Webdunia - Bharat's app for daily news and videos

Install App

ನೀವು ಎಳನೀರು ಪ್ರಿಯರೇ..? ಹಾಗಾದರೆ ಈ ಏಳು ಲಾಭಗಳ ಬಗ್ಗೆ ನೀವು ತಿಳಿಯಲೇಬೇಕು..!

Webdunia
ಮಂಗಳವಾರ, 7 ಸೆಪ್ಟಂಬರ್ 2021 (15:11 IST)
ಎಳನೀರು ಎಂಬುದು ಕೇವಲ ಪಾನೀಯವಲ್ಲ. ಬದಲಾಗಿ ಹಲವಾರು ಪೋಷಕಾಂಶಗಳ ಮೂಲ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಹಲವು ಆರೋಗ್ಯದ ಅಡ್ಡ ಪರಿಣಾಮಗಳಿಗೆ ಎಳನೀರು ಉತ್ತಮ ಪರಿಹಾರ. ಎಳನೀರು ಕುಡಿಯುವುದರಿಂದ ಮೂತ್ರಕೋಶದ ಹಾದಿಗಳು ಸ್ವಚ್ಛಗೊಳ್ಳುತ್ತದೆ. ಅಲ್ಲದೆ ಉರಿ ಮೂತ್ರದ ಸಮಸ್ಯೆಯನ್ನು ನಿವಾರಿಸುತ್ತದೆ. ಇತ್ತೀಚೆಗಿನ ದಿನಗಳಲ್ಲಿ ತೆಂಗಿನಕಾಯಿ ನೀರು ಕುಡಿಯುವುದು ಸಹ ಟ್ರೆಂಡ್ನಲ್ಲಿದೆ.

