Webdunia - Bharat's app for daily news and videos

Install App

ಬೆಂಡೆಕಾಯಿಯ ಆರೋಗ್ಯಕರ ಪ್ರಯೋಜನಗಳು ನಿಮಗೆ ತಿಳಿದಿದೆಯೇ?

Webdunia
ಗುರುವಾರ, 26 ಜುಲೈ 2018 (13:42 IST)
ದಿನನಿತ್ಯದಲ್ಲಿ ಬಳಸುವ ತರಕಾರಿಗಳಲ್ಲಿ ಬೆಂಡೆಕಾಯಿಯೂ ಒಂದು. ಬೆಂಡೆಕಾಯಿಯಿಂದ ಯಾವುದೇ ರೀತಿಯ ಅಡುಗೆ ಮಾಡಿದರೂ ರುಚಿಕರವಾಗಿರುತ್ತದೆ. ನಮ್ಮ ಆರೋಗ್ಯಕ್ಕೆ ಬೇಕಾದ ಎಲ್ಲಾ ರೀತಿಯ ಗುಣಗಳು ಬೆಂಡೆಕಾಯಿಯಲ್ಲಿದೆ.

ಬೆಂಡೆಕಾಯಿಯನ್ನು ಸಾರು, ಪಲ್ಯ, ಸೂಪ್, ಸಲಾಡ್, ಬೆಂಡೆಕಾಯಿ ಫ್ರೈ, ಗೊಜ್ಜು ಹೀಗೆ ವಿವಿಧ ಭಕ್ಷ್ಯಗಳನ್ನು ಮಾಡಿ ಸೇವಿಸಬಹುದು. ಮತ್ತು ಇದು ಎಲ್ಲಾ ಋತುಮಾನದಲ್ಲಿಯೂ ಸಿಗುವ ತರಕಾರಿ ಎಂದು ಹೇಳಬಹುದು. ಅದಲ್ಲದೇ ಬೆಂಡೆಕಾಯಿಯ ನೀರನ್ನು ಕುಡಿಯುವುದರಿಂದಲೂ ಬಹಳ ಪ್ರಯೋಜನಗಳಿವೆ.
 
* ಬೆಂಡೆಕಾಯಿಯಲ್ಲಿ ಫೈಬರ್ ಅಂಶವು ಹೇರಳವಾಗಿ ಇವೆ. ಇವು ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 
* ಬೆಂಡೆಕಾಯಿಯನ್ನು ನಿಯಮಿತವಾಗಿ ಬಳಸುವುದರಿಂದ ಜೀರ್ಣಕ್ರಿಯೆಯಲ್ಲಿ ಮತ್ತು ಕರುಳಿನ ಕ್ರಮಬದ್ಧಗೊಳಿಸುವಿಕೆಗೆ ಸಹಾಯ ಮಾಡುತ್ತದೆ. ಮತ್ತು ಕರುಳಿನಲ್ಲಿರುವ ತ್ಯಾಜ್ಯವನ್ನು ಸುಲಭವಾಗಿ ತೆಗೆಯುವಲ್ಲಿ ಸಹಾಯ ಮಾಡುತ್ತದೆ.
 
* ಹೆಚ್ಚಿನ ಫೈಬರ್ ಮತ್ತು ಕಡಿಮೆ ಕ್ಯಾಲೋರಿ ಅಂಶವನ್ನು ಹೊಂದಿರುವ ಬೆಂಡೆಕಾಯಿಯು ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. 
* ಬೆಂಡೆಕಾಯಿಯು ಪಿತ್ತಜನಕಾಂಗವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ ಮತ್ತು ಯಕೃತ್ತಿನ ರೋಗವನ್ನು ತಡೆಯುವಲ್ಲಿ ಬೆಂಡೆಕಾಯಿಯು ಉತ್ತಮವಾದ ತರಕಾರಿಯಾಗಿದೆ. 
 
