Webdunia - Bharat's app for daily news and videos

Install App

ಡ್ಯಾನ್ಸ್ ಮಾಡುವಾಗ ಸ್ಥನಗಳು ಕುಣಿಯುತ್ತವೆ…

Webdunia
ಶುಕ್ರವಾರ, 22 ಮಾರ್ಚ್ 2019 (16:06 IST)
ಸಮಸ್ಯೆ: ನಾನು 20 ವರ್ಷದ ಸುಂದರ ಯುವತಿ. ಕಾಲೇಜ್ಗೆ ಹೋಗ್ತಾ ಇದ್ದೇನೆ. ಮುಖ್ಯವಾಗಿ ನಾನು ಡ್ಯಾನ್ಸರ್. ಭರತನಾಟ್ಯ ಹಾಗೂ ವೆಸ್ಟರ್ನ್ ಡ್ಯಾನ್ಸ್ ಮಾಡುತ್ತೇನೆ. ಹಲವಾರು ಪ್ರಶಸ್ತಿಗಳು ಬಂದಿವೆ. ನನ್ನ ಸಮಸ್ಯೆ ಏನೆಂದರೆ ಬಲಸ್ತನಕ್ಕಿಂತ ಎಡಸ್ತನ ದೊಡ್ಡದಾಗಿದೆ. ಅಲ್ಲದೆ ತೊಟ್ಟುಗಳೂ ಸಹ ಬೇರೆಬೇರೆ ಗಾತ್ರದಲ್ಲಿರುತ್ತದೆ. ನನಗೆ ಡ್ಯಾನ್ಸ್ ಮಾಡಬೇಕಾಗಿರುವುದರಿಂದ ಸ್ತನಗಳು ನೆಗೆಯುತ್ತವೆ. ಇತ್ತೀಚೆಗೆ ನನ್ನ ಮೊಲೆಗಳು ಜೋತುಬಿದ್ದಿವೆ. ಇದರಿಂದ ನನಗೆ ತುಂಬಾ ಸಮಸ್ಯೆಯಾಗುತ್ತದೆ. ಏನ್ಮಾಡಲಿ ಪರಿಹಾರ ಹೇಳಿ ಸರ್…

ಸಲಹೆ:  ಹಾಗೆ ನೋಡಿದರೆ ನಿಮ್ಮದು ಒಂದು ಸಮಸ್ಯೆಯೇ ಅಲ್ಲ. ಸಾಮಾನ್ಯವಾಗಿ ಎಡಸ್ತನವು ಬಲಸ್ತನಕ್ಕಿಂತ ಹಿರಿದಾಗಿರುತ್ತದೆ. ಸಾಮಾನ್ಯವಾಗಿ ಇದು ಗೊತ್ತಾಗುವುದಿಲ್ಲ. ಅಲ್ಲದೆ ಕೆಲವರಲ್ಲಿ ತೊಟ್ಟುಗಳೂ ಸಹ ಬೇರೆಬೇರೆ ಸ್ತಾನದಲ್ಲಿರುತ್ತದೆ. ಇದರಿಂದ ಯಾವುದೇ ಸಮಸ್ಯೆ ಇಲ್ಲ. ಹೆಚ್ಚಿನ ಹೆಣ್ಣಿನ ಸ್ತನದಲ್ಲಿ ಕೂದಲುಗಳಿರುತ್ತದೆ. ಅಲ್ಲದೆ ಕೆಲವರ ಸ್ತನಗಳಲ್ಲಿ ಮೊಡವೆ ಕೂಡಾ ಕಾಣಿಸಿಕೊಳ್ಳಬಹುದು

ಸ್ತ್ರೀಯರು ಲೈಂಗಿಕವಾಗಿ ಉದ್ರೇಕಗೊಂಡಾಗ ಮೊಲೆಗಳು ಉಬ್ಬುತ್ತವೆ. ಮೊಲೆಗಳ ಗಾತ್ರದಲ್ಲಿ ಕೊಂಚ ಹೆಚ್ಚಳವಾಗುವುದರಿಂದ ಹಾಕಿರುವ ಬ್ರಾ ಬಿಗಿಯಾಗಬಹುದು. ಇದರಿಂದ ರಕ್ತಸಂಚಾರಕ್ಕೆ ಸಮಸ್ಯೆಯಾಗುವ ಸಾಧ್ಯತೆ ಇದೆ.

ನೀವು ಡ್ಯಾನ್ಸರ್ ಆಗಿರುವುದರಿಂದ ಮೊಲೆ ಜೋತು ಬೀಳುವ ಸಾಧ್ಯತೆ ಇರುತ್ತದೆ. ಡ್ಯಾನ್ಸ್ ಮಾಡುವಾಗ ಮೊಲೆಗಳು ವಿಪರೀತವಾಗಿ ಪುಟಿದೇಳುವುದರಿಂದ ಪುಟಿತವನ್ನು ನಿಯಂತ್ರಿಸಲು ಸರಿಯಾಗಿ ಹೊಂದಿಕೆಯಾಗುವ ಬ್ರಾ ಧರಿಸುವುದು ಉತ್ತಮ. ರಾತ್ರಿ ಮಲಗುವಾಗ ಮುಖಕೆಳಗೆ ಮಾಡಿ ಮಲಗಿದರೆ ಮೊಲೆಗಳು ಆಕಾರ ಕಳೆದುಕೊಳ್ಳುವ ಸಂಭವವೂ ಇದೆ.

ಆದ್ದರಿಂದ ಮಲಗುವ ಭಂಗಿಯಲ್ಲಿ ವಿಶೇಷ ಜಾಗರೂಕತೆ ವಹಿಸಿ. ರಾತ್ರಿ ಮಲಗುವಾಗ ಬ್ರಾ ಕಳಚುವುದು ಮುಖ್ಯ. ಯಾಕೆಂದರೆ ಬಿಗಿಯಾದ ಬ್ರಾದಿಂದ ದೇಹದಲ್ಲಿ ರಕ್ತಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ. ಮೊಲೆಗಳನ್ನು ಸುಂದರವಾಗಿ ಮಾಡಲಾಗುವುದು ಎಂಬ ಜಾಹೀರಾತು ನಂಬಬೇಡಿ. ಇವೆಲ್ಲಾ ಹಣಮಾಡುವ ತಂತ್ರಗಳು. ಮೊಲೆಗಳ ಬಗ್ಗೆ ಇರುವ ಕೀಳರಿಮೆಯನ್ನು ಬಿಟ್ಟು ಡ್ಯಾನ್ಸ್ನಲ್ಲಿ ಉತ್ತಮ ಹೆಸರು ಸಂಪಾದಿಸಿ. ಗುಡ್ ಲಕ್.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ
Show comments