Select Your Language

Notifications

webdunia
webdunia
webdunia
webdunia

ABC ಜ್ಯೂಸ್ ಆರೋಗ್ಯ ಪ್ರಯೋಜನಗಳನ್ನು ಕೇಳಿದ್ರೆ ಪ್ರತಿದಿನ ಸೇವಿಸದೆ ಇರಲ್ಲ..

ABC ಜ್ಯೂಸ್ ಆರೋಗ್ಯ ಪ್ರಯೋಜನಗಳನ್ನು ಕೇಳಿದ್ರೆ ಪ್ರತಿದಿನ ಸೇವಿಸದೆ ಇರಲ್ಲ..
ಬೆಂಗಳೂರು , ಶನಿವಾರ, 25 ಸೆಪ್ಟಂಬರ್ 2021 (07:15 IST)
Health Benefits : ಈ ಪವರ್-ಪ್ಯಾಕ್ ಜ್ಯೂಸ್ ಅನ್ನು  ಚೀನಾದ ವೈದ್ಯರು ಶ್ವಾಸಕೋಶದ ಕ್ಯಾನ್ಸರ್ ಮತ್ತು ಹಲವು ಇತರ ರೋಗಗಳ ಚಿಕಿತ್ಸೆಗೆ ಉತ್ತಮ ಎಂದು ಸಾಬೀತು ಮಾಡಿದ್ದಾರೆ. ಹಾಗಾದ್ರೆ ಈ ಎಬಿಸಿ ಜ್ಯೂಸ್ ಅಂದ್ರೆ ಏನು? ಅದರ ಇತರ ಪ್ರಯೋಜನಗಳೆನು ಎಂಬುದು ಇಲ್ಲಿದೆ. 

ಯಾರಿಗೆ ತಾನೇ ಹೊಳೆಯುವ ಮತ್ತು ಮೃದುವಾದ ತ್ವಚೆ ಬೇಕು ಎಂದು ಇರುವುದಿಲ್ಲ ಹೇಳಿ. ಹಾಗೆಯೆ ದೇಹದ ತೂಕ ಇಳಿಸಿಕೊಳ್ಳುವುದು ಎಂದರೆ ಪ್ರತಿಯೊಬ್ಬರಿಗೂ ಇಷ್ಟವೇ. ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಿಜಕ್ಕೂ ಸವಾಲಿನ ಕೆಲಸ. ಅದಕ್ಕೆಂದು ರಾಸಾಯನಿಕಯುಕ್ತ ಉತ್ಪನ್ನಗಳನ್ನು ಬಳಕೆ ಮಾಡುವುದರ ಬದಲು, ನೈಸರ್ಗಿಕವಾಗಿ ಆರೋಗ್ಯವನ್ನು  ಸುಧಾರಿಸಿಕೊಳ್ಳುವುದು ಉತ್ತಮ ಆಯ್ಕೆ.  ನೀವು ಈ ಎಬಿಸಿ ಜ್ಯುಸ್ ಬಗ್ಗೆ ಕೇಳಿದೀರಾ? ಹೌದು ಎಬಿಸಿ ಜ್ಯೂಸ್ ಎಂದೇ ಪ್ರಸಿದ್ಧವಾಗಿರುವ ಈ ಪವರ್ ಪ್ಯಾಕ್ ಜ್ಯೂಸ್, ತ್ವಚೆಯ ಅಂದವನ್ನು ಕಾಪಾಡುವುದರಿಂದ ಹಿಡಿದು, ದೇಹದ ತೂಕ ಇಳಿಸುವವರೆಗೆ ಸಹಾಯ ಮಾಡುತ್ತದೆ. 
webdunia