* ಬೆಂಡೆಕಾಯಿಯಲ್ಲಿ ಆರೋಗ್ಯಕರ ಗರ್ಭಧಾರಣೆಗೆ ಅಗತ್ಯವಿರುವ ಹೊಸ ಕೋಶಗಳನ್ನು ಉತ್ಪಾದಿಸುವ ಮತ್ತು ನಿರ್ವಹಿಸಲು ಸಹಾಯಕವಾಗುವ ಫೋಲಿಕ್ ಆಮ್ಲವು ಸಮೃದ್ಧವಾಗಿದೆ. ಈ ಫೋಲೆಟ್ ಅಂಶವು ಗರ್ಭಪಾತವನ್ನು ತಡೆಯುತ್ತದೆ. 
 
* ಬೆಂಡೆಕಾಯಿಯ ಮಲಬದ್ಧತೆಯನ್ನು ತಡೆಗಟ್ಟುವ ಸಾಮರ್ಥ್ಯದಿಂದಾಗಿ ಆಗ್ನೇಯ ಏಷ್ಯಾದ ಹಲವು ಭಾಗಗಳಲ್ಲಿ ಬೆಂಡೆಕಾಯಿಯನ್ನು ಸೇವಿಸಲಾಗುತ್ತದೆ.
 
* ಬೆಂಡೆಕಾಯಿಯು ದೇಹಕ್ಕೆ ಪ್ರಮುಖವಾಗಿ ಬೇಕಾಗುವ ವಿಭಿನ್ನ ಖನಿಜಗಳು ಮತ್ತು ಜೀವಸತ್ವಗಳ ಉತ್ತಮ ಮೂಲವಾಗಿದೆ. 
 
* ಬೆಂಡೆಕಾಯಿಯಿಂದ ಕಣ್ಣಿನ ಸಮಸ್ಯೆಗಳು ದೂರವಾಗುತ್ತವೆ. ಇದನ್ನು ಬಳಸುವುದರಿಂದ ಕಣ್ಣಿನ ದೃಷ್ಟಿಯು ತೀಕ್ಷ್ಣವಾಗುತ್ತದೆ.
 
* ಅಧಿಕ ಉಷ್ಣ ಶರೀರ ಉಳ್ಳವರು ಬೆಂಡೆಕಾಯಿಯ ನೀರನ್ನು ಸೇವಿಸುವುದರಿಂದ ಶರೀರದ ಉಷ್ಣತೆ ಕಡಿಮೆಯಾಗುತ್ತದೆ.
 
* ಬೆಂಡೆಕಾಯಿಯ ಬಳಕೆಯಿಂದ ಚರ್ಮವು ಕಾಂತಿಯುತವಾಗುತ್ತದೆ ಮತ್ತು ಕೂದಲು ದೃಢವಾಗಿ, ಒತ್ತಾಗಿ ಬೆಳೆಯುತ್ತದೆ.
 
* ಬೆಂಡೆಕಾಯಿಯು ವಿಟಾಮಿನ್ ಕೆ ಅನ್ನು ಒಳಗೊಂಡಿರುತ್ತದೆ ಇದು ರಕ್ತಹೀನತೆಗೆ ಚಿಕಿತ್ಸೆಯನ್ನು ನೀಡುವಲ್ಲಿ ಸಹಾಯಕಾರಿಯಾಗಿದೆ.
 
* ಬೆಂಡೆಕಾಯಿಯಲ್ಲಿರುವ ಪೊಟ್ಯಾಸಿಯಮ್ ಅಂಶವು ಅಪಧಮನಿಗಳು ಮತ್ತು ರಕ್ತನಾಳಗಳ ಸಡಿಲತೆಯನ್ನು ಪ್ರಚೋದಿಸುತ್ತದೆ ಮತ್ತು ರಕ್ತದೊತ್ತಡವನ್ನು ತಗ್ಗಿಸುತ್ತದೆ. ಆದುದರಿಂದ ಬೆಂಡೆಕಾಯಿಯು ಹೃದಯದ ಆರೋಗ್ಯವನ್ನು ಕಾಪಾಡುವುದರಲ್ಲಿ ಸಂದೇಹವಿಲ್ಲ ಎಂದು ಹೇಳಬಹುದು.
 
