Publish Date: Thu, 27 Jun 2019 (08:44 IST)
Updated Date: Thu, 27 Jun 2019 (08:49 IST)
ಬೆಂಗಳೂರು : ಹಲಸಿನ ಹಣ್ಣು ಎಲ್ಲರಿಗೂ ಪ್ರಿಯವಾದ ಹಣ್ಣು. ಇದು ಆರೋಗ್ಯಕ್ಕೆ ತುಂಬಾ ಉತ್ತಮ. ಇದರಿಂದ ಹಲವು ಬಗೆಯ ಸಿಹಿತಿಂಡಿಗಳನ್ನು ಮಾಡಬಹುದು. ಮಾತ್ರವಲ್ಲ ಇದು ಸೌಂದರ್ಯ ಹೆಚ್ಚಿಸುವಲ್ಲಿ ಸಹಕಾರಿ.
ಹೌದು. ಮೊಡವೆ ಸಮಸ್ಯೆಯಿಂದ ಬಳಲುತ್ತಿರುವವರು ಹಲಸಿನ ಹಣ್ಣಿನ ಪೇಸ್ಟ್ ತಯಾರಿಸಿಕೊಂಡು ಅದನ್ನು ಮೊಡವೆಗಳಿಗೆ ಹಚ್ಚಿ. ಇದರಿಂದ ಮೊಡವೆಗಳು ಮಾಯವಾಗುವುದಲ್ಲದೇ ಮತ್ತೆ ಮೊಡವೆಗಳು ಏಳದಂತೆ ತಡೆಯುತ್ತದೆ.
ನೆರಿಗೆಗಳಿಂದ ದೂರಾಗಲು, ಈ ಹಣ್ಣಿನ ಪೇಸ್ಟ್ಗೆ ಒಂದು ಚಮಚ ಹಾಲನ್ನು ಸೇರಿಸಿ ಮಿಶ್ರಮಾಡಿಕೊಂಡು ನೆರಿಗೆಗಳ ಭಾಗಕ್ಕೆ ಹಚ್ಚಿಕೊಳ್ಳಿ. ನಂತರ 10 ನಿಮಿಷಗಳ ಬಳಿಕ ಮುಖವನ್ನು ತಣ್ಣಗಿನ ನೀರಿನಿಂದ ತೊಳೆದುಕೊಂಡು ಐಸ್ ನಿಂದ ಮುಖಕ್ಕೆ ಮಾಲೀಸು ಮಾಡಿಕೊಳ್ಳಿ
ಮುಖದ ಮೇಲಿನ ಕಪ್ಪು ಕಲೆಗಳನ್ನು ನಿವಾರಿಸಲು ಹಲಸಿನ ಹಣ್ಣಿನ ಮೂರು ಹಣ್ಣು ಮತ್ತು ಬೀಜವನ್ನು ನುಣ್ಣಗೆ ಅರೆದುಕೊಂಡು ಇದನ್ನು ಮೇಲ್ಮುಖವಾಗಿ ಕಪ್ಪು ಕಲೆಗಳ ಮೇಲೆ ಹಚ್ಚಿಕೊಳ್ಳಿ. 10 ನಿಮಿಷಗಳ ನಂತರ ಮುಖವನ್ನು ತೊಳೆದುಕೊಳ್ಳಿ.