Webdunia - Bharat's app for daily news and videos

Install App

ಗಂಡ ಇದ್ರೂ ಅವಳ ಮಗುವಿಗೆ ನಾನೇ ಅಪ್ಪ ಆಗಬೇಕಾ?

Webdunia
ಸೋಮವಾರ, 29 ಜುಲೈ 2019 (13:56 IST)
ಪ್ರಶ್ನೆನಾನು 33 ವರ್ಷದ ಗೃಹಸ್ಥ. ಕಾಲೇಜಿನ ದಿನಗಳಲ್ಲಿ ನಮ್ಮ ಸಂಬಂಧಿಕರಲ್ಲಿ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದೆ. ಆಗ ನನಗೆ 20 ವರ್ಷವಾಗಿದ್ದರೆ, ಆಕೆಗೆ 18 ವಯಸ್ಸಾಗಿತ್ತು. ಸಂಬಂಧಿಕರು ಆಗಿದ್ದರಿಂದ ಪ್ರೀತಿಸಲು ಶುರುಮಾಡಿದೆವು. ಮದುವೆ ಆಗೋ ನಿರ್ಧಾರಕ್ಕೆ ಇಬ್ಬರೂ ಬಂದೆವು. ಹೀಗಾಗಿ ಪರಸ್ಪರ ಒಪ್ಪಿಗೆ ಹಾಗೂ ಇಚ್ಛೆಗೆ ಅನುಸಾರವಾಗಿ ನಾನು ಆಕೆಯನ್ನು ಆ ಸಮಯದಲ್ಲಿಯೇ ಸಂಭೋಗ ಮಾಡಿದೆ. ಮೊದಲ ಮಿಲನದ ನಂತರ ಕಡೆಪಕ್ಷ ವಾರಕ್ಕೆ ಒಮ್ಮೆಯಾದರೂ ನಾವು ಒಂದಾಗಿ ಯಾರೂ ಇಲ್ಲದ ಕಡೆ ಸೇರಿ ರತಿಕ್ರೀಡೆ ಆಡುತ್ತಿದ್ದೆವು.

ಆದರೆ ಹೀಗೆ ನಮ್ಮ ಕಾಮದಾಟ ಒಂದೆರಡು ವರ್ಷ ನಡೆಯಿತು. ಆಗ ಅವರ ಮನೆಯಲ್ಲಿ ನನ್ನ ಜತೆ ಮದುವೆ ಮಾಡಿಕೊಡುವುದಕ್ಕೆ ನಿರಾಕರಿಸಿದರು.  ಆಕೆಗೆ ಬೇರೊಬ್ಬನ ಜತೆ ಮದುವೆಯಾಗಿದೆ. ಆದರೆ ಮಗು ಆಗಿಲ್ಲ. ಹೀಗಾಗಿ ನನ್ನ ನಂಬರ್ ಹೇಗೋ ಪಡೆದಿರುವ ಅವಳು ಕರೆ ಮಾಡಿ ನಾನು ನನ್ನ ಗಂಡನನ್ನು ಬಿಡುತ್ತೇನೆ. ನಿನಗಾಗಿ ನಾನು ಮಗು ಮಾಡಿಕೊಂಡಿಲ್ಲ. ನನ್ನ ಮಗುವಿಗೆ ನಿನೇ ತಂದೆಯಾಗು ಅಂತೆಲ್ಲ ಹೇಳುತ್ತಿದ್ದಾಳೆ. ನನಗೆ ಮದುವೆಯಾಗಿ 4 ವರ್ಷಗಳಾಗಿದ್ದು ಒಂದು ಗಂಡು ಮಗು ಇದೆ. ಆಕೆ ಗಂಡನನ್ನು ಬಿಟ್ಟು ಬರೋಕೆ ರೆಡಿಯಾಗಿದ್ದಾಳೆ. ಪರಿಹಾರ ತಿಳಿಸಿ.

