Select Your Language

Notifications

webdunia
webdunia
webdunia
webdunia

ರಾತ್ರಿ ಹೊತ್ತು ಮೊಸರು ತಿನ್ನುವ ಮುನ್ನ ಎಚ್ಚರ!

ರಾತ್ರಿ ಹೊತ್ತು ಮೊಸರು ತಿನ್ನುವ ಮುನ್ನ ಎಚ್ಚರ!
ಬೆಂಗಳೂರು , ಸೋಮವಾರ, 22 ನವೆಂಬರ್ 2021 (11:48 IST)
ನಮ್ಮ ದೇಹ ಅತಿ ಸುಲಭವಾಗಿ ಜೀರ್ಣಿಸಿಕೊಳ್ಳುವ ಆಹಾರವೆಂದರೆ ನೀರು. ಅದು ಬಿಟ್ಟರೆ ಮೊಸರು ಅಗ್ರಸ್ಥಾನದಲ್ಲಿ ನಿಲ್ಲುತ್ತದೆ.
ಏಕೆಂದರೆ ಹಾಲನ್ನು ಮೊಸರನ್ನಾಗಿಸುವ ಕ್ರಿಯೆಯಲ್ಲಿ ನಮ್ಮ ಜೀರ್ಣಾಂಗಗಳು ಮಾಡುವ ಮುಕ್ಕಾಲುಪಾಲು ಕೆಲಸವನ್ನು ಮೊಸರಿನಲ್ಲಿರುವ ಬ್ಯಾಕ್ಟೀರಿಯಾಗಳೇ ಮುಗಿಸಿರುತ್ತವೆ. ಹಾಗಾಗಿ ಮೊಸರು ನಮಗೆ ಅತ್ಯುತ್ತಮವಾದ ಆಹಾರವಾಗಿದೆ. ವೈದ್ಯರೂ ಜೀರ್ಣ ಸಮಸ್ಯೆ ಇರುವ ರೋಗಿಗಳಿಗೆ ಮೊಸರನ್ನೇ ಆಹಾರವನ್ನಾಗಿ ಸ್ವೀಕರಿಸಲು ಸಲಹೆ ಮಾಡುತ್ತಾರೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ಊಟದ ಕೊನೆಯಲ್ಲಿ ಮೊಸರು ಇಲ್ಲವಾದಲ್ಲಿ ಊಟ  ಎಂಬುದು ಯಾವತ್ತಿಗೂ ಪರಿಪೂರ್ಣವಾಗುವುದಿಲ್ಲ.  ಊಟದ ಕೊನೆಯಲ್ಲಿ ನೀವು ಸೇವಿಸುವ ಮೊಸರನ್ನವು ನಿಮ್ಮ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ. ಅಧ್ಯಯನದ ಪ್ರಕಾರ ಮೊಸರು ನಿಮ್ಮ ಆಯುಸ್ಸನ್ನು ಹೆಚ್ಚಿಸಲು ಸಹಕರಿಸುತ್ತದೆ ಎಂದು ತಿಳಿದು ಬಂದಿದೆ.
ಆಯುರ್ವೇದ
ಇನ್ನು ರಾತ್ರಿ ಮೊಸರು ತಿನ್ನುವುದರಿಂದ ಯಾವುದೇ ಸಮಸ್ಯೆಗಳಿಲ್ಲ. ಆದರೆ ಕಫ, ಅಸ್ತಮಾ ಸಮಸ್ಯೆ ಇರುವವರು ಮಾತ್ರ ರಾತ್ರಿ ವೇಳೆ ಮೊಸರು ತಿನ್ನದಿದ್ದರೆ ಒಳಿತು, ಯಾಕೆಂದರೆ ಅವರಲ್ಲಿ ಕಫ ಜಾಸ್ತಿಯಾಗಿ ಅನಾರೋಗ್ಯ ಕಾಡಬಹುದು. ಮೊಸರನ್ನು ರಾತ್ರಿ ವೇಳೆ ಸೇವಿಸಬಾರದೆಂದು ಕೆಲವರು ಹೇಳುತ್ತಾರೆ. ಆಯುರ್ವೇದದ ಪ್ರಕಾರ ಮೊಸರು ಹುಳಿ ಮತ್ತು ಸಿಹಿಯಿಂದ ಕೂಡಿರುವುದರಿಂದ ದೇಹದಲ್ಲಿ ‘ಕಫ ದೋಷ’ವನ್ನುಂಟು ಮಾಡುತ್ತದೆ. ಹಾಗಾಗಿ ರಾತ್ರಿ ವೇಳೆ ಮತ್ತೆ ಮೊಸರು ಸೇವಿಸಿದರೆ ಕಫ ಹೆಚ್ಚಾಗಿ ಮೂಗಿನ ನಾಳಗಳಲ್ಲಿ ಲೋಳೆ ಅಥವಾ ಸಿಂಬಳ ಜಾಸ್ತಿ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ.
ಮೊಸರು ಉತ್ತಮ ಬ್ಯಾಕ್ಟೀರಿಯಾದ ಅತ್ಯುತ್ತಮ ಮೂಲವಾಗಿದೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದು ನಿಮ್ಮ ಹಲ್ಲು ಮತ್ತು ಮೂಳೆಗಳಿಗೆ ಒಳ್ಳೆಯದು. ಆದರೆ ಹೆಚ್ಚಿನ ಆಹಾರಗಳಂತೆ, ಮೊಸರು ಸೇವಿಸಲು ನೀವು ಅನುಸರಿಸಬೇಕಾದ ಕೆಲವು ನಿಯಮಗಳಿವೆ. ಮೊಸರನ್ನು ರಾತ್ರಿ ಹೊತ್ತು ಸೇವಿಸುತ್ತಾ ಇದ್ದರೆ ಅದು ನಿಧಾನವಾದ ವಿಷ ಎಂದೇ ಆಯುರ್ವೇದದಲ್ಲಿ ವ್ಯಾಖ್ಯಾನಿಸಲಾಗಿದೆ. ಏಕೆಂದರೆ ರಾತ್ರಿ ಸಮಯದಲ್ಲಿ ಮೊಸರಿನ ಜಿಡ್ಡಿನ ಅಂಶಗಳು ದೇಹಕ್ಕೆ ಸೇರಿ ಅದರಿಂದ ಕಫ ಸಮಸ್ಯೆ ಜಾಸ್ತಿಯಾಗುತ್ತದೆಯಂತೆ! ಹಾಗಾಗಿ ರಾತ್ರಿ ಹೊತ್ತು ಮೊಸರಿನ ಬಳಕೆ ನಿಷಿದ್ಧ ಎನ್ನುತ್ತಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಜನನಾಂಗ ಸ್ವಚ್ಛವಾಗಿಡಲು ಏನು ಮಾಡಬೇಕು? ಇಲ್ಲಿದೆ ಸಲಹೆ