Select Your Language

Notifications

webdunia
webdunia
webdunia
Friday, 11 April 2025
webdunia

ಅವಳೊಂದಿಗೆ ಸರಸಕ್ಕೆ ಯಾವ ಸಮಯ ಸೂಕ್ತ?

ಸರಸ
ಬೆಂಗಳೂರು , ಮಂಗಳವಾರ, 18 ಜೂನ್ 2019 (15:00 IST)
ಟೈಮಿಂಗ್ ಎಲ್ಲಾ ಕ್ರಿಯೆಯಲ್ಲೂ ಮುಖ್ಯ. ಸರಿಯಾದ ಸಮಯಕ್ಕೆ ಸರಿಯಾದ ವಿಧಾನದಲ್ಲಿ ಸರಿಯಾದ ಯೋಜನೆಯಂತೆ ಸಮಾಗಮವಾದರೆ ಮುಂದೆ ಎಲ್ಲವೂ ಸುಂದರ. ಈ ಸಮಯ ಶೃಂಗಾರಮಯ, ಆನಂದಮಯ, ನೂತನ ಬಾಳಿನ ನವೋದಯ ವಾಗಬೇಕಾದರೆ ಸಮಯದ ಹೊಂದಾಣಿಕೆ ಮುಖ್ಯ.  

ಜಾತಕ ನೋಡಿ ಮುಹೂರ್ತ ಇಟ್ಟು ಪ್ರಸ್ತ, ಒಸಗೆ, ಶೋಭನ ಅಂತಾ ಆಗೋದು ಮದುವೆ ಸಂಭ್ರಮದಲ್ಲಿದ್ದಾಗ ಮಾತ್ರ.. ಮಿಕ್ಕಂತೆ ನಿಮಗೆ ಮುಹೂರ್ತ ಫಿಕ್ಸ್ ಮಾಡಿಕೊಡೋಕೆ ಯಾವ ಪಂಡಿತರು ಸಿಗಲ್ಲ. ಸಿಕ್ಕರೂ ಫೀ ಕಟ್ಟುವಷ್ಟರಲ್ಲಿ ಸರಸದ ಮೂಡೇ ಮುಕ್ತಾಯವಾಗಿರುತ್ತೆ.

ಹಾಗಾದರೆ ಯಾವುದು ಸೂಕ್ತ ಸಮಯ, ಬೆಳಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿ, ಯಾವುದಾದರೂ ತಿಂಗಳು, ದಿನ ಅಂತಾ ಏನಾದರೂ ಇದ್ಯಾ ಎಂದು ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ.

ನಿಮ್ಮಿಬ್ಬರಲ್ಲಿ ಕಾಮದ ಕಿಚ್ಚು ಹೊತ್ತಿಕೊಂಡ ಯಾವುದೇ ಕ್ಷಣ ಸಮಾಗಮಕ್ಕೆ ಅಣಿಯಾಗಬಹುದು. ಅದುವೇ ನಿಮ್ಮ ಸುರತ ಸಮಯ. ಯಾವ ಸಂದರ್ಭದಲ್ಲಿ ಹೇಗೆ ಮೂಡ್ ಬದಲಾಯಿಸಿ ಡಲ್ ಹೊಡೆಯುವ ಬೆಡ್ ರೂಮಿಗೆ ರೋಮ್ಯಾಂಟಿಕ್ ಕಿಚ್ಚು ಹಚ್ಚಿಸುವುದು ಹೇಗೆ ಮುಂದೆ ಓದಿ...
ಗಾಢನಿದ್ದೆಗೆ ಜಾರುವ ಮುನ್ನ ಸರಸದ ಎಳೆಯೊಂದು ಮನದಲ್ಲಿ ಮೂಡಿ ಬಲವಾದ್ರೆ ನಿಮ್ಮ ಪುರುಷನ ನಿದ್ದೆಯನ್ನು ತಕ್ಷಣಕ್ಕೆ ಹಾಳುಗೆಡವಬೇಡಿ. ಸುಕೋಮಲವಾಗಿ ಮುತ್ತಿಡುತ್ತಾ, ಕೊರಳನ್ನು ಬಳಸಿ ಕಿವಿಯನ್ನು ಮೆಲ್ಲಗೆ ಕಚ್ಚಿ ನಿದ್ರಾಭಂಗ ಮಾಡಿ, ನಿಧಾನವಾಗಿ ಎಚ್ಚರ ಸ್ಥಿತಿಗೆ ಬಂದು ಮತ್ತೇರುವಂತೆ ಮಾಡಿ.

ಬೆಳಕು ಹರಿಯುವುದಕ್ಕೆ ಮುನ್ನ ಪುರುಷ ಸಿಂಹನಿಗೆ ತಮ್ಮ ಶಕ್ತಿ ಪ್ರದರ್ಶನದ ವಾಂಛೆ ಹೆಚ್ಚಾಗುತ್ತದೆ. ಶಾಸ್ತ್ರ ಪುರಾಣ, ವೈದ್ಯರ ಸಂಶೋಧನೆಯಂತೆ ಕೂಡಾ ಮಾರ್ನಿಂಗ್ ಸರಸ ಆರೋಗ್ಯಕರ.  

ವೀಕೆಂಡ್ ವಿಹಾರ ಹೇಳಿ ಮಾಡಿಸಿದ ವಿಧಾನ. ರೆಸಾರ್ಟ್, ಹೋಮ್ ಸ್ಟೇಗಳಲ್ಲಿ ವಾರಾಂತ್ಯ ತಂಗಿದ್ದು, ಆಟೋಟದ ಜತೆಗೆ ಕಾಮದಾಟಕ್ಕೂ ಟೈಮ್ ನೀಡಲು ಒಳ್ಳೆ ಅವಕಾಶವಿತರುತ್ತದೆ.  

 

 

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲ ಸಲ ಮಿಲನಕ್ಕೆ ಈ ಟಿಪ್ಸ್ ಬೆಸ್ಟ್