Publish Date: Mon, 11 Nov 2019 (06:32 IST)
Updated Date: Mon, 11 Nov 2019 (06:35 IST)
ಬೆಂಗಳೂರು : ವಯಸ್ಸಾಗುತ್ತಿದ್ದಂತೆ ಕಣ್ಣಿನ ಸುತ್ತ ಸುಕ್ಕುಗಟ್ಟಲು ಶುರುವಾಗುತ್ತದೆ. ಇದರಿಂದ ನಿಮಗೆ ವಯಸ್ಸಾಗುತ್ತಿರುವುದು ಎದ್ದು ಕಾಣುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಕಣ್ಣಿನ ಸುತ್ತ ಇದನ್ನು ಹಚ್ಚಿ.
ತೆಂಗಿನೆಣ್ಣೆಗೆ ಸ್ವಲ್ಪ ಹರಳೆಣ್ಣೆ ಮಿಕ್ಸ್ ಮಾಡಿ ರಾತ್ರಿ ಕಣ್ಣಿನ ಸುತ್ತ ಮಸಾಜ್ ಮಾಡಿ ಹಾಗೇ ಬಿಟ್ಟು ಬೆಳಿಗ್ಗೆ ತಣ್ಣೀರಿನಲ್ಲಿ ತೊಳೆಯಿರಿ. ಇದರಿಂದ ಕಣ್ಣು ಕಾಂತಿಯುತವಾಗಿ ಹೊಳೆಯುತ್ತದೆ.
ತೆಂಗಿನೆಣ್ಣೆಗೆ ಸ್ವಲ್ಪ ನಿಂಬೆರಸ ಹಾಗೂ ಹಸಿ ಹಾಲನ್ನು ಬೆರೆಸಿ ಹತ್ತಿಉಂಡೆಯಿಂದ ಕಣ್ಣಿನ ಕೆಳಭಾಗಕ್ಕೆ ಹಚ್ಚಿ 10 ನಿಮಿಷ ಬಿಟ್ಟು ತಣ್ಣೀರಿನಲ್ಲಿ ತೊಳೆದರೆ ಕಣ್ಣಿನ ಭಾಗದ ಸುಕ್ಕು ಕಡಿಮೆಯಾಗುತ್ತದೆ.