ರಾತ್ರಿ ಬೆಡ್ ಮೇಲೆ ಇದ್ದಾಗ ನಿಮ್ಮ ಸಂಗಾತಿಯ ಜೊತೆ ಈ ವಿಷಯವನ್ನು ಯಾವುದೇ ಕಾರಣಕ್ಕೂ ಚರ್ಚಿಸಬೇಡಿ

Webdunia
ಗುರುವಾರ, 4 ಜನವರಿ 2018 (07:46 IST)
ಬೆಂಗಳೂರು : ಇತ್ತಿಚಿನ  ದಿನಗಳಲ್ಲಿ ಗಂಡಹೆಂಡತಿ ಇಬ್ಬರು ಕೆಲಸಕ್ಕೆ  ಹೋಗುವುದರಿಂದ ಜೊತೆಯಾಗಿರಲು ಸಮಯವೇ ಸಿಗುವುದಿಲ್ಲ. ಆದರೆ ಅವರಿಗೆ ಸ್ವಲ್ಪ ಸಮಯ  ಸಿಗುವುದೇ ರಾತ್ರಿ ವೇಳೆ.  ಆ ಸಮಯದಲ್ಲಿ ನೀವು ನಿಮ್ಮ ಸಂಗಾತಿ ಜೊತೆಗೆ ಖುಷಿಯಾಗಿರಬೇಕೆ ವಿನಃ ಅವರ ಮನಸ್ಸಿಗೆ ಬೇಸರ ಮಾಡುವ ವಿಷಯಗಳನ್ನು ಚರ್ಚಿಸಬಾರದು. ಇದರಿಂದ ದಾಂಪತ್ಯ ಜೀವನದಲ್ಲಿ ಅನ್ಯೋನ್ಯತೆ ಇರುದೇ ಅದು ಹಾಳಾಗುತ್ತದೆ.


ನೀವು ನಮ್ಮ ಸಂಗಾತಿ ಜೊತೆ ಇರುವಾಗ ಈ ಐದು ವಿಷಯಗಳ ಬಗ್ಗೆ ಮಾತನಾಡಬಾರದು.ಅವು ಯಾವುದೆಂದರೆ-
ಮೊದಲನೇಯದಾಗಿ ರಾತ್ರಿ ಮಲಗುವ ವೇಳೆ ನಿಮ್ಮ ಸಂಗಾತಿಯೊಂದಿಗೆ ಅವರ ಹಿಂದಿನ ಮಾಜಿ ಪ್ರೇಮಿಗಳ ಬಗ್ಗೆ ಚರ್ಚಿಸಬಾರದು. ಇದನ್ನು ಅವರು ಇಷ್ಟಪಡುವುದಿಲ್ಲ. ಇದರಿಂದ ಅವರ ಮನಸ್ಸಿಗೆ ನೋವುಂಟಾಗುತ್ತದೆ.


ಎರಡನೇಯದಾಗಿ ನಿಮ್ಮ ಸಂಗಾತಿ ರೊಮ್ಯಾಂಟಿಕ್ ಮೂಡ್ ನಿಂದ ನಿಮ್ಮ ಬಳಿ ಬಂದಾಗ ಅವರ ಕೆಲಸದ ಬಗ್ಗೆ ಮಾತನಾಡಬಾರದು . ಇದರಿಂದ ಅವರ ಮೂಡ್ ಹಾಳಾಗಿ ನಿಮ್ಮ ಮೇಲೆ ಬೇಸರವುಂಟಾಗುತ್ತದೆ.


ಮೂರನೇಯದಾಗಿ ನಿಮ್ಮ ತಂದೆತಾಯಿ, ಅಕ್ಕತಂಗಿ, ಅಣ್ಣತಮ್ಮ ಹೀಗೆ ನಿಮ್ಮ ಕುಟುಂಬದಲ್ಲಿ ಯಾರಾದರೂ ನಿಮಗೆ ಇಷ್ಟವಾಗಿರಬಹುದು ಅವರ ಬಗ್ಗೆ ಆ ಸಮಯದಲ್ಲಿ ಮಾತನಾಡಬಾರದು.


ನಾಲ್ಕನೇಯದಾಗಿ ಗಂಡ ಹೆಂಡತಿ ಜಗಳ ಉಂಡು ಮಲಗುವವರೆಗೆ ಎನ್ನುವಂತೆ ಒಮ್ಮೆ ಜಗಳ ಮಾಡಿ ಮತ್ತೆ ಒಂದಾಗುತ್ತಾರೆ. ಹಿಂದೆ ನಡೆದುಹೋದ ಆ ಜಗಳಗಳ ಬಗ್ಗೆ ಆ ಸಮಯದಲ್ಲಿ ಮಾತನಾಡಬಾರದು.


ಐದನೇಯದಾಗಿ ನಿಮ್ಮ ಸಂಗಾತಿಯ ವ್ಯಕ್ತಿತ್ವದ ಬಗ್ಗೆ ಬೆಡ್ ಮೇಲಿರುವಾಗ ಮಾತನಾಡಬಾರದು. ಉದಾಹರಣೆಗೆ ನೀವು ದಪ್ಪವಾಗಿರುವಿರಿ, ಹೊಟ್ಟೆ ದಪ್ಪವಾಗಿದೆ ಮುಂತಾದ ವಿಷಯಗಳ ಬಗ್ಗೆ ಹೇಳಬಾರದು. ಇದರಿಂದ ಸಂಗಾತಿಗೆ  ಬೇಸರವಾಗುವ ಸಾಧ್ಯತೆ ಇದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆರ್ಥರೈಟಿಸ್ ನೋವಿದ್ದರೆ ಈ ಒಂದು ಹಣ್ಣು ಸೇವಿಸಿ

ಚಳಿಗಾಲದಲ್ಲಿ ಶುಂಠಿ ಸೇವಿಸುವುದರ ಲಾಭವೇನು ತಿಳಿದುಕೊಳ್ಳಿ

ಚಳಿಗಾಲದಲ್ಲಿ ಬೆಲ್ಲವನ್ನು ಆಹಾರದಲ್ಲಿ ಸೇವಿಸುವುದರಲ್ಲಿ ಏನೆಲ್ಲಾ ಪ್ರಯೋಜನವಿದೆ ಗೊತ್ತಾ

ಚಳಿಗಾಲದಲ್ಲಿ ಚರ್ಮದ ತುರಿಕೆಗೆ ಏನು ಮಾಡಬೇಕು

ಈ ಸಂದರ್ಭದಲ್ಲಿ ಕೈಗೆ ಮೆಹಂದಿ ಹಾಕಿಕೊಳ್ಳಬಾರದು

ಮುಂದಿನ ಸುದ್ದಿ
Show comments