Select Your Language

Notifications

webdunia
webdunia
webdunia
webdunia

ಅವಳ ಸಂಗ ಸುಖವೆನಿಸುತ್ತಿದೆ ಮಾಡೋದೇನು?

ಅವಳ ಸಂಗ ಸುಖವೆನಿಸುತ್ತಿದೆ ಮಾಡೋದೇನು?
ಬೆಂಗಳೂರು , ಬುಧವಾರ, 19 ಜೂನ್ 2019 (14:19 IST)
ಪ್ರಶ್ನೆ: ನಾನು 35 ವರ್ಷದ ಯುವಕ. ಇನ್ನೂ ಮದುವೆಯಾಗಿಲ್ಲ. ನಮ್ಮ ಸಮುದಾಯದಲ್ಲಿ ಮದುವೆಗಾಗಿ ಹುಡುಗಿಯನ್ನು ಹುಡುಕಿ ಸಾಕಾಗಿ ಹೋಗಿದೆ. ಎಲ್ಲೂ ಹುಡುಗಿ ಸೆಟ್ ಆಗ್ತಿಲ್ಲ.

ಈ ನಡುವೆ ವಯಸ್ಸೂ ಹೆಚ್ಚಾಗುತ್ತಿದೆ. ಹೀಗಾಗಿ ವಯೋಸಹಜ ಆಕರ್ಷಣೆ ಹಾಗೂ ಕುತೂಹಲಕ್ಕಾಗಿ ನಾನು ನನ್ನ ಗೆಳೆಯರೊಂದಿಗೆ ರೆಡ್ ಲೈಟ್ ಏರಿಯಾಕ್ಕೆ ಹೋಗಿದ್ದೆ. ಅಲ್ಲಿ ಕಾಲ್ ಗರ್ಲ್ ಗಳ ಸಹವಾಸ ಮಾಡಿದ್ದೆ. ಅದು ಬಲು ಮಜವಾಗಿ ಕಂಡಿತು. ಹೀಗಾಗಿ ಮತ್ತೆ ಮತ್ತೆ ಹೋಗಿ ಬೇರೆ ಬೇರೆ ಅಲ್ಲಿನ ಹುಡುಗಿಯರೊಂದಿಗೆ ಎಂಜಾಯ್ ಮಾಡ್ತಿರುವೆ. ನನ್ನ ಸಮಸ್ಯೆ ಏನೆಂದರೆ, ಮದುವೆಯಾದ ಮೇಲೆ ನನ್ನಾಕೆಗೆ ಈ ವಿಷಯ ಗೊತ್ತಾದರೆ ಏನ್ಮಾಡಲಿ? ಕಾಲ್ ಗರ್ಲ್ ಗಳ ಸಹವಾಸದಿಂದ ಏನಾದರೂ ತೊಂದರೆ ಇದೆಯೇ ತಿಳಿಸಿ.


ಉತ್ತರ: ಹಗಲು ಕಂಡ ಬಾವಿಗೆ ರಾತ್ರಿ ಬೀಳೋದು ಅಂತ ಹಿರಿಯರು ನಿಮ್ಮ ಈ ನಡೆ ನೋಡಿಯೇ ಹೇಳಿರಬೇಕು. ಕಾಲ್ ಗರ್ಲಗಳ ಸಹವಾಸ ಬಿಟ್ಟುಬಿಡಿ. ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಏಡ್ಸ್ ನಂತಹ ಮಾರಕ ಕಾಯಿಲೆಗಳು ನಿಮ್ಮ ಜೀವವನ್ನೇ ಬಲಿ ತೆಗೆದುಕೊಳ್ಳಬಲ್ಲದು. ಆಕರ್ಷಣೆ ಹಾಗೂ ವಯೋಸಹಜ ಕುತೂಹಲಕ್ಕೆ ನೀವು ಮಾಡಿದ್ದು ತಪ್ಪು.

ನಿಮ್ಮ ಪತ್ನಿಯೂ ನಿಮ್ಮಂತೆ ನಿಮ್ಮ ಮದುವೆಗೂ ಮೊದಲೇ ಬೇರೋಬ್ಬರ ಜತೆ ಇದನ್ನೇ ಮಾಡ್ತಿದ್ದರೆ ಆಗ ಅವರನ್ನು ನೀವು ಸ್ವೀಕಾರ ಮಾಡ್ತಿದ್ದರಾ? ಇಲ್ಲಾ ತಾನೇ? ನೀವು ಪರಿಶುದ್ಧ ಹೆಣ್ಣನ್ನು ಮದುವೆಗೆ ಆಸೆ ಪಡುವಂತೆ ಆಕೆ ಕೂಡ ನನ್ನ ಗಂಡ ಶ್ರೀರಾಮ ನಂತೆ ಇರಲಿ ಎಂದುಕೊಂಡಿರುತ್ತಾಳೆ. ನಿಮ್ಮ ಕ್ಷಣಿಕ ಸುಖಕ್ಕಾಗಿ ಭವಿಷ್ಯವನ್ನ ಬಲಿಕೊಡಬೇಡಿ. ಒಳ್ಳೆಯ ತನ ರೂಢಿಸಿಕೊಳ್ಳಿ. ಖಂಡಿತವಾಗಿ ಉತ್ತಮ ಹುಡುಗಿ ನಿಮ್ಮ ಪತ್ನಿಯಾಗುತ್ತಾಳೆ. ಲೈಂಗಿಕ ಕ್ರಿಯೆಗೆ ಕಾಲ್ ಗರ್ಲ್ ಗಳ ಸಹವಾಸಕ್ಕೆ ಇನ್ಮುಂದೆ ಹೋಗಬೇಡಿ.



Share this Story:

Follow Webdunia kannada

ಮುಂದಿನ ಸುದ್ದಿ

ಪುರುಷರಿಗೆ ಈ ಭಾಗ ಟಚ್ ಮಾಡಿದರೆ ಕಾಮದ ಭಾವನೆ ಹೆಚ್ಚುತ್ತದಂತೆ!