Publish Date: Tue, 02 Jul 2019 (10:05 IST)
Updated Date: Tue, 02 Jul 2019 (17:17 IST)
ಬೆಂಗಳೂರು : ನನಗೆ ಮದುವೆಯಾಗಿಲ್ಲ. ನಾನು ನನ್ನ ಲೈಂಗಿಕ ದಾಹ ತೀರಿಸಿಕೊಳ್ಳಲು ಲೈಂಗಿಕ ಕಾರ್ಯಕರ್ತರನ್ನು ನೇಮಿಸಿಕೊಳ್ಳುತ್ತಿದ್ದೇನೆ. ಆ ವೇಳೆ ನಾನು ಕಾಂಡೋಮ್ ಗಳನ್ನು ಬಳಸುತ್ತೇನೆ. ನಾನು ಆರೋಗ್ಯವಂತನಾಗಿದ್ದು, ನಾನು ಇನ್ನುಮುಂದೆಯೂ ಲೈಂಗಿಕ ಕಾರ್ಯಕರ್ತರ ಜೊತೆ ಲೈಂಗಿಕ ಸಂಬಂಧ ಮುಂದುವರಿಸಬಹುದೇ?
ನೀವು ಒಬ್ಬ ಶಾಶ್ವತ ಸಂಗಾತಿಯನ್ನು ಪಡೆದು ಆಕೆಯ ಜೊತೆಗೆ ಲೈಂಗಿಕ ಸಂಬಂಧ ಬೆಳೆಸಿದರೆ ಉತ್ತಮ. ಲೈಂಗಿಕ ಕಾರ್ಯಕರ್ತರ ಜೊತೆಗಿನ ಲೈಂಗಿಕ ಸಂಬಂಧ ಮುಂದೆ ಸಮಸ್ಯೆಗೆ ಕಾರಣವಾಗಬಹುದು. ಯಾಕೆಂದರೆ ಅವರು ಹರ್ಪಿಸ್, ಎಸ್ ಟಿಡಿ ಅಥವಾ ಎಚ್ ಐವಿ / ಏಡ್ಸ್ ನಂತಹ ಸೋಂಕನ್ನು ಹೊಂದಿರುತ್ತಾರೆ. ನೀವು ಸುರಕ್ಷತೆಗಾಗಿ ಕಾಂಡೋಮ್ ಬಳಸಿದರೂ ಕೆಲವೊಮ್ಮೆ ಕಾಂಡೋಮ್ ಬ್ರೇಕ್ ಆಗುವ ಸಂಭವವಿರುತ್ತದೆ.