* ಸಂಧಿವಾತದಿಂದ ಬಳಲುತ್ತಿರುವ ವ್ಯಕ್ತಿಗಳು ಬೆಂಡೆಕಾಯಿಯನ್ನು ನಿಯಮಿತವಾಗಿ ಬಳಸುವುದರಿಂದ ಮೂಳೆಗಳು ಬಲವಾಗುತ್ತವೆ. ಇವು ಮೂಳೆ ಆರೋಗ್ಯಕ್ಕೆ ಉತ್ತಮವಾದ ತರಕಾರಿಯಾಗಿದೆ.
 
* ಬೆಂಡೆಕಾಯಿಯು ಕ್ಯಾನ್ಸರ್ ಅಪಾಯವನ್ನೂ ಸಹ ಕಡಿಮೆಗೊಳಿಸುತ್ತದೆ ಎಂದು ಕೆಲವು ಸಂಶೋಧನೆಗಳು ಸಾಬೀತುಪಡಿಸಿವೆ.
 
* ಕೊಲೆಸ್ಟ್ರಾಲ್ ರೋಗಿಗಳಿಗೆ ಬೆಂಡೆಕಾಯಿಯು ಪಂಚಾಮೃತ ಎಂದೇ ಹೇಳಬಹುದು. ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೊಂದಿರುವ ರೋಗಿಗಳು ಬೆಂಡೆಕಾಯಿಯನ್ನು ಮಾತ್ರ ನಿಸ್ಸಂಕೋಚವಾಗಿ ಸೇವಿಸಬಹುದು. ಬೆಂಡೆಯಲ್ಲಿ ಯಾವುದೇ ಕೊಲೆಸ್ಟ್ರಾಲ್ ಆಗಲೀ ಕೊಲೆಸ್ಟ್ರಾಲ್ ಉಂಟುಮಾಡುವ ಕಣಗಳಾಗಲೀ ಇಲ್ಲ.
 
ಇಷ್ಟೆಲ್ಲಾ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿರುವ ಬೆಂಡೆಕಾಯಿಯನ್ನು ನಾವು ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಂಡರೆ ಉತ್ತಮ ಆರೋಗ್ಯ ನಮ್ಮದಾಗುವುದರಲ್ಲಿ ಎರಡು ಮಾತಿಲ್ಲ. ಆದರೂ ಅವರವರ ದೇಹದ ಪ್ರಕೃತಿಗಳಿಗನುಸಾರವಾಗಿ ತರಕಾರಿಗಳನ್ನು ಸೇವಿಸುವ ಕುರಿತು ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಕ್ರಿಸ್ಮಸ್ 2024: ಹೆಚ್ಚು ಖರ್ಚು ಮಾಡದೆ ಸೀಕ್ರೆಟ್ ಸಾಂಟಾ ಉಡುಗೊರೆ ಆಯ್ಕೆಗೆ ಇಲ್ಲಿದೆ ಸಲಹೆ

ತೂಕ ಇಳಿಸಿಕೊಳ್ಳಲು ಸರ್ಕಸ್‌ ಮಾಡುತ್ತಿರುವವರು ಈ ರೀತಿ ಮಾಡಿ

ಚಳಿಗಾಲದಲ್ಲಿ ಇಡ್ಲಿ ಹಿಟ್ಟು ಹುದುಗು ಬರಲು ಇಲ್ಲಿದೆ ಕೆಲ ಟಿಪ್ಸ್‌

ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಚಳಿಗಾಲದ ಆಹಾರಗಳು

ಚಳಿಗಾಲದಲ್ಲೂ ಸನ್ ಸ್ಕ್ರೀನ್ ಲೋಷನ್ ಬಳಸಬೇಕಾ

ಮುಂದಿನ ಸುದ್ದಿ
Show comments