Select Your Language

Notifications

webdunia
webdunia
webdunia
webdunia

ಜೀರ್ಣಕ್ರಿಯೆ ಸಮಸ್ಯೆಯಿದ್ದಲ್ಲಿ ಈ ಪದಾರ್ಥಗಳನ್ನು ಬಳಸಿ ನೋಡಿ

ಜೀರ್ಣಕ್ರಿಯೆ ಸಮಸ್ಯೆಯಿದ್ದಲ್ಲಿ ಈ ಪದಾರ್ಥಗಳನ್ನು ಬಳಸಿ ನೋಡಿ
ಬೆಂಗಳೂರು , ಸೋಮವಾರ, 6 ಸೆಪ್ಟಂಬರ್ 2021 (07:06 IST)
Health Care: ದಿನನಿತ್ಯದ ಕೆಲಸದ ಒತ್ತಡ, ಜಡ ಜೀವನಶೈಲಿ ಮತ್ತು ಸರಿಯಾದ ಸಮಯಕ್ಕೆ ತಿನ್ನದಿರುವುದು, ಅತಿಯಾಗಿ ತಿನ್ನುವುದು ಅಥವಾ ಪ್ರಯಾಣದಲ್ಲಿರುವಾಗ ತಿನ್ನುವುದು ಹೀಗೆ ಮುಂತಾದ ಕಾರಣಗಳು ಜೀರ್ಣಾಂಗ ವ್ಯವಸ್ಥೆಯನ್ನು ಹಾಳು ಮಾಡುತ್ತದೆ. ಇದರ ಪರಿಣಾಮವಾಗಿ, ನಾವು ಗ್ಯಾಸ್, ಅಜೀರ್ಣ, ಹೊಟ್ಟೆ ನೋವು, ಮತ್ತು ಅತಿಸಾರ ಮತ್ತು ಇತರ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ದೇಹವು ಆರೋಗ್ಯ ಉತ್ತಮವಾಗಿದೆಯಾ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುವಲ್ಲಿ ಜೀರ್ಣಕ್ರಿಯೆಯು ಬಹಳ ಮಹತ್ವದ ಪಾತ್ರ ವಹಿಸುತ್ತದೆ.

ಜೀರ್ಣಕ್ರಿಯೆಯು ಕೇವಲ ನಮ್ಮ ದೇಹಕ್ಕೆ ಶಕ್ತಿ ಮತ್ತು ಅಗತ್ಯ ಪೋಷಕಾಂಶಗಳನ್ನು ಒದಗಿಸುವ ಪ್ರಕ್ರಿಯೆಯಲ್ಲ, ಬದಲಾಗಿ ಉತ್ತಮ ಜೀರ್ಣಾಂಗ ವ್ಯವಸ್ಥೆ ಒಂದು ಆಧಾರವಾಗಿದೆ.  ನಿಮ್ಮ ಜೀರ್ಣಕ್ರಿಯೆ ಹೆಚ್ಚಿಸಲು ಸಹಾಯ ಮಾಡುವ ಆಯುರ್ವೇದ ಗಿಡಮೂಲಿಕೆಗಳ ಪಟ್ಟಿ ಇಲ್ಲಿದೆ .
ಜೀರಿಗೆ
ಭಾರತೀಯರು ಸಾಮಾನ್ಯವಾಗಿ ಜೀರಿಗೆಯನ್ನು ಹೆಚ್ಚು ಬಳಕೆ ಮಾಡುತ್ತಾರೆ.  ಜೀರ್ಣಕ್ರಿಯೆ ಸಮಸ್ಯೆಗಳಿಂದ ಸ್ವಲ್ಪ ಪರಿಹಾರವನ್ನು ಈ ಜೀರಿಗೆ ನೀಡುತ್ತದೆ. ಉದಾಹರಣೆಗೆ ಗ್ಯಾಸ್ ಸಮಸ್ಯೆಗೆ ಜೀರಿಗೆ ಉತ್ತಮ ಮದ್ದು ಎಂದು ಹೇಳಲಾಗುತ್ತದೆ. ಜೀರಿಗೆ ಬೀಜಗಳಲ್ಲಿ ಉರಿಯೂತ ನಿವಾರಕ ಗುಣ ಇದ್ದು ಅದು ಹೊಟ್ಟೆಯ  ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಜೀರಿಗೆ ನೀರು ಸಾಮಾನ್ಯವಾಗಿ ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ, ಹೀಗಾಗಿ ನೀವು ಕರುಳಿನ ಸಮಸ್ಯೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಮೆಂತ್ಯ
ಮೆಂತ್ಯವನ್ನು  ಕೂಡ  ಪ್ರತಿಯೊಂದು ಮನೆಗಳಲ್ಲಿ ಬಳಕೆ  ಮಾಡಲಾಗುತ್ತದೆ. ಇದು ಫೈಬರ್ ಮತ್ತು  ಆ್ಯಂಟಿ ಆಕ್ಸಿಡೆಂಟ್ಗಳ ಅತ್ಯುತ್ತಮ ಮೂಲವಾಗಿದೆ. ಇದು ದೇಹದಿಂದ ಬೇಡದ ಮತ್ತು ಹಾನಿಕಾರಕ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ತೂಕ ಕಡಿಮೆ ಮಾಡಲು ಬಯಸುವವರು, ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೆಂತ್ಯದ ನೀರನ್ನು ಕುಡಿಯುವುದು ಉತ್ತಮ ಇದು ಹೊಟ್ಟೆಯ ಕೊಬ್ಬನ್ನು ನೈಸರ್ಗಿಕವಾಗಿ ಸುಡಲು ಸಹಾಯ ಮಾಡುತ್ತದೆ.
ಏಲಕ್ಕಿ
webdunia

