Select Your Language

Notifications

webdunia
webdunia
webdunia
webdunia

ಒಣದ್ರಾಕ್ಷಿಯನ್ನು ಜಾಸ್ತಿ ತಿನ್ನೋದ್ರಿಂದ ಆಗೋ ಸಮಸ್ಯೆಗಳು

ಒಣದ್ರಾಕ್ಷಿಯನ್ನು ಜಾಸ್ತಿ ತಿನ್ನೋದ್ರಿಂದ ಆಗೋ ಸಮಸ್ಯೆಗಳು
ಬೆಂಗಳೂರು , ಸೋಮವಾರ, 8 ನವೆಂಬರ್ 2021 (08:04 IST)
ಆರೋಗ್ಯಕ್ಕೂ ಹಲವಾರು ಬಗೆಯ ಲಾಭಗಳು ಇವೆ. ಮಕ್ಕಳು ಇದನ್ನು ತಿನ್ನಲು ತುಂಬಾ ಇಷ್ಟಪಡುವರು.
ಹೆಚ್ಚಿನ ಸಿಹಿ ತಿಂಡಿಗಳಲ್ಲಿ ಒಣದ್ರಾಕ್ಷಿಯನ್ನು ಬಳಸಲಾಗುತ್ತದೆ. ಇದರಲ್ಲಿ ವಿಟಮಿನ್ ಗಳು, ಖನಿಜಾಂಶಗಳು, ಆಂಟಿಆಕ್ಸಿಡೆಂಟ್, ಪೈಥೋನ್ಯೂಟ್ರಿಯೆಂಟ್ ಮತ್ತು ಪಾಲಿಪೆನಾಲ್ ಇತ್ಯಾದಿ ಅಂಶಗಳು ಇವೆ. ಇದು ನಮ್ಮ ದೇಹಕ್ಕೆ ಹಲವಾರು ಬಗೆಯ ಲಾಭಗಳನ್ನು ನೀಡುವುದು.
ಒಣದ್ರಾಕ್ಷಿಯನ್ನು ನಿಯಮಿತ ಮತ್ತು ಮಿತ ಪ್ರಮಾಣದಲ್ಲಿ ಸೇವನೆ ಮಾಡಿದರೆ ಅದರಿಂದ ನಮ್ಮ ಹೊಟ್ಟೆಗೆ ತುಂಬಾ ಲಾಭಕಾರಿ ಮತ್ತು ಇದು ಜೀರ್ಣಕ್ರಿಯೆ ಆರೋಗ್ಯವನ್ನು ಸುಧಾರಣೆ ಮಾಡುವುದು.
ಇದು ಮಲಬದ್ಧತೆಯಿಂದ ಪರಿಹಾರ ನೀಡುವುದು ಮತ್ತು ಜಠರಕರುಳಿನ ಸಮಸ್ಯೆಗಳಾಗಿರುವಂತಹ ಹೊಟ್ಟೆ ನೊವು, ಕಿರಿಕಿರಿ, ಗ್ಯಾಸ್, ಹೊಟ್ಟೆ ಉಬ್ಬರ, ವಾಯು ಇತ್ಯಾದಿಗಳನ್ನು ನಿವಾರಿಸುವುದು. ಒಣದ್ರಾಕ್ಷಿಯು ಜೀರ್ಣಕ್ರಿಯೆಗೆ ಒಳ್ಳೆಯದಾದರೂ ಇದನ್ನು ಮಿತ ಪ್ರಮಾಣದಲ್ಲಿ ಸೇವನೆ ಮಾಡಬೇಕು.
ಆಂಟಿಆಕ್ಸಿಡೆಂಟ್
ಒಣದ್ರಾಕ್ಷಿಯಲ್ಲಿ ವಿಟಮಿನ್ ಸಿ ಮತ್ತು ಇತರ ಕೆಲವೊಂದು ಆಂಟಿಆಕ್ಸಿಡೆಂಟ್ ಗಳಿವೆ. ಇವುಗಳು ಫ್ರೀ ರ್ಯಾಡಿಕಲ್ ನಿಂದಾಗಿ ಆಗುವಂತಹ ಆಕ್ಸಿಡೇಟಿವ್ ಹಾನಿಯನ್ನು ತಪ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಹೀಗಾಗಿ ಹಲವಾರು ಬಗೆಯ ಕ್ಯಾನ್ಸರ್ ನಿಂದ ರಕ್ಷಣೆ ನೀಡುವುದು.
ಅಲರ್ಜಿ
ಇದು ಆರೋಗ್ಯ ಮತ್ತು ಸೌಂಧರ್ಯ ವರ್ಧಕವಾಗಿ ಕೆಲಸ ಮಾಡುವುದು. ಆದರೆ ಒಣದ್ರಾಕ್ಷಿಯು ಕೆಲವು ಜನರಿಗೆ ಅಲರ್ಜಿ ಉಂಟು ಮಾಡಬಹುದು.
ಬ್ಯಾಕ್ಟೀರಿಯಾದ ಸೋಂಕು, ಶ್ವಾಸಕೋಶದ ಕಫ ಹೆಚ್ಚಳ, ಮೂಗು ಕಟ್ಟುವಿಕೆ, ಮೂಗು ಸೋರುವಿಕೆ, ಉಸಿರಾಟದ ತೊಂದರೆ, ಉಬ್ಬಸ, ಕೆಮ್ಮು, ಎದೆಕಟ್ಟುವಿಕೆ, ಅತಿಸಾರ, ವಾಂತಿ, ಹೊಟ್ಟೆ ನೋವು, ತೀವ್ರ ಎದೆಬಡಿತ, ಚರ್ಮದ ದದ್ದು ಮತ್ತು ಇಸಬು ಇತ್ಯಾದಿಗಳು ಕಂಡುಬರುವುದು.
ರಕ್ತದೊತ್ತಡ
ಅಧಿಕ ರಕ್ತದೊತ್ತಡವು ಹಲವಾರು ರೀತಿಯ ಸಮಸ್ಯೆಗಳನ್ನು ಉಂಟು ಮಾಡಬಹುದು. ಇದರಿಂದ ಅಪಧಮನಿ ಸಮಸ್ಯೆ, ಹೃದಯಾಘಾತ, ಪಾರ್ಶ್ವವಾಯು ಮತ್ತು ರಕ್ತನಾಳದಲ್ಲಿ ಬ್ಲಾಕ್ ಆಗಬಹುದು. ದ್ರಾಕ್ಷಿಯು ಈ ಎಲ್ಲಾ ಸಮಸ್ಯೆಗಳಿಗೆ ತುಂಬಾ ಪರಿಣಾಮಕಾರಿ ಆಗಿದೆ.
ಇದರಲ್ಲಿ ಇರುವಂತಹ ಪೊಟಾಶಿಯಂ ಅಂಶವು ತುಂಬಾ ಪರಿಣಾಮಕಾರಿ ಆಗಿ ಕೆಲಸ ಮಾಡುವುದು. ಆದರೆ ಅತಿಯಾಗಿ ತಿಂದರೆ ಅದರಿಂದ ರಕ್ತದೊತ್ತಡವು ತೀವ್ರ ಕುಸಿತ ಕಂಡು ಅದರಿಂದ ಬೇರೆ ಸಮಸ್ಯೆಗಳು ಕಾಡಬಹುದು.


Share this Story:

Follow Webdunia kannada

ಮುಂದಿನ ಸುದ್ದಿ

ಮಶ್ರೂಮ್ ಆರೋಗ್ಯಕ್ಕೆ ಎಷ್ಟು ಉಪಯುಕ್ತ ತಿಳಿಯಿರಿ