ಉತ್ತರ: ನೀವು ಯೌವನದಲ್ಲಿ ಪರಸ್ಪರ ಆಕರ್ಷಣೆಗೆ ಒಳಗಾಗಿ ವಯೋಸಹಜವಾಗಿ ಪ್ರೀತಿ ಮಾಡಿರಬಹುದು. ಅಥವಾ ನಿಮ್ಮದು ನಿಜವಾದ ಪ್ರೀತಿಯೇ ಆಗಿರಬಹುದು. ಆದರೆ ನಿಮ್ಮ ಪ್ರೇಯಸಿಗೆ ನಿಮಗಿಂತ ಐದಾರು ವರ್ಷ ಮೊದಲೇ ಮದುವೆಯಾಗಿದೆ. ಆಕೆ ಈಗ ಗೃಹಿಣಿ. ಇನ್ನೊಬ್ಬರ ಮನೆಬೆಳಗುವ ಹೆಣ್ಣು. ನೀವು ಕೂಡ ಮದುವೆಯಾಗಿ ಮುದ್ದಾದ ಮಗುವಿನ ತಂದೆಯಾಗಿದ್ದೀರಿ. ಮದುವೆ ಆಗುವುದಕ್ಕೂ ಮೊದಲೇ ಆಕೆ ನಿಮ್ಮನ್ನು ಮನೆಯವರ ವಿರೋಧದ ನಡುವೆಯೂ ಮದುವೆಯಾಗಬಹುದಿತ್ತು. ಆದರೆ ಹಾಗೆ ಮಾಡಿಲ್ಲ. ಕಾರಣ ಏನೇ ಇರಬಹುದು. ಅದು ಈಗ ಬೇಡ. ನಿಮಗೂ ಮಡದಿ, ಮಕ್ಕಳಿದ್ದಾರೆ. ಆಕೆಯ ಗಂಡನ ಕುಡಿತದಿಂದಾಗಿ ಆಕೆ ಮಾನಸಿಕ ಹಾಗೂ ದೈಹಿಕ ಹಿಂಸೆ ಅನುಭವಿಸುತ್ತಿದ್ದಾಳೆ.

ಆಕೆಯ ಗಂಡ ನಿಮ್ಮ ಪ್ರೇಯಸಿಗೆ ಹೊಡೆಯುತ್ತಿದ್ದಾನೆ ಎಂದೆಲ್ಲ ತಿಳಿಸಿದ್ದೀರಿ. ಒಂದು ವೇಳೆ ನಿಮ್ಮ ಮೊದಲಿನ ಪ್ರೇಯಸಿಗೆ ಉತ್ತಮ ಗಂಡ ಸಿಕ್ಕಿದ್ದು, ಶ್ರೀಮಂತನಾಗಿದ್ದರೆ, ಅವಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರೆ ಆಗ ನಿಮ್ಮ ನೆನಪು ಆಗುತ್ತಿತ್ತಾ? ಒಮ್ಮೆ ಯೋಚಿಸಿ. ಮೊದಲಿನ ಪ್ರೀತಿಯನ್ನು ಮರೆತು ಬಿಡಿ. ಇದರಿಂದ ಅನಾಹುತಗಳೇ ಹೆಚ್ಚು. ನಿಮ್ಮ ಪತ್ನಿ, ಮಗುವಿಗೆ ನಿಮ್ಮ ಪ್ರೀತಿಯನ್ನು ಜೀವನಪೂರ್ಣ ಧಾರೆ ಎರೆಯಿರಿ. 


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

ಹೀಗೇ ಮಾಡಿದರೆ ಮಕ್ಕಳಲ್ಲಿ ಕಟ್ಟುನಿಟ್ಟಾಗಿರದೆ ಶಿಸ್ತುಬದ್ಧವಾಗಿ ಬೆಳೆಸಬಹುದು

Men health: ಪುರುಷರಲ್ಲಿ ಬಂಜೆತನ ನಿವಾರಣೆಯಾಗಬೇಕೆಂದರೆ ಇದೊಂದು ಜ್ಯೂಸ್ ಸಾಕು

Baby tips: ಚಿಕ್ಕ ಮಕ್ಕಳಿಗೆ ತಲೆನೋವಾಗುತ್ತಿದ್ದರೆ ಇದುವೇ ಬೆಸ್ಟ್ ಮೆಡಿಸಿನ್

ನಿಮ್ಮ ಮಕ್ಕಳ ಶಬ್ದ ಭಂಡಾರವನ್ನು ಹೆಚ್ಚಿಸಲು ಇಲ್ಲಿದೆ ಕೆಲ ಟಿಪ್ಸ್‌

ಮುಂದಿನ ಸುದ್ದಿ
Show comments