Webdunia - Bharat's app for daily news and videos

Install App

ಪವಿತ್ರ ವೀರ್ಯ ಪರೀಕ್ಷೆ ಹೇಗೆ ಮಾಡಬೇಕು ಗೊತ್ತಾ?

Webdunia
ಸೋಮವಾರ, 15 ಏಪ್ರಿಲ್ 2019 (17:57 IST)
ಗಂಡು ಹಾಗೂ ಹೆಣ್ಣಿನ ಸಮಾಗಮದಲ್ಲಿ ಪ್ರಧಾನ ಪಾತ್ರ ಹಾಗೂ ಜೀವ ಉತ್ಪತ್ತಿಯಲ್ಲಿ ಪ್ರಧಾನ ಪಾತ್ರ ವಹಿಸುವ ವೀರ್ಯವನ್ನು ಪರೀಕ್ಷೆಸಲು ಈಗ ಹಲವಾರು ವಿಧಾನಗಳು ಜಾರಿಯಲ್ಲಿವೆ. ಆದರೂ ಜನಪದರು ಹಾಗೂ ನಮ್ಮ ಈ ಹಿಂದಿನ ತಲೆಮಾರುಗಳು ಜನರು ತಮ್ಮದೇ ಆದ ಪದ್ಧತಿಗಳ ಮೂಲಕ ಶುದ್ಧ ಹಾಗೂ ವೀರ್ಯದ ಪವಿತ್ರ್ಯತೆಯ ಬಗ್ಗೆ ತಿಳಿದುಕೊಳ್ಳುತ್ತಿದ್ದರು. ಈ ಕ್ರಮ ಈಗ ಚಾಲ್ತಿಯಲ್ಲಿ ಇಲ್ಲವಾದರೂ ಆ ಕ್ರಮ ಏನೆಂಬುದನ್ನು ನೋಡೋಣ.

ವೀರ್ಯವನ್ನು ನೀರಿನಲ್ಲಿ ಹಾಕಬೇಕು. ನೀರ ಮೇಲೆ ತೇಲಿದ ಅಥವಾ ಅರ್ಧ ಮುಳುಗಿದ ವೀರ್ಯದಲ್ಲಿ ದೋಷವಿದೆ ಎನ್ನಲಾಗುತ್ತಿತ್ತು. ನೀರಿನಲ್ಲಿ ವೀರ್ಯವು ಸಂಪೂರ್ಣವಾಗಿ ಮುಳುಗಿದ್ರೆ ಅದು ಪವಿತ್ರ ವೀರ್ಯ ಹಾಗೂ ಅದರಲ್ಲಿ ಯಾವ ದೋಷ ಇಲ್ಲ ಅಂತ ಹಿರಿಯರು ತಿಳಿದುಕೊಳ್ಳುತ್ತಿದ್ರು.

ಕುಂಬಳಕಾಯಿ ಇಲ್ಲವೇ ಎಳೆಯ ಸಸಿ ಮೇಲೆ ಸ್ತ್ರೀ, ಪುರುಷನು ಪ್ರತ್ಯೇಕವಾಗಿ ಮೂತ್ರ ವಿಸರ್ಜನೆ ಮಾಡಬೇಕು. ಇಲ್ಲಿ ಯಾರ ಮೂತ್ರದಿಂದ ಸಸಿ ಬಾಡುವುದೋ ಅವರಲ್ಲಿ ದೋಷವಿದೆ ಎನ್ನಲಾಗುತ್ತಿತ್ತು.

ಗೋಧಿ ಇಲ್ಲವೇ ಜವೆ ಗೋಧಿಗಳನ್ನು ಮಣ್ಣಿನ 2 ಪರಿವಾಣಗಳಲ್ಲಿ ಮಣ್ಣುತುಂಬಿ ಅದರಲ್ಲಿ ಕಾಳುಗಳನ್ನು ಹಾಕಿ ಬೇರೆ ಬೇರೆಯಾಗಿ ಮೂತ್ರ ವಿಸರ್ಜನೆ ಮಾಡಬೇಕು. ಯಾರ ಮೂತ್ರದಿಂದ ಬೀಜಗಳು ಮೊಳಕೆ ಒಡೆಯುವುದಿಲ್ಲವೋ ಅಲ್ಲ ದೋಷವಿದೆ ಅಂತ ಹಿರಿಯರು ನಂಬಿದ್ದರು.

ಇವೆಲ್ಲ ಹಿಂದಿನ ಕೆಲವು ಹಿರಿಯರು ಪಾಲಿಸುತ್ತಿದ್ದ ಕ್ರಮಗಳಾಗಿವೆ. ಈಗ ಇವನ್ನು ಪರೀಕ್ಷೆ ಮಾಡುವ ಗೊಡವೆಗೆ ಹೋಗದೇ ಡಾಕ್ಟರ್ ಸಲಹೆ ಪಡೆದುಕೊಳ್ಳಿ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ನಿಮ್ಮ ಮಕ್ಕಳ ಶಬ್ದ ಭಂಡಾರವನ್ನು ಹೆಚ್ಚಿಸಲು ಇಲ್ಲಿದೆ ಕೆಲ ಟಿಪ್ಸ್‌

ರಂಜಾನ್ ಉಪವಾಸದಲ್ಲಿ ಖರ್ಜೂರಕ್ಕೆ ಯಾಕೆ ಸಖತ್ ಡಿಮ್ಯಾಂಡ್‌

Health Tips: ಬೇಸಿಗೆ ರಜೆಯಲ್ಲಿ ಮಕ್ಕಳ ಆರೋಗ್ಯ ಕಾಪಾಡುವ ಕೆಲ ಟಿಪ್ಸ್‌

ಮಕ್ಕಳನ್ನು ಓದಿಸಲು ಸರ್ಕಸ್ ಮಾಡುತ್ತಿರುವ ಪೋಷಕರಿಗೆ ಇಲ್ಲಿದೆ ಕೆಲ ಟಿಪ್ಸ್‌

ಇದೀಗ ಸಂಡಿಗೆ ಮಾಡಲು ಒಳ್ಳೆಯ ಸಮಯ, ಸಿಂಪಲ್ ಈರುಳ್ಳಿ ಸಂಡಿಗೆ ವಿಧಾನ ಹೀಗಿದೆ

ಮುಂದಿನ ಸುದ್ದಿ