ನಾನು ಉದ್ಯಮ ಕುಟುಂಬದಿಂದ ಬಂದಿದ್ದೇನೆ. ವಿವಾಹವಾಗಿದ್ದು ಪತಿಯೊಂದಿಗೆ ತುಂಬಾ ಸಂತೋಷದಿಂದ ಕಾಲ ಕಳೆಯುತ್ತಿದ್ದೆ. ಆದರೆ, ದಿನಗಳೆದಂತೆ ನನ್ನ ಪತಿಯ ಕುಟುಂಬದಲ್ಲಿರುವ ಗಂಡಸರಿಗೆ ಪತ್ನಿಯರ ಮೇಲೆ ಯಾವುದೇ ಗೌರವ ತೋರುತ್ತಿರಲಿಲ್ಲ. ಅದರಲ್ಲಿ ಕೆಲವರು ಬೇರೆ ಯುವತಿಯರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ.
ಅವರ ಪತ್ನಿಯರಿಗೆ ಪತಿಯ ಅನೈತಿಕ ಸಂಬಂಧದ ಮಾಹಿತಿಯಿದೆ. ಆರು ತಿಂಗಳುಗಳ ಹಿಂದೆ ನನ್ನ ಪತಿ ತಮ್ಮ ಕಚೇರಿಯಲ್ಲಿನ ಯುವತಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದು ನೋಡಿದೆ. ಪತಿ ಮನೆಗೆ ಬಂದಾಗ ನಾನು ಅಳುತ್ತಿರುವುದು ನೋಡಿ ನೀನು ಯಾಕೆ ಪರಪುರುಷನೊಂದಿಗೆ ಸಂಬಂಧ ಬೆಳೆಸಬಾರದು ಎಂಜಾಯ್ ಮಾಡು ಎಂದು ಸುಲಭವಾಗಿ ಹೇಳುತ್ತಿದ್ದಾರೆ ಏನು ಮಾಡಲಿ?ದಯವಿಟ್ಟು ತಿಳಿಸಿ.
ಮಾನಸಿಕ ವೈದ್ಯೆಯಾದ ರಚನಾ ಅವತರಾಮಣಿ ಹೇಳಿಕೆ ಪ್ರಕಾರ, ಕೆಲ ಸಮುದಾಯಗಳಲ್ಲಿ ಪೋಷಕರು ಅರೇಂಜ್ ಮ್ಯಾರೇಜ್ ಮಾಡುವುದಲ್ಲದೇ ಕುಟುಂಬವನ್ನು ನೋಡಿಕೊಳ್ಳುವಂತೆ ನಿರೀಕ್ಷಿಸುತ್ತಾರೆ.
ಪತಿಯನ್ನು ಪ್ರೀತಿಯಿಂದ ನೋಡಿಕೊಂಡು ಅವರ ಅನೈತಿಕ ಸಂಬಂಧದ ಬಗ್ಗೆ ಕುಳಿತು ಮಾತನಾಡಿ. ಅದರಿಂದ ಎದುರಾಗುವ ಕೆಟ್ಟ ಪರಿಸ್ಥಿತಿಗಳ ಬಗ್ಗೆ ಮನವರಿಗೆ ಮಾಡಿ. ಕುಟುಂಬದಲ್ಲಿರುವ ಪ್ರಮುಖ ಸದಸ್ಯರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಿ. ಮೌನವಾಗಿರುವುದರಿಂದ ಸಮಸ್ಯೆಗೆ ಪರಿಹಾರ ದೊರೆಯುವುದಿಲ್ಲ.
ಒಂದೋ ಪತಿಯೊಂದಿಗೆ ಬಾಳಬೇಕು. ಇಲ್ಲವೇ ಪತಿಗೆ ವಿಚ್ಚೇದನ ನೀಡಿ ಗೌರವಯುತವಾದ ಬಾಳು ಬಾಳಬೇಕು. ವಿವಾಹ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಿ. ಕೊನೆಗೆ ಪತಿಯಿಂದ ವಿಚ್ಚೇದನ ಪಡೆಯುವ ಅವಕಾಶ ನಿಮಗಿದೆ.