Webdunia - Bharat's app for daily news and videos

Install App

ಡಿವೋರ್ಸ್ಗೆ ಇವೇ ಬಹು ಮುಖ್ಯ ಕಾರಣಗಳು

Webdunia
ಶುಕ್ರವಾರ, 2 ಡಿಸೆಂಬರ್ 2022 (07:04 IST)
ದಾಂಪತ್ಯದಲ್ಲಿ ಸರಳ, ವಿರಸ, ಜಗಳ ಎಲ್ಲವೂ ಇರುತ್ತದೆ. ಸುಖ, ಸಂತೋಷ, ಕೋಪ, ದುಃಖ ಸಂಸಾರದ ಅವಿಭಾಜ್ಯ ಅಂಗ ಎಂದರೂ ತಪ್ಪಾಗಲಾರದು.

ಜಗಳವಾಡುವ ದಂಪತಿಗಳೆಲ್ಲಾ ಪರಸ್ಪರ ಬೇರಾಗುತ್ತಾರೆ ಎನ್ನಲಾಗುವುದಿಲ್ಲ. ಅನ್ಯೋನ್ಯವಾಗಿರುವವರು ಜೀವನಪೂರ್ತಿ ಹಾಗೆಯೇ ಇರುತ್ತಾರೆ ಎಂದುಕೊಳ್ಳುವುದೂ ತಪ್ಪು.

ಕೆಲವೊಂದು ಸನ್ನಿವೇಶಗಳು ದಾಂಪತ್ಯದಲ್ಲಿ ಬಿರುಕು ಮೂಡಲು ಕಾರಣವಾಗುತ್ತವೆ. ಸಾಮಾನ್ಯವಾಗಿ ವಿಚ್ಛೇದನಕ್ಕೆ ಇವೇ ಮುಖ್ಯ ಕಾರಣಗಳಾಗಿರುತ್ತವೆ.

ಸಂವಹನ

ದಾಂಪತ್ಯದಲ್ಲಿ ಸಂವಹನ ಎಂದರೆ, ಜಗಳ ಮಾಡುವುದು, ವಾದಕ್ಕಿಳಿಯುವುದು, ಅಸಮಾಧಾನ ವ್ಯಕ್ತಪಡಿಸುವುದಲ್ಲ. ಸಂಸಾರದಲ್ಲಿ ಮೌನ ವಹಿಸುವುದೂ ಸರಿಯಲ್ಲ. ಈ ನಡೆ ಪ್ರತ್ಯೇಕತೆ ಮತ್ತು ವಿಚ್ಛೇದನಕ್ಕೆ ದಾರಿ ಮಾಡುತ್ತದೆ. ಸಂಸಾರದಲ್ಲಿ ಸಂವಹನ ಅತ್ಯಂತ ನಿರ್ಣಾಯಕ. ಸಂಬಂಧವನ್ನು ಬಲಪಡಿಸಿಕೊಳ್ಳಲು ದಾರಿ ಮಾಡುತ್ತದೆ.

ಸದಾ ಜಗಳ

ಬಾಳಸಂಗಾತಿಯೊಂದಿಗೆ ಸದಾ ಜಗಳವಾಡುವುದು, ನಾಕಾರಾತ್ಮಕವಾಗಿ ಮಾತನಾಡುವುದು ದಾಂಪತ್ಯಕ್ಕೆ ನಿಜವಾಗಿಯೂ ವಿನಾಶಕಾರಿ. ಕಾಲುಕೆರೆದು ಜಗಳ ಮಾಡುವುದು ಸುಖಿ ದಾಂಪತ್ಯಕ್ಕೆ ತಕ್ಕುದಲ್ಲ.

ಅಕ್ರಮ ಸಂಬಂಧ

ಸುಖ ಸಂಸಾರವೊಂದರಲ್ಲಿ ಮತ್ತೊಬ್ಬರ ಎಂಟ್ರಿಯಾದರೆ, ಅದು ದಾಂಪತ್ಯ ಬಿರುಕಿಗೆ ಕಾರಣವಾಗುತ್ತದೆ. ದೈಹಿಕ, ಲೈಂಗಿಕ ಆಸಕ್ತಿಗೆ ಹೊರಗಡೆ ಸಂಬಂಧ ಇಟ್ಟುಕೊಳ್ಳುವುದರಿಂದ ತಮ್ಮ ಸಂಸಾರದ ಸಂಬಂಧ ನಾಶವಾಗುತ್ತದೆ.

ಹಣಕಾಸಿನ ಕೊರತೆ

ಮದುವೆಯಾದ ಮೇಲೆ ಸಂಸಾರ ನಿಭಾಯಿಸುವುದು ಅಷ್ಟು ಸುಲಭವಲ್ಲ. ದಾಂಪತ್ಯದಲ್ಲಿ ಬರೀ ಪ್ರೀತಿಯಷ್ಟೇ ಅಲ್ಲ, ಹಣಕಾಸಿನ ವಿಚಾರ ಕೂಡ ಮುಖ್ಯವಾಗುತ್ತದೆ.

ಆತ್ಮೀಯತೆ

ಯಾರೇ ಆಗಲಿ, ತಮ್ಮ ಸಂಗಾತಿಯೊಂದಿಗೆ ಆತ್ಮೀಯತೆಯ ಬಾಂಧವ್ಯವನ್ನು ನಿರೀಕ್ಷಿಸುತ್ತಾರೆ. ಸಂಗಾತಿಯೊಂದಿಗಿನ ಪ್ರೀತಿ, ಆತ್ಮೀಯತೆ, ಸಂಪರ್ಕದ ಕೊರತೆಯು ದಾಂಪತ್ಯವನ್ನು ಬೇಗನೆ ಹಾಳು ಮಾಡುತ್ತದೆ. 

ಬೇಗ ಮದುವೆ ಮಾಡುವುದು

ಒಂದು ಸಂಸಾರ ಚೆನ್ನಾಗಿ ನಡೆಯಬೇಕು ಎಂದರೆ, ಮದುವೆ ಮಾಡುವಾಗ ಕೆಲವು ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಅನೇಕರು ತಮ್ಮ ಸಂಗಾತಿಯನ್ನು ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿರುತ್ತಾರೆ.

ಬಾಳಸಂಗಾತಿ ಆಯ್ಕೆಗೆ ಒಂದಷ್ಟು ಸಮಯಾವಕಾಶ ನೀಡದಿರುವುದು, ಮುಂದೆ ವಿಚ್ಛೇದನದಂತಹ ದಾರಿಗಳಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