ಈ ಪವರ್-ಪ್ಯಾಕ್ ಜ್ಯೂಸ್ ಅನ್ನು  ಚೀನಾದ ವೈದ್ಯರು ಶ್ವಾಸಕೋಶದ ಕ್ಯಾನ್ಸರ್ ಮತ್ತು ಹಲವು ಇತರ ರೋಗಗಳ ಚಿಕಿತ್ಸೆಗೆ ಉತ್ತಮ ಎಂದು ಸಾಬೀತು ಮಾಡಿದ್ದಾರೆ. ಹಾಗಾದ್ರೆ ಈ ಎಬಿಸಿ ಜ್ಯೂಸ್ ಅಂದ್ರೆ ಏನು? ಅದರ ಇತರ ಪ್ರಯೋಜನಗಳೆನು ಎಂಬುದು ಇಲ್ಲಿದೆ.
ಎಬಿಸಿ ಜ್ಯೂಸ್ ಅಂದರೆ ಸೇಬು, ಬೀಟ್ ರೂಟ್, ಕ್ಯಾರೆಟ್ ಮಿಶ್ರಣಗಳ ಜ್ಯೂಸ್. ಎಲ್ಲಾ ಮೂರು ಜ್ಯೂಸ್ ಗಳು ಉತ್ತಮ ಪ್ರಮಾಣದ ವಿಟಮಿನ್ ಎ ಅನ್ನು ಹೊಂದಿರುತ್ತವೆ,
ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
ಬೀಟ್ರೂಟ್ ಮತ್ತು ಕ್ಯಾರೆಟ್  ಜೊತೆ ಸೇಬು ಹಣ್ಣಿನ ಜ್ಯೂಸ್  ನಿಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಹೃದಯವನ್ನು ವಿವಿಧ ರೋಗಗಳಿಂದ ರಕ್ಷಿಸುತ್ತದೆ.  ಜ್ಯೂಸ್ನಲ್ಲಿ ಕ್ಯಾರೋಟಿನ್ ಸಮೃದ್ಧವಾಗಿರುವುದರಿಂದ ಅದು ನಿಮ್ಮ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿರಿಸುತ್ತದೆ ಎಂದು ಅಧ್ಯಯನಗಳು ಸಾಬೀತು ಮಾಡಿವೆ.
ಕ್ಯಾನ್ಸರ್ ನಿಯಂತ್ರಿಸುತ್ತದೆ
webdunia

ಚೀನೀ ಗಿಡಮೂಲಿಕೆ ತಜ್ಞರು ಈ ಪಾನೀಯವನ್ನು ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿರುವ ರೋಗಿಗಳು ಸೇವಿಸುವುದು ಉತ್ತಮ ಎಂದು ಹೇಳುತ್ತಾರೆ.  ಅಲ್ಲಿ ನಡೆಸಿದ ಅಧ್ಯಯನವೊಂದರ ಪ್ರಕಾರ ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿರುವ ರೋಗಿಗಳು ಇದನ್ನು ಸೇವಿಸಿದ 3 ತಿಂಗಳ ಒಳಗೆ ಸುಧಾರಿಸಿದ್ದಾರೆ. ಇದು ಕ್ಯಾನ್ಸರ್ ಕೋಶಗಳ ಪ್ರಸರಣವನ್ನು ನಿಧಾನಗೊಳಿಸುತ್ತವೆ. ಆದರೆ ಈ ಕ್ಯಾನ್ಸರ್ ಹಂತವನ್ನು ಇದು  ಅವಲಂಬಿಸಿರುತ್ತದೆ.
ನಿಮ್ಮ ಕಣ್ಣಿಗೆ ಒಳ್ಳೆಯದು
webdunia

ನೀವು ಲ್ಯಾಪ್ಟಾಪ್, ಸೆಲ್ ಫೋನ್ಗಳನ್ನು ಹೆಚ್ಚು ಬಳಸುವುದರಿಂದ ಕಣ್ಣುಗಳ ಆರೋಗ್ಯ ಹಾಳಾಗುತ್ತದೆ. ಅದಕ್ಕೆ ಉತ್ತಮ ಪರಿಹಾರ ಎಂದರೆ ದಿನಕ್ಕೆ ಒಂದು ಲೋಟ  ಜ್ಯೂಸ್ ಕುಡಿಯುವುದು. ಇದರಿಂದ  ನಿಮ್ಮ ದೇಹಕ್ಕೆ ಸಾಕಷ್ಟು ವಿಟಮಿನ್ ಎ ದೊರೆಯುತ್ತದೆ ಅದು ನಿಮ್ಮ ಕಣ್ಣಿನ ಸ್ನಾಯುಗಳನ್ನು ಬಲಪಡಿಸುತ್ತದೆ, ನಿಮ್ಮ ದೃಷ್ಟಿಯನ್ನು ಹೆಚ್ಚಿಸುತ್ತದೆ.
ತ್ವಚೆಯ ಅಂದ ಹೆಚ್ಚಿಸುತ್ತದೆ
webdunia

