Webdunia - Bharat's app for daily news and videos

Install App

ಆಪಲ್‌ ಸೈಡರ್ ವಿನೆಗರ್‌ನ ಉಪಯೋಗಗಳು

ಅತಿಥಾ
ಗುರುವಾರ, 15 ಫೆಬ್ರವರಿ 2018 (19:30 IST)
ಸೇಬಿನ ರಸದಿಂದ ತಯಾರಿಸಲಾಗುವ ಒಂದು ರೀತಿಯ ಮದ್ಯದ ಅಂಶಕ್ಕೆ ರೂಪಾಂತರವಾಗುವ ರಸಕ್ಕೆ ಆಪಲ್‌ ಸೈಡರ್ ವಿನೆಗರ್ ಎಂದು ಕರೆಯಲಾಗುತ್ತದೆ. ಇದನ್ನು ಹಲವಾರು ರೋಗಗಳನ್ನು ಗುಣಪಡಿಸಲು ಮತ್ತು ಸೋಂಕುಗಳಾದ ಸೈನುಟಿಸ್, ಜ್ವರ, ಮತ್ತು ಫ್ಲೂ ಮೊದಲಾದವುಗಳನ್ನು ಗುಣಪಡಿಸಲು ಬಳಸಲಾಗುತ್ತಿದೆ.

ಇದರ ಸೇವನೆಯಿಂದ ಜೀರ್ಣಕ್ರಿಯೆ ಸುಧಾರಿಸಲು ಮತ್ತು ಖಿನ್ನತೆ, ಆಯಾಸ, ಸಂಧಿವಾತದಂತಹ ಅನೇಕ ದೀರ್ಘಕಾಲದ ಖಾಯಿಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ ಅಷ್ಟೇ ಅಲ್ಲದೆ, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಇದು ಸಹಾಯಕವಾಗಿದೆ. ಇದು ಎಲ್ಲಾ ಕಡೆ ಕೈಗೆಟಕುವ ದರದಲ್ಲಿ ಲಭ್ಯವಿದೆ.
 
- ಗ್ಲೂಕೋಸ್ ಕಡಿಮೆ ಮಾಡುತ್ತದೆ
ಆಪಲ್ ಸೈಡರ್ ವಿನೆಗರ್ ಅಸಿಟಿಕ್ ಆಮ್ಲ, ಹೊಂದಿದ್ದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸಿ, ಪರಿಣಾಮವಾಗಿ ರಕ್ತನಾಳಗಳಲ್ಲಿ ಗ್ಲೂಕೋಸ್ ಮಟ್ಟ ಕಡಿಮೆಮಾಡುವುದು. ಇದರಿಂದ ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗದಂತೆ ತಡೆಯುತ್ತದೆ.
 
- ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ
ಕೊಲೆಸ್ಟ್ರಾಲ್ ಎಂಬುದು ಅಪಧಮನಿಗಳಲ್ಲಿ ಬೆಳೆಯುವ ಒಂದು ಕೊಬ್ಬು ತರಹದ ಪದಾರ್ಥವಾಗಿದೆ. ಅಧಿಕ ರಕ್ತದ ಕೊಲೆಸ್ಟ್ರಾಲ್ ನಿಮ್ಮ ಹೃದಯದ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ, ಅದು ದೇಹದಾದ್ಯಂತ ರಕ್ತವನ್ನು ತಳ್ಳಲು ಶ್ರಮಿಸುವಂತೆ ಒತ್ತಾಯಿಸುತ್ತದೆ. ಆಪಲ್ ಸೈಡರ್ ವಿನೆಗರ್ ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುವ ಮೂಲಕ ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ.
 
- ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ
ಆಪಲ್ ಸೈಡರ್ ವಿನೆಗರ್ ಕೇವಲ ನಿಮ್ಮ ಆಂತರಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲ; ಇದು ಮೊಡವೆ ಚಿಕಿತ್ಸೆ ಮತ್ತು ಕಲೆ ಕಡಿಮೆಗೊಳಿಸಲು ಬಹಳ ಉಪಯುಕ್ತವಾಗಿದೆ. ಬ್ಯಾಕ್ಟೀರಿಯಾದ ಕೆಲವು ತಳಿಗಳು ಮೊಡವೆ ಬೆಳವಣಿಗೆಗೆ ಕಾರಣವಾಗುತ್ತವೆ. ವಿನೆಗರ್ ಅದರ ಜೀವಿರೋಧಿ ಗುಣಗಳಿಗೆ ಹೆಸರುವಾಸಿಯಾಗಿದೆ ಮತ್ತು ಹಾನಿಕಾರಕ ಬ್ಯಾಕ್ಟೀರಿಯಾದ ಅನೇಕ ತಳಿಗಳ ವಿರುದ್ಧ ಪರಿಣಾಮಕಾರಿಯಾಗಿದೆ.
 
- ಖನಿಜಗಳನ್ನು ಒಳಗೊಂಡಿದೆ
ಪೊಟ್ಯಾಷಿಯಂ, ಮ್ಯಾಗ್ನೀಷಿಯಂ ಮತ್ತು ಇತರ ಖನಿಜಗಳನ್ನು ಆಪಲ್ ಸೈಡರ್ ವಿನೆಗರ್ ಒಳಗೊಂಡಿದೆ. ಪೊಟ್ಯಾಷಿಯಂ ದೇಹದಲ್ಲಿ ನೀರಿನ ಸಮತೋಲನವನ್ನು ನಿಯಂತ್ರಿಸುತ್ತದೆ ಮತ್ತು ಆರೋಗ್ಯಕರ ಹೃದಯ ಲಯಬದ್ಧತೆಯನ್ನು ನಿರ್ವಹಿಸುತ್ತದೆ. ಮ್ಯಾಗ್ನಿಷಿಯಂ ಜೀರ್ಣಕ್ರಿಯೆಗೆ ಸಹಾಯ ಮತ್ತು ಆರೋಗ್ಯಕರ ಮೂಳೆಗಳನ್ನು ರೂಪಿಸಲು ಕ್ಯಾಲ್ಸಿಯಂ ಗ್ರಹಿಸಲು ಸಹಾಯಕ. ಇದು ಕಿಣ್ವ ಚಟುವಟಿಕೆಯಲ್ಲಿ ಒಂದು ವೇಗವರ್ಧಕವಾಗಿದೆ.
 
- ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ
ಆಪಲ್ ಸೈಡರ್ ವಿನೆಗರ್‌ನಲ್ಲಿ ಮುಖ್ಯ ಅಂಶವಾದ ಅಸಿಟಿಕ್ ಆಮ್ಲ, ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡಲು ಮತ್ತು ಹೃದಯ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
 
- ನರಹುಲಿ / ಗಂಟು ಕಡಿಮೆ ಮಾಡುತ್ತದೆ
ಮಲಗುವ ಮೊದಲು ಆಪಲ್ ಸೈಡರ್ ವಿನೆಗರ್‌ನಲ್ಲಿ ಹತ್ತಿ ನೆನೆಸಿ ಪ್ರಯತ್ನಿಸಿ, ನೇರವಾಗಿ ನರಹುಲಿ / ಗಂಟು ಇರುವ ಸ್ಥಳಕ್ಕೆ ಲೇಪಿಸಿ ಮತ್ತು ಬ್ಯಾಂಡೇಜ್ ಕಟ್ಟಿ.
 
- ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ
ಆಪಲ್ ಸೈಡರ್ ವಿನೆಗರ್ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ. ಒಂದು ಲೋಟ ನೀರಿನಲ್ಲಿ ಎರಡು ಚಮಚ ಆಪಲ್ ಸೈಡರ್ ವಿನೆಗರ್‌ ಅನ್ನು ಮಿಶ್ರಣ ಮಾಡಿ ಊಟದ ಮೊದಲು ಸೇವಿಸಿದರೆ ರಕ್ತದ ಸಕ್ಕರೆ ಪ್ರಮಾಣ ಕ್ರಮೇಣ ಕಡಿಮೆಯಾಗುತ್ತದೆ.
 
