Select Your Language

Notifications

webdunia
webdunia
webdunia
webdunia

ಗಂಡನಿಗೆ ಡಿವೋರ್ಸ್ ಕೊಡುವೆ ಮದ್ವೆ ಆಗು ಅಂತ ಮೊದಲ ಪ್ರೇಯಸಿ ಹೇಳ್ತಿದ್ದಾಳೆ...

ಗಂಡನಿಗೆ ಡಿವೋರ್ಸ್ ಕೊಡುವೆ ಮದ್ವೆ ಆಗು ಅಂತ ಮೊದಲ ಪ್ರೇಯಸಿ ಹೇಳ್ತಿದ್ದಾಳೆ...
ಬೆಂಗಳೂರು , ಬುಧವಾರ, 10 ಏಪ್ರಿಲ್ 2019 (19:30 IST)
ಪ್ರಶ್ನೆ: ನಾನು 33 ವರ್ಷದ ಗೃಹಸ್ಥ. ನನ್ನ ಕಾಲೇಜಿನ ದಿನಗಳಲ್ಲಿ ನಾನು ನಮ್ಮ ಸಂಬಂಧಿಕರಲ್ಲಿ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದೆ. ಆಗ ನನಗೆ 20 ವರ್ಷವಾಗಿದ್ದರೆ, ಆಕೆಗೆ 18 ವಯಸ್ಸಾಗಿತ್ತು. ಸಂಬಂಧಿಕರು ಆಗಿದ್ದರಿಂದ ನನ್ನ ಹಾಗೂ ಆಕೆ ನಡುವೆ ಸಲುಗೆ ಬೆಳೆಯಿತು. ಕೊನೆಗೆ ಪ್ರೀತಿಸಲು ಶುರುಮಾಡಿದೆವು. ಮದುವೆ ಆಗೋ ನಿರ್ಧಾರಕ್ಕೆ ಇಬ್ಬರೂ ಬಂದೆವು. ಹೀಗಾಗಿ ಪರಸ್ಪರ ಒಪ್ಪಿಗೆ ಹಾಗೂ ಇಚ್ಛೆಗೆ ಅನುಸಾರವಾಗಿ ನಾನು ಆಕೆಯನ್ನು ಆ ಸಮಯದಲ್ಲಿಯೇ ಸಂಭೋಗ ಮಾಡಿದೆ. ಮೊದಲ ಮಿಲನದ ನಂತರ ಕಡೆಪಕ್ಷ ವಾರಕ್ಕೆ ಒಮ್ಮೆಯಾದರೂ ನಾವು ಒಂದಾಗಿ ಯಾರೂ ಇಲ್ಲದ ಕಡೆ ಸೇರಿ ರತಿಕ್ರೀಡೆ ಆಡುತ್ತಿದ್ದೆವು. ಆದರೆ ಹೀಗೆ ನಮ್ಮ ಕಾಮದಾಟ ಒಂದೆರಡು ವರ್ಷ ನಡೆಯಿತು. ಆಗ ಅವರ ಮನೆಯಲ್ಲಿ ನನ್ನ ಜತೆ ಮದುವೆ ಮಾಡಿಕೊಡುವುದಕ್ಕೆ ನಿರಾಕರಿಸಿದರು. ನನ್ನ ವಿರುದ್ಧ ಗರಂ ಆದ ಆಕೆಯ ಮನೆಯವರು ಯಾರಿಗೂ ತಿಳಿಯದಂತೆ ನನ್ನ ಪ್ರೇಯಸಿಯನ್ನು ಬೇರೆ ಹುಡುಗನಿಗೆ ಕೊಟ್ಟು ಮದುವೆ ಮಾಡಿಬಿಟ್ರು. ಇದಾಗಿ ಹತ್ತು ವರ್ಷಗಳೇ ಕಳೆಯುತ್ತಿವೆ. ಆಕೆಗೆ ಮಗು ಆಗಿಲ್ಲ. ಹೀಗಾಗಿ ನನ್ನ ನಂಬರ್ ಹೇಗೋ ಪಡೆದಿರುವ ಅವಳು ಕರೆ ಮಾಡಿ ನಾನು ನನ್ನ ಗಂಡನನ್ನು ಬಿಡುತ್ತೇನೆ. ನಿನಗಾಗಿ ಮಗು ಮಾಡಿಕೊಂಡಿಲ್ಲ. ನನ್ನ ಮಗುವಿಗೆ ನಿನೇ ತಂದೆಯಾಗು ಅಂತೆಲ್ಲ ಹೇಳುತ್ತಿದ್ದಾಳೆ. ನನಗೆ ಮದುವೆಯಾಗಿ 4 ವರ್ಷಗಳಾಗಿದ್ದು ಒಂದು ಗಂಡು ಮಗು ಇದೆ. ಆಕೆ ಗಂಡನನ್ನು ಬಿಟ್ಟು ಬರೋಕೆ ರೆಡಿಯಾಗಿದ್ದಾಳೆ. ಪರಿಹಾರ ತಿಳಿಸಿ.

ಉತ್ತರ: ನೀವು ಯೌವನದಲ್ಲಿ ಪರಸ್ಪರ ಆಕರ್ಷಣೆಗೆ ಒಳಗಾಗಿ ವಯೋಸಹಜವಾಗಿ ಪ್ರೀತಿ ಮಾಡಿರಬಹುದು. ಅಥವಾ ನಿಮ್ಮದು ನಿಜವಾದ ಪ್ರೀತಿಯೇ ಆಗಿರಬಹುದು. ಆದರೆ ನಿಮ್ಮ ಪ್ರೇಯಸಿಗೆ ನಿಮಗಿಂತ ಐದಾರು ವರ್ಷ ಮೊದಲೇ ಮದುವೆಯಾಗಿದೆ. ಆಕೆ ಈಗ ಗೃಹಿಣಿ. ಇನ್ನೊಬ್ಬರ ಮನೆಬೆಳಗುವ ಹೆಣ್ಣು. ನೀವು ಕೂಡ ಮದುವೆಯಾಗಿ ಮುದ್ದಾದ ಮಗುವಿನ ತಂದೆಯಾಗಿದ್ದೀರಿ. ಮದುವೆ ಆಗುವುದಕ್ಕೂ ಮೊದಲೇ ಆಕೆ ನಿಮ್ಮನ್ನು ಮನೆಯವರ ವಿರೋಧದ ನಡುವೆಯೂ ಮದುವೆಯಾಗಬಹುದಿತ್ತು. ಆದರೆ ಹಾಗೆ ಮಾಡಿಲ್ಲ. ಕಾರಣ ಏನೇ ಇರಬಹುದು. ಅದು ಈಗ ಬೇಡ. ನಿಮಗೂ ಮಡದಿ, ಮಕ್ಕಳಿದ್ದಾರೆ. ಆಕೆಯ ಗಂಡನ ಕುಡಿತದಿಂದಾಗಿ ಆಕೆ ಮಾನಸಿಕ ಹಾಗೂ ದೈಹಿಕ ಹಿಂಸೆ ಅನುಭವಿಸುತ್ತಿದ್ದಾಳೆ.

ಆಕೆಯ ಗಂಡ ನಿಮ್ಮ ಪ್ರೇಯಸಿಗೆ ಹೊಡೆಯುತ್ತಿದ್ದಾನೆ ಎಂದೆಲ್ಲ ತಿಳಿಸಿದ್ದೀರಿ. ಒಂದು ವೇಳೆ ನಿಮ್ಮ ಮೊದಲಿನ ಪ್ರೇಯಸಿಗೆ ಉತ್ತಮ ಗಂಡ ಸಿಕ್ಕಿದ್ದು, ಶ್ರೀಮಂತನಾಗಿದ್ದರೆ, ಅವಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರೆ ಆಗ ನಿಮ್ಮ ನೆನಪು ಆಗುತ್ತಿತ್ತಾ? ಒಮ್ಮೆ ಯೋಚಿಸಿ. ಮೊದಲಿನ ಪ್ರೀತಿಯನ್ನು ಮರೆತು ಬಿಡಿ. ಇದರಿಂದ ಅನಾಹುತಗಳೇ ಹೆಚ್ಚು. ನಿಮ್ಮ ಪತ್ನಿ, ಮಗುವಿಗೆ ನಿಮ್ಮ ಪ್ರೀತಿಯನ್ನು ಜೀವನಪೂರ್ಣ ಧಾರೆ ಎರೆಯಿರಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬೇಸಿಗೆಯಲ್ಲಿ ಹೊಟ್ಟೆಉರಿ, ಗ್ಯಾಸ್ ಸಮಸ್ಯೆ ಹೋಗಲಾಡಿಸಲು ಊಟದ ನಂತರ ಇದನ್ನು ತಿನ್ನಿ