ಈ ಜ್ಯೂಸ್ ಸೇವನೆ ಮಾಡುವುದರಿಂದ ಚರ್ಮದ ಹಲವಾರು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಚರ್ಮದ ಕಲೆಗಳು, ಸುಕ್ಕು, ವಯಸ್ಸಾಗುವಿಗೆ, ಬ್ಲ್ಯಾಕ್ ಹೆಡ್ಸ್, ಫ್ರೆಕ್ಲೆಸ್, ಮೊಡವೆಗಳು ಎಲ್ಲವೂ ದೂರವಾಗುತ್ತದೆ. ಇದನ್ನು ಪ್ರತಿದಿನ ಸೇವಿಸಿ ನೋಡಿ, ಉತ್ತಮ ಪ್ರಯೋಜನ ನೀಡುತ್ತದೆ.
ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ
ಬೀಟ್ ರೂಟ್ ಮತ್ತು ಕ್ಯಾರೆಟ್ ಗಳಲ್ಲಿ ಉತ್ತಮ ಪ್ರಮಾಣದ ಫೈಬರ್ ಇದೆ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ.ಹಾಗಾಗಿ ನಿಮಗೆ ಯಾವುದೇ ಜೀರ್ಣಕ್ರಿಯೆಯ ಸಮಸ್ಯೆಯಿದ್ದಲ್ಲಿ, ಈ ಜ್ಯೂಸ್ ಸೇವನೆ ಮಾಡಿ, ಉತ್ತಮ ಪರಿಣಾಮ ಬೀರುತ್ತದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಈ ಜ್ಯೂಸ್ ಹೆಚ್ಚು ಪರಿಣಾಮಕಾರಿಯಾಗಿದೆ. ಈ ಮೂರು ಪದಾರ್ಥಗಳಲ್ಲಿರುವ ವಿಟಮಿನ್ ಮತ್ತು ಮಿನರಲ್ಗಳು ನಮ್ಮ ಒಟ್ಟಾರೆ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ಇವುಗಳಲ್ಲಿ. ಅನೇಕ ಆಂಟಿ ಆಕ್ಸಿಡೆಂಟುಗಳಿರುವುದರಿಂದ ಅಲರ್ಜಿ ಮತ್ತು ಸೋಂಕುಗಳನ್ನು ಕಡಿಮೆ ಮಾಡುತ್ತದೆ.
ಎಬಿಸಿ ಜ್ಯೂಸ್  ಮಾಡುವ ವಿಧಾನ
ಬೇಕಾಗುವ ಸಾಮಾಗ್ರಿಗಳು
ಸೇಬು- 2,
ಬೀಟ್ ರೂಟ್- 1,
ಕ್ಯಾರೆಟ್- 1,
ಶುಂಠಿ –ಸಣ್ಣ ತುಂಡು
ನಿಂಬೆ ರಸ- ಅರ್ಧ ಚಮಚ
ಮಾಡುವ ವಿಧಾನ
ಸೇಬು ಹಣ್ಣು, ಬೀಟ್ ರೂಟ್ ಮತ್ತು ಕ್ಯಾರೆಟ್ ಗಳನ್ನು ಚೆನ್ನಾಗಿ ಸಿಪ್ಪೆ ಸುಲಿದು ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ. ನಂತರ ಒಂದು ಮಿಕ್ಸಿಯಲ್ಲಿ ಅದನ್ನು ಹಾಕಿ ಅದಕ್ಕೆ ಶುಂಠಿ ತುಂಡನ್ನು ಸೇರಿಸಿ ರುಬ್ಬಿಕೊಳ್ಳಿ. ರುಬ್ಬಿರುವ ಮಿಶ್ರಣವನ್ನು ಸೋಸಿ ಅದಕ್ಕೆ ನಿಂಬೆ ರಸ ಹಾಕಿ ಸೇವನೆ ಮಾಡಿ.


Share this Story:

Follow Webdunia kannada

ಮುಂದಿನ ಸುದ್ದಿ

ತೂಕ ಇಳಿಸುವುದರ ಜೊತೆಗೆ ಮೂಳೆಗಳನ್ನು ಬಲಪಡಿಸುತ್ತದೆ 'ರಾಗಿ'