Select Your Language

Notifications

webdunia
webdunia
webdunia
webdunia

ದೇಹ ಭಾರವನ್ನು ನಿಯಂತ್ರಿಸಲು ಇಲ್ಲಿದೆ ಸರಳ ಪರಿಹಾರ

ದೇಹ ಭಾರವನ್ನು ನಿಯಂತ್ರಿಸಲು ಇಲ್ಲಿದೆ ಸರಳ ಪರಿಹಾರ
ಬೆಂಗಳೂರು , ಭಾನುವಾರ, 26 ನವೆಂಬರ್ 2017 (18:08 IST)
ಪ್ರೊಟೀನ್ ಅಂಶಗಳು, ಲ್ಯಾಕ್ಟೋಸ್ ಸಕ್ಕರೆ ಮತ್ತು ತನ್ನ ಸಾಂದ್ರತೆಯಿಂದಾಗಿ ಕೆನೆರಹಿತ ಹಾಲು (ಸ್ಕಿಮ್ಡ್ ಹಾಲು) ಸೇವನೆಯಿಂದ ಹೊಟ್ಟೆ ತುಂಬಿದ ಸಂತೃಪ್ತ ಭಾವನೆಯಿಂದಿರುವುದು ಸಾಧ್ಯ ಮತ್ತು ಇದು ಕಡಿಮೆ ಕ್ಯಾಲೊರಿ ಸೇವನೆಗೆ ಪೂರಕವಾಗುತ್ತದೆ ಎನ್ನುತ್ತದೆ ಸಂಶೋಧನಾ ವರದಿ.
 
ಹಣ್ಣಿನ ರಸಕ್ಕೆ ಹೋಲಿಸಿದರೆ, ಬೆಳಗಿನ ಜಾವ ಕೊಬ್ಬು ಇಲ್ಲದ ಹಾಲು ಸೇವನೆಯು ಹೊಟ್ಟೆ ತುಂಬಿದ ಭಾವನೆ ಮೂಡಿಸುತ್ತದೆ ಮತ್ತು ಮುಂದಿನ ಆಹಾರ ಸೇವನೆ ಸಂದರ್ಭ ಕಡಿಮೆ ಕ್ಯಾಲೊರಿ ಸೇವನೆಗೆ ಕಾರಣವಾಗುತ್ತದೆ. ಹಾಲು ಕುಡಿದವರು ಸುಮಾರು 50ರಷ್ಟು ಕ್ಯಾಲೊರಿ (ಶೇ.9ರಷ್ಟು ಕಡಿಮೆ ಆಹಾರ) ಕಡಿಮೆ ಸೇವಿಸುತ್ತಾರೆ ಎಂದಿದ್ದಾರೆ ಸಂಶೋಧಕರು.
 
34 ಮಂದಿ ಅಧಿಕ ದೇಹತೂಕದ ಆದರೆ ಆರೋಗ್ಯವಂತ ಪುರುಷರು ಮತ್ತು ಮಹಿಳೆಯರು ಈ ಅಧ್ಯಯನಕ್ಕಾಗಿ ನಡೆದ ಎರಡು ಸೆಶನ್‌ಗಳಲ್ಲಿ ಭಾಗವಹಿಸಿದ್ದರು. ಒಂದು ಸೆಶನ್‌ನಲ್ಲಿ ಅವರಿಗೆಲ್ಲಾ ಸುಮಾರು 20 ಔನ್ಸ್‌ನಷ್ಟು ಕೆನೆ ರಹಿತ ಹಾಲು ನೀಡಲಾಗಿದ್ದರೆ, ಮತ್ತೊಂದು ಸೆಶನ್‌ನಲ್ಲಿ ಅಷ್ಟೇ ಪ್ರಮಾಣದಲ್ಲಿ ಹಣ್ಣಿನ ರಸ ನೀಡಲಾಗಿತ್ತು.
 
ಬೆಳಗಿನ ಉಪಾಹಾರ ಮತ್ತು ಮಧ್ಯಾಹ್ನದೂಟದ ನಡುವಿನ ನಾಲ್ಕು ಗಂಟೆಗಳಲ್ಲಿ ಅವರೆಲ್ಲರಿಗೆ ಹೊಟ್ಟೆ ತುಂಬಿದ ಭಾವನೆಯಾಗುತ್ತಿದ್ದುದನ್ನು ಪರಿಶೀಲಿಸಲಾಗುತ್ತಿತ್ತು ಮತ್ತು ಭೋಜನ ವೇಳೆ ಹೊಟ್ಟೆ ತುಂಬುವಷ್ಟು ತಿನ್ನುವಂತೆ ಸೂಚಿಸಲಾಗಿತ್ತು.
 
ಹಾಲು ಕುಡಿದ ಮಂದಿಗೆ ಹೆಚ್ಚು ಹೊಟ್ಟೆ ತುಂಬಿದ ಭಾವನೆ ಇತ್ತು ಮತ್ತು ಇದರಿಂದಾಗಿ ಕಡಿಮೆ ಭೋಜನ ಸೇವಿಸಿದರು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
 
ಹಾಲಿನಲ್ಲಿರುವ ಪ್ರೊಟೀನ್ ಅಂಶ (ದಿನಕ್ಕೆ ಒಂದು ಕಪ್‌ಗೆ ಶೇ.16), ಲ್ಯಾಕ್ಟೋಸ್ (ಹಾಲಿನಲ್ಲಿರುವ ನೈಸರ್ಗಿಕ ಸಕ್ಕರೆ) ಅಥವಾ ಹಾಲಿನ ಸಾಂದ್ರತೆಯು ಹೊಟ್ಟೆ ತುಂಬಿದ ಭಾವನೆ ಉಂಟಾಗುವಲ್ಲಿ ಪ್ರಮುಖ ಪಾತ್ರ ವಹಿಸಬಹುದು ಎಂದು ಸಂಶೋಧಕರು ಸಂದೇಹಿಸಿದ್ದಾರೆ.
 
ತೂಕ ಇಳಿಸಿಕೊಳ್ಳುವ ಯಾವುದೇ ಪ್ರಯತ್ನಗಳಲ್ಲಿ ಹೊಟ್ಟೆ ತುಂಬಿದ ಸಂತೃಪ್ತಿ ಭಾವನೆಯೇ ಪ್ರಧಾನ ಪಾತ್ರ ವಹಿಸುತ್ತದೆ ಎಂಬುದನ್ನು ಈಗಾಗಲೇ ಹಲವಾರು ಸಂಶೋಧನೆಗಳು ಹೇಳಿವೆ. ಈ ಸಂಶೋಧನಾ ವರದಿಗಳು 'ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್‌'ನ ಜುಲೈ ಸಂಚಿಕೆಯಲ್ಲಿ ಪ್ರಕಟವಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಉದುರುವ ಕೂದಲು, ಬಕ್ಕತಲೆಗೆ 34 ಪರಿಹಾರ!