ನೀವು ಮಾಂಸಾಹಾರ ಸೇವನೆಗೆ ಆಧ್ಯತೆ ನೀಡುತ್ತೀರಾ? ಎಚ್ಚರ ನಿಮ್ಮ ಆಹಾರ ಪದ್ಧತಿ ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು.
ಸಸ್ಯಾಹಾರ ಆಹಾರ ಪದ್ಧತಿ ರೂಡಿಸಿಕೊಂಡಿರುವವರ ಜೀವಿತಾವಧಿಗಿಂತ ಮಾಂಸಾಹಾರ ಆಹಾರ ಪದ್ಧತಿ ರೂಡಿಸಿಕೊಂಡಿರುವವರ ಜೀವಿತಾವಧಿ ಕಡಿಮೆ ಎಂದು ಸಂಶೋಧನೆಯಿಂದ ಬಹಿರಂಗವಾಗಿದೆ.
ಅರಿಜೋನಾದ ಮಾಯೊ ಕ್ಲಿನಿಕ್ ವೈದ್ಯರು ಈ ಸಂಶೋಧನೆಯನ್ನು ಕೈಗೊಂಡಿದ್ದು, 1.5 ಮಿಲಿಯನ್ ಜನರನ್ನು ಬಳಸಿಕೊಂಡು ಅಂಕಿ ಅಂಶಗಳನ್ನು ಸಿದ್ದ ಪಡಿಸಲಾಗಿದೆ. ಈ ಸಂಶೋಧನೆಯಿಂದ ಪ್ರತಿ ದಿನ ಕೆಂಪು ಅಥವಾ ಸಂಸ್ಕರಿತ ಮಾಂಸಾಹಾರ ಸೇವಿಸುವವರ ಮರಣ ಪ್ರಮಾಣ ಹೆಚ್ಚು ಎಂದು ತಿಳಿದುಬದಿಂದೆ.
ಮಾಂಸಾಹಾರ ಸಸ್ಯಾಹಾರ ಆಹಾರ ಪದ್ಧತಿಯ ಮರಣ ಪ್ರಮಾಣ ಕುರಿತು ಆರು ಸಂಶೋಧನೆಗಳು ನಡೆದಿದ್ದು, ಸಂಶೋಧಕರು ಆದಷ್ಟು ಮಾಂಸಾಹಾರವನ್ನು ತ್ಯಜಿಸಿ ಸಸ್ಯಾಹಾರ ಆಹಾರ ಪದ್ಧತಿಯನ್ನು ರೂಡಿಸಿಕೊಳ್ಳುವಂತೆ ವೈದ್ಯರುಗಳು ತಮ್ಮ ರೋಗಿಗಳಿಗೆ ಸಲಹೆ ನೀಡಬೇಕು ಎಂದು ಸೂಚಿಸಿದ್ದಾರೆ.
ಅಲ್ಪಾವಧಿ ಸಸ್ಯಾಹಾರ ಆಹಾರ ಪದ್ಧತಿ ರೂಡಿಸಿಕೊಂಡವರಿಗೆ ಹೋಲಿಸಿದರೆ, 17 ವರ್ಷ ಅವಧಿಯಿಂದ ಸಸ್ಯಾಹಾರ ಸೇವಿಸುತ್ತಿರುವವರ ಜೀವಿತಾವಧಿ 3.6 ವರ್ಷದಷ್ಟು ಹೆಚ್ಚಳ ಎಂದು ವಿಮರ್ಶಕರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