Select Your Language

Notifications

webdunia
webdunia
webdunia
webdunia

ಒಣ ಖರ್ಜೂರ ತಿಂದರೆ ಹೀಗೂ ಆಗುತ್ತದೆ!

ಒಣ ಖರ್ಜೂರ ತಿಂದರೆ ಹೀಗೂ ಆಗುತ್ತದೆ!
ಬೆಂಗಳೂರು , ಸೋಮವಾರ, 30 ಅಕ್ಟೋಬರ್ 2017 (08:33 IST)
ಬೆಂಗಳೂರು: ಒಣ ಹಣ್ಣುಗಳ ಪೈಕಿ ಒಣ ಖರ್ಜೂರ ಸೇವನೆಯೂ ನಮ್ಮ ದೇಹಕ್ಕೆ ಹಲವು ಆರೋಗ್ಯಕರ ಅಂಶಗಳನ್ನು ಒದಗಿಸುತ್ತದೆ. ಅವು ಯಾವುವು ಎಂದು ಗೊತ್ತಾಗಬೇಕಾದರೆ ಇದನ್ನು ಓದಿ.

 
ಹೃದಯ
ಒಣ ಖರ್ಜೂರದಲ್ಲಿ ಕೊಬ್ಬಿನಂಶ ಕಡಿಮೆ. ಹಾಗಾಗಿ ಇದು ಹೃದಯಕ್ಕೆ ಒಳ್ಳೆಯದು.  ಅಲ್ಲದೆ ಇವುಗಳಲ್ಲಿ ಬೇಡದ ಕೊಬ್ಬಿನಂಶ ನಿಯಂತ್ರಿಸುವ ಗುಣವೂ ಇದೆಯಂತೆ.

ಜೀರ್ಣಕ್ರಿಯೆಗೆ
ಒಣ ಖರ್ಜೂರದಲ್ಲಿ ಆಂಟಿ ಆಕ್ಸಿಡೆಂಟ್ ಗುಣವಿದ್ದು, ಇದು ಜೀರ್ಣ ಪ್ರಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಇದರಿಂದ ತೂಕ ಕಳೆದುಕೊಳ್ಳಲು ಬಯಸುವವರೂ ಇದನ್ನು ಸೇವಿಸಬಹುದು.

ಎಲುಬು
ಒಣ ಖರ್ಜೂರದಲ್ಲಿ ಕ್ಯಾಲ್ಶಿಯಂ ಅಂಶ ಹೇರಳವಾಗಿದೆ. ಹಾಗಾಗಿ ಇದು ಎಲುಬು ಮತ್ತು ಹಲ್ಲು ಗಟ್ಟಿಗೊಳಿಸಲು ಉತ್ತಮ. ಅಷ್ಟೇ ಅಲ್ಲದೆ, ಪ್ರತಿ ನಿತ್ಯ ಇದನ್ನು ಸೇವಿಸುವುದರಿಂದ ಕ್ಯಾಲ್ಶಿಯಂ ಕೊರತೆಯಿಂದ ಬರುವ ಆರ್ಥರೈಟಿಸ್ ಸಮಸ್ಯೆಗಳಿಂದಲೂ ಮುಕ್ತಿ ಪಡೆಯಬಹುದು.

ಶಕ್ತಿವರ್ಧಕ
ಕ್ರೀಡಾಳುಗಳು, ದೈಹಿಕವಾಗಿ ಶ್ರಮ ವಹಿಸುವವರು ಇದನ್ನು ಸೇವಿಸುವುದು ಒಳ್ಳೆಯದು. ಇದರಲ್ಲಿ ನೈಸರ್ಗಿಕ ಸಕ್ಕರೆಯಿದ್ದು, ದೇಹಕ್ಕೆ ಶಕ್ತಿ ಒದಗಿಸುತ್ತದೆ.

ಕೂದಲು ಮತ್ತು ಚರ್ಮಕ್ಕೆ
ಇದರಲ್ಲಿ ವಿಟಮಿನ್ ಬಿ5 ಹೇರಳವಾಗಿದ್ದು, ಇದು ಚರ್ಮ ಸುಕ್ಕುಗಟ್ಟುವಿಕೆ ತಡೆಯುವುದಲ್ಲದೆ, ಕೂದಲಿನ ಆರೋಗ್ಯವನ್ನೂ ಕಾಪಾಡುವ ಗುಣ ಹೊಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಒಣ ಚರ್ಮ ನಿಮ್ಮದಾಗಿದ್ದರೆ ಈ ಆಹಾರ ಸೇವಿಸಿ