ಇರುವುದು. ಹೀಗಾಗಿ ಬೊಜ್ಜು ಇರುವಂತಹ ಜನರು ಆಲೂಗಡ್ಡೆ ಸೇವನೆ ಕಡಿಮೆ ಮಾಡಬೇಕು. ತೂಕ ಇಳಿಸಲು ಬಯಸುವವರು ಆಲೂಗಡ್ಡೆ ಸೇವನೆ ಕಡಿಮೆ ಮಾಡಬೇಕು. ನೂರು ಗ್ರಾಂ ಆಲೂಗಡ್ಡೆಯಲ್ಲಿ 77 ಕ್ಯಾಲರಿ ಇದೆ. ಅದೇ ರಿತಿಯಲ್ಲಿ ಇದು ಕೊಬ್ಬು ಮತ್ತು ಕೊಲೆಸ್ಟ್ರಾಲ್ ನಿಂದ ಮುಕ್ತವಾಗಿದೆ.
ಜೀರ್ಣಕ್ರಿಯೆ
ಆಲೂಗಡ್ಡೆಯು ಜೀರ್ಣಕ್ರಿಯೆ ಆರೋಗ್ಯವನ್ನು ಸುಧಾರಣೆ ಮಾಡುವುದು. ಇದರಲ್ಲಿ ಇರುವಂತಹ ವಿಟಮಿನ್ ಸಿ ಮತ್ತು ಇತರ ಕೆಲವು ಆಂಟಿಆಕ್ಸಿಡೆಂಟ್ ಗಳು ಜೀರ್ಣಕ್ರಿಯೆ ವ್ಯವಸ್ಥೆಯನ್ನು ಹಲವಾರು ಬಗೆಯ ಕ್ಯಾನ್ಸರ್ ನ ಅಪಾಯದಿಂದ ರಕ್ಷಿಸುವುದು. ಇದರಲ್ಲಿ ಇರುವಂತಹ ವಿರೇಚಕ ಗುಣವು ಕರುಳಿನ ಕ್ರಿಯೆ ಸುಧಾರಣೆ ಮಾಡುವುದು ಮತ್ತು ಮಲಬದ್ಧತೆ ನಿವಾರಿಸುವುದು.
ಅಧಿಕ ರಕ್ತದೊತ್ತಡ
ಅಧಿಕ ರಕ್ತದೊತ್ತಡದಿಂದಾಗಿ ಇಂದಿನ ದಿನಗಳಲ್ಲಿ ಲಕ್ಷಾಂತರ ಮಂದಿ ಬಳಲುತ್ತಿರುವರು. ಇದರಿಂದಾಗಿ ಅಪಧಮನಿ ಕಾಯಿಲೆಗಳು ಮತ್ತು ಇತರ ಆರೋಗ್ಯ ಸಮಸ್ಯೆಗಳು ಕಾಡುವುದು. ಆಲೂಗಡ್ಡೆಯಲ್ಲಿ ಪೊಟಾಶಿಯಂ ಅಂಶವಿದ್ದು, ಇದು ರಕ್ತನಾಳಗಳಿಗೆ ಆರಾಮ ನೀಡುವುದು ಮತ್ತು ರಕ್ತ ಸಂಚಾರವನ್ನು ಸುಧಾರಣೆ ಮಾಡುವುದು ಹಾಗೂ ಅಧಿಕ ರಕ್ತದೊತ್ತಡ ಕಡಿಮೆ ಮಾಡುವುದು.
ಕ್ಯಾನ್ಸರ್ ಅಪಾಯ
ಅತಿಯಾದ ಆಂಟಿಆಕ್ಸಿಡೆಂಟ್ ನಿಂದ ಕ್ಯಾನ್ಸರ್ ಅಪಾಯವು ಹೆಚ್ಚಾಗಬಹುದು. ಇದರಿಂದ ಮಿತ ಪ್ರಮಾಣದಲ್ಲಿ ಬಟಾಟೆ ಸೇವನೆ ಮಾಡಿದರೆ ಒಳ್ಳೆಯದು. ಇದು ಅಂಗಾಂಶಗಳನ್ನು ರಕ್ಷಣೆ ಮಾಡುವುದು.
ಮಧುಮೇಹ
ಆಲೂಗಡ್ಡೆಯು ಗ್ಲೈಸೆಮಿಕ್ಸ್ ಇಂಡೆಕ್ಸ್ 78 ಆಗಿದ್ದು, ಇದು ರಕ್ತನಾಳಕ್ಕೆ ಬೇಗನೆ ಸಕ್ಕರೆಯನ್ನು ಬಿಡುಗಡೆ ಮಾಡುವುದು. ಇದರಿಂದ ರಕ್ತದಲ್ಲಿ ಸಕ್ಕರೆ ಮಟ್ಟವು ಏರಿಕೆ ಆಗುವುದು. ಆಲೂಗಡ್ಡೆಯಲ್ಲಿ ಇರುವಂತಹ ಕಾರ್ಬೋಹೈಡ್ರೇಟ್ಸ್ ಅಂಶವು ಗ್ಲುಕೋಸ್ ನ್ನು ವಿಘಟಿಸುವುದು ಮತ್ತು ರಕ್ತನಾಳದಲ್ಲಿನ ಸಕ್ಕರೆ ಮಟ್ಟವನ್ನು ವೃದ್ಧಿಸುವುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಕ್ಕಳು ಹೀಗಿದ್ದರೆ ಉದಾಸೀನ ಬೇಡ

ಮುಂದಿನ ಸುದ್ದಿ
Show comments