ನವದೆಹಲಿ : ದೇಶದಲ್ಲಿ ಕೊರೊನಾದಿಂದ ಆರ್ಥಿಕ ಬಿಕ್ಕಟ್ಟು ಎದುರಾದ ಹಿನ್ನಲೆಯಲ್ಲಿ  ಇಂದಿನಿಂದ 2 ದಿನ 15ನೇ ಹಣಕಾಸು ಆಯೋಗದ ಸಭೆ ನಡೆಯಲಿದೆ. 
									
										
								
																	
ಕೊರೊನಾ ಮಹಾಮಾರಿಯಿಂದ ದೇಶದ ಜನರನ್ನು ಕಾಪಾಡುವ ಸಲುವಾಗಿ ಇಡೀ ದೇಶವನ್ನು ಲಾಕ್ ಡೌನ್ ಮಾಡಲಾಗಿದೆ. ಇದರಿಂದ ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದೆ.
									
			
			 
 			
 
 			
			                     
							
							
			        							
								
																	
ಈ ಹಿನ್ನಲೆಯಲ್ಲಿ ಇಂದು ಅಧ್ಯಕ್ಷ ಎನ್.ಕೆ.ಸಿಂಗ್ ನೇತೃತ್ವದಲ್ಲಿ ಹಣಕಾಸು ಆಯೋಗದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಆರ್ಥಿಕ ಪುನಶ್ವೇತನಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗುವುದು.  ಸಭೆ ಬಳಿಕ ಆಯೋಗ ಕೇಂದ್ರಕ್ಕೆ ಶಿಫಾರಸು ಮಾಡಲಿದೆ ಎನ್ನಲಾಗಿದೆ.