ಸಾಮಾನ್ಯವಾಗಿ ಏಲಕ್ಕಿಯನ್ನು ಮಸಾಲೆ ಆಹಾರ ಪದಾರ್ಥಗಳಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಅಲ್ಲದೇ ಊಟದ ನಂತರ ಏಲಕ್ಕಿ ಸೇವನೆ ಮಾಡುವುದನ್ನ ಸಹ ನಾವು ಗಮನಿಸಿದ್ದೇವೆ.  ಏಕೆಂದರೆ ಏಲಕ್ಕಿಯು ಅತ್ಯಂತ ಉತ್ತಮ ಸುವಾಸನೆ ಮತ್ತು ಪರಿಮಳವನ್ನು ಹೊಂದಿದೆ, ಈ ಸುವಾಸನೆಯು ದೇಹವು ಜೀರ್ಣಕ್ರಿಯೆಗೆ ಪರಿಣಾಮಕಾರಿ ಅಂಶಗಳ ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ, ವಿಶೇಷವಾಗಿ ಭಾರೀ ಊಟ ಮಾಡಿದ ನಂತರ ಇದನ್ನು ಸೇವನೆ ಮಾಡುವುದು ಉತ್ತಮ. ಇದಲ್ಲದೆ, ಇದು ಮಲಬದ್ಧತೆ, ಅಜೀರ್ಣ ಮತ್ತು ಗ್ಯಾಸ್ನಂತಹ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಗುಣಪಡಿಸಲು ಸಹ ಸಹಾಯ ಮಾಡುತ್ತದೆ.
ಶುಂಠಿ
webdunia
webdunia

ಶುಂಠಿಯು ಜೀರ್ಣಕ್ರಿಯೆ ಸುಧಾರಿಸುವಲ್ಲಿ ಉತ್ತಮವಾದ ಪ್ರಯೋಜನವನ್ನು ನೀಡುತ್ತದೆ. ಶುಂಠಿಯು ಉತ್ತಮ ನೋವು ನಿವಾರಕ ರಾಸಾಯನಿಕ ಸಂಯುಕ್ತಗಳು, ಜೀರ್ಣಕಾರಿ ಗುಣಗಳು ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ. ಇವೆಲ್ಲವೂ ಶೀತ ಮತ್ತು ಕೆಮ್ಮಿಗೆ ಪರಿಹಾರ ನೀಡುತ್ತದೆ.
ಲವಂಗ
ಲವಂಗದಲ್ಲಿ  ಯುಜೆನಾಲ್ ಎಣ್ಣೆ ಹೆಚ್ಚಿರುತ್ತದೆ, ಇದು ಅತ್ಯುತ್ತಮ ನಂಜುನಿರೋಧಕ,  ಆ್ಯಂಟಿ ಆಕ್ಸಿಡೆಂಟ್ ಗುಣಗಳಿಗೆ ಹೆಸರುವಾಸಿಯಾಗಿದೆ. ಆಯುರ್ವೇದದ ಪ್ರಕಾರ, ಲವಂಗವನ್ನು ಕಫಹಾರ್ ಎಂದು ಕರೆಯಲಾಗುತ್ತದೆ. ಅಲ್ಲದೇ ಇದರ ಸೇವನೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ನೀಡಿ, ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ.
ದಾಲ್ಚಿನ್ನಿ
ದಾಲ್ಚಿನ್ನಿ ಸಾಮಾನ್ಯವಾಗಿ ನಾವು ತಿನ್ನುವ ಆಹಾರದಿಂದ ಪೋಷಕಾಂಶಗಳ ಹೀರಿಕೊಂಡು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ದಾಲ್ಚಿನ್ನಿಯನ್ನು ಜೀರ್ಣಾಂಗವ್ಯೂಹದ ಸೋಂಕನ್ನು ತಡೆಯುವ ಬ್ಯಾಕ್ಟೀರಿಯಾ ವಿರೋಧಿ ಏಜೆಂಟ್ ಎಂದೂ ಸಹ ಕರೆಯುತ್ತಾರೆ.
ಕರಿ ಮೆಣಸು
ಕರಿಮೆಣಸು ಜೀರ್ಣಕ್ರಿಯೆಯನ್ನು ಸರಾಗಗೊಳಿಸುವ ಪೈಪೆರಿನ್ ಅನ್ನು ಹೊಂದಿರುತ್ತದೆ ಮತ್ತು ಹೊಟ್ಟೆಯಲ್ಲಿರುವ ಕಿಣ್ವಗಳ ಉತ್ತೇಜನವನ್ನು ಉತ್ತೇಜಿಸುತ್ತದೆ. ಈ ಕಿಣ್ವಗಳು ನಾವು ಸೇವಿಸುವ ಆಹಾರದಲ್ಲಿರುವ ಪ್ರೋಟೀನ್ಗಳ ಜೀರ್ಣಕ್ರಿಯೆಗೆ ಪ್ರಯೋಜನಕಾರಿಯಾಗಿದೆ


Share this Story:

Follow Webdunia kannada

ಮುಂದಿನ ಸುದ್ದಿ

ಸರಿಯಾಗಿ ನಿದ್ದೆ ಬರುತ್ತಿಲ್ಲವಾ? ಈ ಸಣ್ಣ ಬದಲಾವಣೆ ಮಾಡಿ ನೋಡಿ!