ದೀಪಾವಳಿ ಹಬ್ಬ ಎಂದರೆ ಕಿರಿಯರಿಂದ ಹಿರಿಯರವರೆಗೆ ಎಲ್ಲರಿಗೂ ಖುಷಿ ಕೊಡುವಂತವ ಹಬ್ಬವಾಗಿದೆ. ಒಂದೇ ಮನೆಯಲ್ಲಿ ವಿವಿಧ ರೀತಿಯ ಅಭಿರುಚಿಗಳನ್ನು ಕಾಣಬಹುದು.ಈ ಹಬ್ಬ ಬಂತೆಂದರೆ ಮಹಿಳೆಯರಿಗೆ ತುಂಬಾ ವಿಶೇಷವಾಗಿ ಮನೆಯನ್ನು ಅಲಂಕರಿಸಬೇಕು, ಹಬ್ಬಕ್ಕೆ ವಿವಿಧ ರೀತಿಯ ತಿನಿಸುಗಳನ್ನು ತಯಾರಿಸಬೇಕು ಇವೆಲ್ಲ ಮಹಿಳೆಯರ ಅಸಕ್ತಿದಾಯಕ ಕೆಲಸಗಳಾಗಿರುತ್ತವೆ. ಅದೇ ರೀತಿ ಮಕ್ಕಳಿಗೆ ಪಟಾಕಿ ಅಚ್ಚುವುದೆಂದರೆ ತುಂಬಾ ವಿಶೇಷವಾದ ಆಸಕ್ತಿ ಹಾಗೂ ಖುಷಿ ಕೂಡ ಹೌದು. ಆರೋಗ್ಯದ ದೃಷ್ಟಿಯಿಂದ ಹೆಚ್ಚು ಶಬ್ಧ ಬರುವಂತಹ ಪಟಾಕಿಗಳನ್ನು ಮಕ್ಕಳಿಗೆ ಕೊಡಬೇಡಿ. ಅದರ ಬದಲು ತುಂಬಾ ವಿಶೇಷವಾದ ಎಲ್ಲರಿಗೂ ಇಷ್ಟವಾಗುವಂತೆ ಮನೆಯ ತುಂಬಾ ದೀವಿಗೆ ಹಚ್ಚುವುದರ ಮೂಲಕ ನಿಮ್ಮ ಮನೆಯವರ ಸುಖ,ಶಾಂತಿ, ನೆಮ್ಮದಿ ಕಾಪಾಡಿಕೊಳ್ಳಿ ಇದು ಆರೋಗ್ಯ ಜೀವನಕ್ಕೆ ಉತ್ತಮ.