Publish Date: Thu, 15 Oct 2020 (06:59 IST)
Updated Date: Thu, 15 Oct 2020 (07:01 IST)
ಬೆಂಗಳೂರು : ಚಳಿಗಾಲದಲ್ಲಿ ತುಟಿಯಲ್ಲಿ ತೇವಾಂಶ ಕಳೆದುಹೋಗಿ ತುಟಿ ಒಣಗಿ ಸಿಪ್ಪೆ ಏಳುತ್ತದೆ. ಇದರಿಂದ ಕೆಲವೊಮ್ಮೆ ನೋವು ಹಾಗೂ ರಕ್ತ ಬರುತ್ತದೆ. ಈ ಸಮಸ್ಯೆ ನಿವಾರಿಸಲು ಮನೆಯಲ್ಲಿಯಲ್ಲಿಯೇ ತಯಾರಿಸಿದ ಈ ಲಿಪ್ ಬಾಮ್ ಹಚ್ಚಿಕೊಳ್ಳಿ.
ಅಲೋವೆರಾ ಆರ್ಧ್ರಕ ಗುಣವನ್ನು ಹೊಂದಿದೆ. ಚರ್ಮ ಹಾಗೂ ಸೌಂದರ್ಯವನ್ನು ರಕ್ಷಿಸುವ ಒಂದು ಗಿಡಮೂಲಿಕೆಯಾಗಿದೆ. ಇದು ನಿಮ್ಮ ತುಟಿಗಳನ್ನು ಹೈಡ್ರೀಕರಿಸುತ್ತದೆ. ಇದರಿಂದ ತುಟಿಗಳು ಮೃದುವಾಗುತ್ತವೆ. ಅದಕ್ಕಾಗಿ 1 ಚಮಚ ಅಲೋವೆರಾ ಜೆಲ್ ಗೆ ½ ಚಮಚ ತೆಂಗಿನೆಣ್ಣೆ ಮಿಕ್ಸ್ ಮಾಡಿ ಒಂದು ಕಂಟೇನರ್ ನಲ್ಲಿ ಸಂಗ್ರಹಿಸಿ ತುಟಿಗಳಿಗೆ ಹಚ್ಚಿ ಇದರಿಂದ ತುಟಿಗಳು ಮೃದುವಾಗುತ್ತದೆ.