Select Your Language

Notifications

webdunia
webdunia
webdunia
webdunia

ಮಗುವಾದ ಮೇಲೆ ಮಹಿಳೆಯರು ಈ 5 ಜನರನ್ನು ದ್ವೇಷಿಸುತ್ತಾರಂತೆ. ಯಾಕೆ ಗೊತ್ತಾ?

ಮಗುವಾದ ಮೇಲೆ ಮಹಿಳೆಯರು ಈ 5 ಜನರನ್ನು ದ್ವೇಷಿಸುತ್ತಾರಂತೆ. ಯಾಕೆ ಗೊತ್ತಾ?
ಬೆಂಗಳೂರು , ಶುಕ್ರವಾರ, 3 ಮೇ 2019 (07:07 IST)
ಬೆಂಗಳೂರು : ಪ್ರತಿಯೊಬ್ಬ ಮಹಿಳೆಗೂ ಮಗುವಾದ ಮೇಲೆ ಅವರ ಜವಬ್ದಾರಿ ಹೆಚ್ಚಾಗುತ್ತದೆ. ಇದರಿಂದ ಅವರು ತಮ್ಮ ಹೆಚ್ಚಿನ ಗಮನವನ್ನು ಮಗುವಿನ ಕಡೆಗೆ ನೀಡಬೇಕಾಗುತ್ತದೆ. ಆದ್ದರಿಂದ ಆ ವೇಳೆ ಅವರು ಈ 5 ಜನರನ್ನು ದ್ವೇಷಿಸಲು ಶುರು ಮಾಡುತ್ತಾರೆ. ಅವರು ಯಾರ್ಯಾರು ಎಂಬುದನ್ನು ನೋಡೋಣ.




*ಮೊದಲನೇಯದಾಗಿ ಅನಾರೋಗ್ಯ ಪೀಡಿತ ಜನರನ್ನು ಕೆಲವು  ತಾಯಂದಿರೂ ಮಗುವಿನಿಂದ ದೂರವಿಡಿಸಲು ಪ್ರಯತ್ನಿಸುತ್ತಾರೆ. ಕಾರಣ ಮಗುವಿಗೆ ಯಾವುದೇ ರೀತಿಯ ಇನ್ ಫೆಕ್ಷನ್ ಆಗಬಾರದು ಎಂದು.


*ಎರಡನೇಯದಾಗಿ ಬಾಗಿಲ ಬಳಿ ತುಂಬಾ ಶಬ್ದ ಮಾಡುವವರನ್ನು  ತಾಯಂದಿರೂ ದ್ವೇಷಿಸುತ್ತಾರೆ. ಕಾರಣ ಅವರ ಮಾಡುವ ಶಬ್ದದಿಂದ ಮಗುವಿನ ನಿದ್ದೆ ಹಾಳಾಗುತ್ತದೆ ಎಂದು.


*ಮೂರನೇಯದಾಗಿ ತಿಳಿಸದೆ ಮನೆಗೆ ಬರುವ ಅತಿಥಿಗಳನ್ನು ತಾಯಂದಿರೂ ಹೆಚ್ಚಾಗಿ ದ್ವೇಷಿಸುತ್ತಾರೆ. ಕಾರಣ ಅತಿಥಿಗಳಿಗೆ  ಆತಿಥ್ಯ ನೀಡುವುದರೊಳಗೆ ಮಗುವನ್ನು ಕೇರ್ ಮಾಡಲು ಅವರಿಗೆ ಸಮಯ ಇಲ್ಲದ ಕಾರಣ ಕೋಪಗೊಳ್ಳುತ್ತಾರೆ.


*ನಾಲ್ಕನೇಯದಾಗಿ ನಿದ್ದೆ ಮಾಡುತ್ತಿರುವ ಪತಿ. ಮಗು ಎಷ್ಟೇ ಅತ್ತರು ಅದನ್ನು ಸಮಾಧಾನ ಪಡಿಸದೆ ಚೆನ್ನಾಗಿ ನಿದ್ದೆ ಮಾಡುವ ಪತಿಯನ್ನು ತಾಯಂದಿರು ದ್ವೇಷಿಸುತ್ತಾರೆ.


*ಐದನೇಯದಾಗಿ ತಡವಾಗಿ ಭೇಟಿ ಮಾಡುವ ಸ್ನೇಹಿತರನ್ನು ತಾಯಂದಿರೂ ಬೇಗನೆ ಕೋಪಿಸುಕೊಳ್ಳುತ್ತಾರೆ. ಸ್ನೇಹಿತರು ಹೇಳಿದ ಸಮಯಕ್ಕೆ ಬಾರದೆ ತಡವಾಗಿ ಬಂದರೆ ಮಗುವಿನ ಕಡೆಗೆ ಗಮನ ಕೊಡಲು ಆಗಲಿಲ್ಲವಲ್ಲ ಎಂದು ಕೋಪಿಸಿಕೊಳ್ಳುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



 

Share this Story:

Follow Webdunia kannada

ಮುಂದಿನ ಸುದ್ದಿ

ರಾತ್ರಿ ಊಟವಾದ ಮೇಲೆ ಮಾವಿನ ಹಣ್ಣು ತಿಂದರೆ ಏನಾಗುತ್ತದೆ ಗೊತ್ತಾ?