Select Your Language

Notifications

webdunia
webdunia
webdunia
webdunia

ಸಿಹಿ ಗೆಣಸಿನ ಜ್ಯೂಸ್ ಕುಡಿದರೆ ಆಗುವ ಪ್ರಯೋಜನವೇನು ಗೊತ್ತಾ...?

ಸಿಹಿ ಗೆಣಸಿನ ಜ್ಯೂಸ್ ಕುಡಿದರೆ ಆಗುವ ಪ್ರಯೋಜನವೇನು ಗೊತ್ತಾ...?
ಬೆಂಗಳೂರು , ಭಾನುವಾರ, 28 ಜನವರಿ 2018 (06:23 IST)
ಬೆಂಗಳೂರು: ಸಿಹಿ ಗೆಣಸು ಪೌಷ್ಟಿಕಾಂಶಗಳ ಆಗರವಾಗಿದೆ. ಗೆಣಸಿನಲ್ಲಿ ನಾರಿನಾಂಶ ಜಾಸ್ತಿಯಾಗಿದೆ. ಇದರಿಂದ ಮಲಬದ್ಧತೆ ಕೂಡ ನಿವಾರಿಸಬಹುದು.


ಗೆಣಸನ್ನು ಕತ್ತರಿಸಿ ಅದನ್ನು ರುಬ್ಬಿಕೊಂಡು ರಸ ಹಿಂಡಬೇಕು. ಸ್ವಲ್ಪ ಹೆಚ್ಚು ರುಚಿ ಬರಲು ಕ್ಯಾರೆಟ್‌ ಮತ್ತು ಶುಂಠಿ ಸೇರಿಸಬಹುದು.
ಗೆಣಸಿನಲ್ಲಿ ವಿಟಮಿನ್‌ ಸಿ, ಬಿ2, ಬಿ6, ಇ ಮತ್ತು ಬಿಯೋಟಿನ್‌ ಸಮೃದ್ಧವಾಗಿದೆ. ಇದರಲ್ಲಿ ಪಾಂಟೊಥೆನಿಕ್‌ ಆಮ್ಲ ಇದೆ. ಕಡಿಮೆ ಕ್ಯಾಲೊರಿ ಮತ್ತು ಅಧಿಕ ಪ್ರೋಟೀನ್‌ ಇದೆ.


ಹಲ್ಲುಗಳು, ಮೂಳೆ, ಚರ್ಮ, ನರಗಳು ಮತ್ತು ಥೈರಾಯ್ಡ್‌ ಗ್ರಂಥಿಗಳ ಆರೋಗ್ಯಕ್ಕೆ ವಿಟಮಿನ್‌ ಡಿ ಪ್ರಾಮುಖ್ಯವಾಗಿದೆ. ಇದರಲ್ಲಿರುವ ವಿಟಮಿನ್‌ ಡಿ ಮೂಳೆಗಳನ್ನು ಆರೋಗ್ಯವಾಗಿಡುವುದು.


ಗೆಣಸಿನಲ್ಲಿ ನಾರಿನಂಶ ಅಧಿಕವಾಗಿರುವುದರಿಂದ ಕರುಳನ್ನು ಸ್ವಚ್ಛ ಮಾಡುವುದು ಮತ್ತು ನಾರಿನಂಶವು ಆರೋಗ್ಯಕರ ಜೀರ್ಣಕ್ರಿಯೆಗೆ ನೆರವಾಗುವುದು. ಇದು ಮಲಬದ್ಧತೆಗೂ ಸಹಕಾರಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದೇಹಕ್ಕೆ ಹಿತ ನೀಡುವ ಈ ಪಾನಕಗಳನ್ನು ಮಾಡಿ ಸವಿಯಿರಿ