Webdunia - Bharat's app for daily news and videos

Install App

ಆರೋಗ್ಯಕರವಾದ ಮೆಂತ್ಯಸೊಪ್ಪಿನ ಕಡುಬು

Webdunia
ಸೋಮವಾರ, 3 ಆಗಸ್ಟ್ 2020 (09:08 IST)
ಬೆಂಗಳೂರು : ಮೆಂತ್ಯಸೊಪ್ಪು ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ತಿಳಿದೆ ಇದೆ. ಆದಕಾರಣ ಮಕ್ಕಳಿಗೆ ಅದರಿಂದ ರುಚಿ ರುಚಿಯಾದ ಕಡುಬು ಮಾಡಿಕೊಡಿ.

ಬೇಕಾಗುವ ಸಾಮಾಗ್ರಿಗಳು : 2 ದೊಡ್ಡ ಕಪ್ ಜೋಳದ ಹಿಟ್ಟು, 2 ಟೇಬಲ್ ಸ್ಪೂನ್ ಓಂಕಾಳು, 2 ಟೇಬಲ್ ಸ್ಪೂನ್ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಈರುಳ್ಳಿ 1/2 ಕಪ್, ½ ಕಪ್ ಮೆಂತ್ಯಸೊಪ್ಪು, 2 ಹಸಿಮೆಣಸಿನಕಾಯಿ, ಸ್ವಲ್ಪ ಎಣ್ಣೆ, ಸಾಸಿವೆ, ಜೀರಿಗೆ, ಅರಿಶಿಣ, ಕರಿಬೇವು.

ಮಾಡುವ ವಿಧಾನ : ಒಂದು ಪಾತ್ರೆಯಲ್ಲಿ ಜೋಳದ ಹಿಟ್ಟನ್ನು ಹಾಕಿ ಅದಕ್ಕೆ ಓಂಕಾಳು, ಎಣ್ಣೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ನೀರು ಹಾಕಿ ಚೆನ್ನಾಗಿ ಕಲಿಸಿ. ಅದರ ಮೇಲೆ ಎಣ್ಣೆ ಸವರಿ ನಂತರ ಕೈಗೂ ಸ್ವಲ್ಪ ಎಣ್ಣೆ ಸವರಿಕೊಂಡು ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಅದನ್ನು ಎಣ್ಣೆ ಸವರಿದ ಪಾತ್ರೆಯೊಂದರಲ್ಲಿ ಹಾಕಿಕೊಳ್ಳಿ. ಅದನ್ನು ಕುಕ್ಕರಿನಲ್ಲಿಟ್ಟು 2 ವಿಷಲ್ ಹೊಡಿಸಿ ಅಥವಾ ಇಡ್ಲಿ ಪಾತ್ರೆಯಲ್ಲಾದರೆ 25-30 ನಿಮಿಷ ಬೇಯಿಸಿರಿ.

ಇನ್ನೊಂದು ಕಡೆ  ಒಂದು ಪಾತ್ರೆಯಲ್ಲಿ  ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಜೀರಿಗೆ, ಅರಿಶಿಣ, ಕರಿಬೇವು , ಈರುಳ್ಳಿ, ಮೆಂತ್ಯಸೊಪ್ಪು, ಹಸಿಮೆಣಸಿನಕಾಯಿ ಹಾಕಿ ಮಿಕ್ಸ್ ಮಾಡಿ. ಬೆಂದ ಮೇಲೆ ಅದಕ್ಕೆ ಬೇಯಿಸಿದ ಹಿಟ್ಟಿನ ಉಂಡೆಗಳನ್ನು ಹಾಕಿ ಚೆನ್ನಾಗಿ ಕೈಯಾಡಿಸಿರಿ. ಸ್ವಲ್ಪ ಹೊತ್ತು ಮುಚ್ಚಿಡಿ. ನಂತರ ಆಫ್ ಮಾಡಿದರೆ ಮೆಂತೆ ಕಡುಬು ತಿನ್ನಲು ರೆಡಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ದಿನವೂ ಬಿಸಿಬಿಸಿ ಅನ್ನದ ಜೊತೆ ಉಪ್ಪಿನಕಾಯಿ ತಿನ್ನುತ್ತಿದ್ದರೆ ಏನಾಗುತ್ತದೆ ಗೊತ್ತಾ

ಮಳೆಗಾಲದಲ್ಲೂ ಫಿಟ್ನೆಸ್ ಕಾಪಾಡಲು ಇಲ್ಲಿದೆ ಕೆಲ ಸರಳ ವಿಧಾನಗಳು

ಫ್ಯಾಟಿ ಲಿವರ್ ಇದ್ರೆ ನಿಮಗೆ ಈ ಅನುಭವವಾಗುತ್ತದೆ..ಏನು ಮಾಡಬೇಕು ಇಲ್ಲಿ ನೋಡಿ ವಿವರ

ಎಲ್ಲರೂ ಇಷ್ಟಪಟ್ಟು ತಿನ್ನುವ ರಾಂಬೂಟನ್ ಹಣ್ಣಿನ ಆರೋಗ್ಯ ಪ್ರಯೋಜನ ಇಲ್ಲಿದೆ

ರಾತ್ರಿ ನಿದ್ರೆ ಬರುವವರೆಗೂ ಬೆಡ್ ಮೇಲೆ ಮಲಗಿ ಮೊಬೈಲ್ ನೋಡುತ್ತಿದ್ದರೆ ಇದನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments