ಪರಂಗಿ ಹಣ್ಣು ಸೇವಿಸುವಾಗ ಎಚ್ಚರವಿರಲಿ!

Webdunia
ಬುಧವಾರ, 6 ಅಕ್ಟೋಬರ್ 2021 (10:53 IST)
ಪರಂಗಿ ಹಣ್ಣಿನ ಸೇವನೆಯಿಂದ ಸಾಕಷ್ಟು ಪ್ರಯೋಜನಗಳಿವೆ. ಅಷ್ಟೆ ಅಲ್ಲದೆ ಅದರ ಎಲೆಯೂ ಸಾಕಷ್ಟು ಪ್ರಯೋಜನಕಾರಿ ಅಂಶಗಳಿಂದ ಕೂಡಿದೆ. ಪರಂಗಿ ಹಣ್ಣಿನ ಗಿಡ ಎಲೆಗಳನ್ನು ಸೇವಿಸಿದರೆ, ಕೆಂಪು ರಕ್ತ ಕಣಗಳು ವೃದ್ಧಿಯಾಗುತ್ತವೆ.

ಇನ್ನು ಯಾವುದೇ ಅತಿಯಾದರು ಅದರಿಂದ ಅಪಾಯ ತಪ್ಪಿದ್ದಲ್ಲ. ಹಾಗೆಯೇ ಪರಂಗಿ ಹಣ್ಣಿನ ಸೇವನೆ ಸಹ.
ಪರಂಗಿ ಹಣ್ಣಿನಲ್ಲಿ ವಿಟಮಿನ್ ಸಿ,ಆ್ಯಂಟಿಆಕ್ಸಿಡೆಂಟ್ಸ್ ಸಹ ಹೇರಳವಾಗಿದೆ. ಆಹಾರ ಸೇವಿಸಿದ ನಂತರ ಇದನ್ನು ಸೇವಿಸಿದರೆ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ, ಹೊಟ್ಟೆ ಹಾಗೂ ಕರುಳಿನಲ್ಲಿರುವ ವಿಷ ಪದಾರ್ಥಗಳನ್ನು ಹೊರ ಹಾಕುವ ಕೆಲಸವನ್ನೂ ಪರಂಗಿ ಹಣ್ಣು ಮಾಡುತ್ತದೆ.
ಪರಂಗಿ ಹಣ್ಣಿನಲ್ಲಿ ಪ್ಲೆವನಾಯ್ಡ್ಸ್, ಪೊಟಾಷಿಯಂ, ಮಿನರಲ್ಸ್, ಕಾಪರ್, ಮಗ್ನಿಷಿಯಂ, ಫೈಬರ್ನಂತಹ ಅಂಶಗಳು ಹೇರಳವಾಗಿರುತ್ತವೆ. ಡೆಂಗಿ ಜ್ವರದಿಂದ ಬಳಲುತ್ತಿರುವವರ ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ ಪರಂಗಿ ಹಣ್ಣು.

ಪರಂಗಿ ಹಣ್ಣಿನಲ್ಲಿ ಕ್ಯಾಲೋರಿ ತುಂಬಾ ಕಡಿಮೆ ಇರುತ್ತದೆ. ಹೀಗಾಗಿ ಇದನ್ನು ಹೆಚ್ಚಾಗಿ ಸೇವಿಸಿದರೂ ತೂಕ ಹೆಚ್ಚಾಗುವುದಿಲ್ಲ. ಅಲ್ಲದೆ ದೇಹದಲ್ಲಿನ ಕೆಟ್ಟ ಕೊಬ್ಬನ್ನು ಕರಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹೃದಯಕ್ಕೆ ರಕ್ತ ಸರಿಯಾಗಿ ಸಂಚರಿಸುವಂತೆ ಮಾಡುತ್ತದೆ.
ಮೂತ್ರಪಿಂಡದಲ್ಲಿರುವ ಕಲ್ಲುಗಳು ಇರುವವರಿಗೆ ಪರಂಗಿ ಹಣ್ಣು ಸರಿಯಾದ ಮನೆ ಮದ್ದು. ಕ್ರಮವಾಗಿ ಪರಂಗಿ ಹಣ್ಣು ಸೇವಿಸಿದರೆ ಕಿಡ್ನಿ ಸ್ಟೋನ್ ಸಮಸ್ಯೆ ದೂರವಾಗುತ್ತದೆಯಂತೆ.  ಸುಸ್ತು, ಆಲಸ್ಯದಂತಹ ಆರೋಗ್ಯದಲ್ಲಿನ ಸಮಸ್ಯೆಗಳನ್ನು ಪರಂಗಿ ಹಣ್ಣು ದೂರ ಮಾಡುತ್ತದೆ. ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಹೆಚ್ಚಿಸಿ, ದೇಹವನ್ನು ಸದೃಢಗೊಳಿಸುತ್ತದೆ.
ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣ ಸಹ ಈ ಪರಂಗಿ ಹಣ್ಣಿಗಿದೆ. ಇದರಲ್ಲಿ ಬಿಟಾ ಕೆರಟಿನ್  ಇದ್ದು, ಇದು ಕ್ಯಾನ್ಸರ್ ವೈರಸ್ನಿಂದ ಹೋರಾಡುವ  ಗುಣ ಹೊಂದಿದ್ದು, ಗರ್ಭಕೋಶದ ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ.

ಪರಂಗಿ ಹಣ್ಣು ಹೆಚ್ಚಾಗಿ ಸೇವಿಸಿದರೆ ಅರ್ಜೀಣದ ಸಮಸ್ಯೆ ಉಂಟಾಗುತ್ತದೆ. ಮಿತಿ ಮೀರಿ ಸೇವಿಸಿದರೆ  ದೇಹದಲ್ಲಿ ಅಲರ್ಜಿ ಸಹ ಆಗುತ್ತದೆ. ಅನ್ನ ನಾಳದಲ್ಲಿ ಹುಣ್ಣುಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಪರಂಗಿ ಹಣ್ಣು ದಿನವೂ ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ತುಂಬಾ ವೇಗವಾಗಿ ತಗ್ಗಿ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ.  ಗರ್ಭಿಣಿಯರು ಈ ಹಣ್ಣನ್ನು ತಿನ್ನಬಾರದು. ಇದರಿಂದ ದೇಹದ ಉಷ್ಣತೆ ಹೆಚ್ಚಾಗಿ ದೇಹದ ಮೇಲೆ ದುಷ್ಪರಿಣಾಮ ಬೀರಬಹುದು ಎನ್ನುತ್ತಾರೆ ಹಿರಿಯರು. ಗರ್ಭಪಾತ ಆಗುವ ಸಂಭವ ಹೆಚ್ಚು
ವಾರಕ್ಕೆ 2-3 ಸಲ ಮಾತ್ರ ಈ ಹಣ್ಣು ತಿನ್ನಬೇಕು. ನಿತ್ಯ ಈ ಹಣ್ಣನ್ನು ಸೇವಿಸಿದರೆ, ದೇಹದ ಚರ್ಮದ ಬಣ್ಣ ಬದಲಾಗುತ್ತದೆಯಂತೆ. ಕಣ್ಣಿನ ಸಮಸ್ಯೆ ಸಹ ಉಂಟಾಗಬಹುದು. ಸೂಕ್ಷ್ಮ ಆರೋಗ್ಯ ಹೊಂದಿರುವವರು ಪರಂಗಿ ಹಣ್ಣನ್ನು ಸೇವಿಸುವ ಮುನ್ನ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮುಂದಿನ ಸುದ್ದಿ
Show comments