- ಅಸ್ತಮಾ ಕಡಿಮೆ ಮಾಡುತ್ತದೆ
ಒಂದು ಲೋಟ ನೀರಿಗೆ ಒಂದು ಚಮಚ ಆಪಲ್ ಸೈಡರ್ ವಿನೆಗರ್ ಸೇರಿಸಿ ಮಿಶ್ರಣ ಮಾಡಿ. ಈ ನೀರನ್ನು ಪ್ರತಿ ಅರ್ಧಘಂಟೆಗೊಂದು ಬಾರಿ ಚಿಕ್ಕ ಪ್ರಮಾಣದಲ್ಲಿ ಗುಟುಕು ಗುಟುಕಾಗಿ ಹೀರುತ್ತಾ ಇರಿ. ಇದರಿಂದ ಅಸ್ತಮಾದ ತೊಂದರೆ ನಿಧಾನವಾಗಿ ಕಡಿಮೆಯಾಗುತ್ತಾ ಬರುತ್ತದೆ.
 
- ತಲೆಯ ಹೊಟ್ಟು ನಿವಾರಿಸುತ್ತದೆ
ಆಪಲ್ ಸೈಡರ್ ವಿನೆಗರ್ ಅನ್ನು ಹಚ್ಚಿಕೊಂಡ ಹತ್ತಿಯ ಉಂಡೆಯನ್ನು ನಿಮ್ಮ ನೆತ್ತಿಯ ಚರ್ಮದ ಭಾಗಕ್ಕೆ ನಯವಾಗಿ ತಿಕ್ಕಿ. ನಂತರ ನಿಮ್ಮ ಕೂದಲನ್ನು ಕರವಸ್ತ್ರದೊಂದಿಗೆ ಬಿಗಿಯಾಗಿ ಕಟ್ಟಿಕೊಳ್ಳಿ. ಅರ್ಧ ಗಂಟೆಯ ನಂತರ ಬೆಚ್ಚನೆಯ ನೀರಿನಿಂದ ಕೂದಲನ್ನು ಸ್ವಚ್ಛಗೊಳಿಸಿ. ಈ ಪ್ರಕ್ರಿಯೆಯನ್ನು ಒಂದು ತಿಂಗಳಲ್ಲಿ ವಾರಕ್ಕೆ ಎರಡು ಬಾರಿ ಅನುಸರಿಸಿದರೆ ನಿಮ್ಮ ತಲೆ ಹೊಟ್ಟು ಮಂಗಮಾಯ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಪ್ರವಾಸಕ್ಕೆ ತೆರಳುವ ಪ್ಲಾನ್ ಇದ್ಯಾ, ಹಾಗಾದರೆ ಇದನ್ನು ತಪ್ಪದೆ ತೆಗೆದುಕೊಂಡು ಹೋಗಿ

ಚಳಿಗಾಲದಲ್ಲಿ ಉತ್ತಮ ಆರೋಗ್ಯಕ್ಕೆ ಈ ರೀತಿ ರಸಂ ಮಾಡಿ ಸೇವಿಸಿ

ಹೊಸ ವರ್ಷವನ್ನು ಆರೋಗ್ಯಕರ ರೀತಿಯಲ್ಲಿ ಆಚರಿಸಲು 5 ಸಲಹೆಗಳು

ಮುಟ್ಟಿನ ನೋವು ಕಡಿಮೆ ಮಾಡಲು ಇಲ್ಲಿದೆ ಕೆಲವು ಸೂಪರ್ ಉಪಾಯಗಳು

ಕ್ರಿಸ್ಮಸ್‌ ವಿಶೇಷ: ಹಬ್ಬದ ಸೀಸನ್‌ಗಾಗಿ ಪ್ಲಮ್ ಕೇಕ್‌ ಪ್ರಯತ್ನಿಸಲೇಬೇಕು

ಮುಂದಿನ ಸುದ್ದಿ
Show comments