Select Your Language

Notifications

webdunia
webdunia
webdunia
webdunia

ಮೈಕ್ರೋವೇವ್ ಓವನ್ ನಲ್ಲಿ ಆಹಾರ ಬಿಸಿ ಮಾಡುತ್ತೀರಾ? ಹಾಗಿದ್ದರೆ ಹುಷಾರ್!

ಮೈಕ್ರೋವೇವ್ ಓವನ್ ನಲ್ಲಿ ಆಹಾರ ಬಿಸಿ ಮಾಡುತ್ತೀರಾ? ಹಾಗಿದ್ದರೆ ಹುಷಾರ್!
ಬೆಂಗಳೂರು , ಶನಿವಾರ, 28 ಅಕ್ಟೋಬರ್ 2017 (08:07 IST)
ಬೆಂಗಳೂರು: ಆಹಾರ ತಣ್ಣಗಾಗಿದ್ದರೆ ಮೈಕ್ರೋವೇವ್ ಓವನ್ ಬಳಸಿ ಬಿಸಿ ಮಾಡಿ ಸೇವಿಸುತ್ತೇವೆ. ಆದರೆ ಹೀಗೆ ಮಾಡುವುದಕ್ಕಿಂತ ಮೊದಲು ಅದರಿಂದ ನಮ್ಮ ಆರೋಗ್ಯದ ಮೇಲೆ ಅದು ಎಂತಹಾ ಪರಿಣಾಮ ಬೀರುತ್ತದೆ ಎಂದು ನೋಡೋಣ.

 
ಮೈಕ್ರೋವೇವ್ ನ ಒಳಗೆ ಆಹಾರ ಇಟ್ಟು ಬಟನ್ ಒತ್ತಿದಾಗ ಅದು ಎಲೆಕ್ಟ್ರೋಮ್ಯಾಗ್ನೆಟಿಕ್ ರೇಡಿಯೇಷನ್ ಬಿಡುಗಡೆ ಮಾಡುತ್ತವೆ. ಇದರಲ್ಲಿ ಪ್ರತಿ ನಿಮಿಷಕ್ಕೆ 2,500 ಮೆಗಾಹರ್ಟ್ಸ್  ವೇಗದಲ್ಲಿ ವೈಬ್ರೇಟ್ ಆಗುತ್ತದೆ. ಇದು ಒಂದು ಮೊಬೈಲ್ ತರಂಗಾಂತರಗಳಿಗೆ ಸಮ.

ಈ ಓವನ್ ನಲ್ಲಿ ಬಿಸಿ ಮಾಡಿದ ಆಹಾರ ಸೇವಿಸುವುದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತಗೊಳ್ಳುತ್ತದೆ. ಹುಟ್ಟು ವೈಕಲ್ಯಗಳು, ಕ್ಯಾನ್ಸರ್ ಸಾಧ್ಯತೆಯೂ ಇರುತ್ತದೆ. ಅಲ್ಲದೆ, ಮೈಕ್ರೋ ಓವನ್ ನಲ್ಲಿ ಅಧಿಕ ಸಮಯ ಆಹಾರ ಇಡುವುದರಿಂದ ಮೆದುಳಿಗೂ ತೊಂದರೆಯಾಗುತ್ತದೆ ಎಂದು ಸಂಶೋಧನೆಯೊಂದರಿಂದ ತಿಳಿದುಬಂದಿದೆ.

ಹಾಗಾಗಿ ಆದಷ್ಟು ಮೈಕ್ರೋ ಓವನ್ ನಲ್ಲಿ ಬಿಸಿ ಮಾಡುವ ಪದ್ಧತಿ  ಬಿಡುವುದು ಒಳ್ಳೆಯದು. ಒಂದು ವೇಳೆ ಅನಿವಾರ್ಯವಾದರೆ, ಬಿಸಿ ಮಾಡುವಾಗ ಅದನ್ನು ತಿರುವುದು, ಅಗತ್ಯಕ್ಕಿಂತ ಹೆಚ್ಚು ಸಮಯ ಬಿಸಿ ಮಾಡಲು ಇಡುವುದು ಮಾಡಬೇಡಿ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗೋಡಂಬಿ ತಿನ್ನುವುದರ ಲಾಭವೇನು ಗೊತ್ತಾ?