ಅದು ಕುಡಿಯಲು ಸಿಹಿಯಾಗಿರುತ್ತದೆ. ಸೇವಿಸಿದಾಗ ತಣ್ಣನೆಯ ಅನುಭೂತಿ ನೀಡುವುದು ಮಾತ್ರವಲ್ಲ, ಹಲವಾರು ಅಗತ್ಯ ಪೌಷ್ಟಿಕಾಂಶಗಳನ್ನು ಕೂಡ ಒಳಗೊಂಡಿದೆ.
ಎಳನೀರಿನ 7 ಆರೋಗ್ಯಕರ ಲಾಭಗಳನ್ನು ಕೆಳಗೆ ನೀಡಲಾಗಿದೆ.
1.ಪೌಷ್ಟಿಕಾಂಶಗಳ ಆಗರ
ತೆಂಗಿನಕಾಯಿ ನೀರಿನಲ್ಲಿ ಶೇಕಡಾ 94ರಷ್ಟು ನೀರು ಮತ್ತು ಅತ್ಯಂತ ಕಡಿಮೆ ಕೊಬ್ಬು ಇರುತ್ತದೆ. ಆದರೆ ತೆಂಗಿನ ಹಾಲಿನಲ್ಲಿ ಶೇಕಡಾ 50ರಷ್ಟು ನೀರು ಮತ್ತು ಹೆಚ್ಚು ಕೊಬ್ಬು ಇರುತ್ತದೆ. ಒಂದು ಲೋಟ (240 ಮಿಲಿ ಲೀಟರ್) ತೆಂಗಿನ ನೀರಿನಲ್ಲಿ, 60 ಕ್ಯಾಲೋರಿ ಇರುತ್ತದೆ. 15 ಕಾರ್ಬೊಹೈಡ್ರೇಟ್ಗಳು, 8 ಗ್ರಾಂ ಸಕ್ಕರೆ, ಶೇಕಡಾ 4ರಷ್ಟು ಕ್ಯಾಲ್ಸಿಯಂ, ಮೆಗ್ನೀಶಿಯಂ, ಶೇಕಡಾ 2ರಷ್ಟು ಫಾಸ್ಪರಸ್ ಮತ್ತು ಶೇಕಡಾ 15ರಷ್ಟು ಪೊಟ್ಯಾಶಿಯಂ ಇರುತ್ತದೆ.
2. ಆ್ಯಂಟಿಆಕ್ಸಿಡೆಂಟ್ಗಳು ಇರಬಹುದು
ಫ್ರೀ ರ್ಯಾಡಿಕಲ್ಸ್ ಎಂದರೆ ಚಯಾಪಯ ಕ್ರಿಯೆಯ ಸಂದರ್ಭದಲ್ಲಿ ದೇಹದಲ್ಲಿ ಉತ್ಪತ್ತಿ ಆಗುವ ಅಸ್ಥಿರವಾದ ಅಣುಗಳು. ಅವುಗಳ ಸಂಖ್ಯೆ ಹೆಚ್ಚಿದ್ದಾಗ, ಆಕ್ಸಿಡೇಟಿವ್ ಒತ್ತಡ ಅಧಿಕವಾಗಿ ರೋಗದ ಅಪಾಯ ಹೆಚ್ಚುತ್ತದೆ. ತೆಂಗಿನ ನೀರಿನಲ್ಲಿ, ಫ್ರೀ ರ್ಯಾಡಿಕಲ್ಸ್ಗಳನ್ನು ಮಾರ್ಪಡಿಸಲು ಸಹಾಯ ಮಾಡಬಹುದಾದ ಮತ್ತು ಆಕ್ಸಿಡೇಟಿವ್ ಒತ್ತಡದಲ್ಲಿ ಸುಧಾರಣೆ ತರಬಲ್ಲ ಉತ್ಕರ್ಷಣ ನಿರೋಧಕಗಳು ಇವೆ ಎಂಬುವುದು ಪ್ರಾಣಿಗಳ ಮೇಲಿನ ಸಂಶೋಧನೆಗಳಿಂದ ತಿಳಿದು ಬಂದಿದೆ. ಆದರೆ ಮನುಷ್ಯರು ಮತ್ತು ತೆಂಗಿನ ನೀರಿನ ಉತ್ಕರ್ಷಣ ನಿರೋಧಕಗಳ ಕುರಿತ ಸಂಶೋಧನೆಯನ್ನು ಈವರೆಗೆ ಮಾಡಲಾಗಿಲ್ಲ ಎಂಬುವುದು ಕೂಡ ಗಮನಿಸಬೇಕಾದ ಅಂಶ.
3. ಮಧುಮೇಹಿಗಳಲ್ಲಿ ರಕ್ತ ಸಕ್ಕರೆ ಮಟ್ಟದ ಪ್ರಮಾಣ ಕಡಿಮೆ ಮಾಡಬಹುದು
ಎಳನೀರು ರಕ್ತ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು ಮತ್ತು ಮದುಮೇಹ ಇರುವ ಪ್ರಾಣಿಗಳಲ್ಲಿ ಆರೋಗ್ಯ ಸುಧಾರಣೆಗೆ ಕಾರಣ ಆಗಬಹುದು ಎಂದು ಸಂಶೋಧನೆಯಿಂದ ತಿಳಿದು ಬಂದಿದೆ. ಇತ್ತೀಚಿನ ಅಧ್ಯಯನವೊಂದರಲ್ಲಿ ತೆಂಗಿನ ನೀರು ಇಲಿಗಳಲ್ಲಿ ರಕ್ತದಲ್ಲಿನ ಗ್ಲೂಕೋಸನ್ನು ಕಡಿಮೆ ಮಾಡುತ್ತದೆ ಎಂಬುವುದನ್ನು ತಿಳಿಸಿದೆ. ಆದರೂ ಮನುಷ್ಯರ ಮೇಲೆ ಈ ಪರಿಣಾಮಗಳು ಹೇಗಿರುತ್ತವೆ ಎಂಬುದನ್ನು ತಿಳಿಯಲು ಇನ್ನಷ್ಟು ಅಧ್ಯಯನಗಳ ಅಗತ್ಯ ಇರುತ್ತದೆ.
ತೆಂಗಿನ ನೀರು ಮೆಗ್ನೀಶಿಯಂನ ಉತ್ತಮ ಮೂಲ, ಇದು ಇನ್ಸುಲಿನ್ ಸೂಕ್ಷತೆ ಹೆಚ್ಚಿಸುತ್ತದೆ ಮತ್ತು ಟೈಪ್ 2 ಡಯಾಬಿಟೀಸ್ ಇರುವವರಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡುತ್ತದೆ ಎಂದು ತಿಳಿದುಬಂದಿದೆ. ಆದರೆ ತೆಂಗಿನ ನೀರಿನಲ್ಲಿ ಕಾರ್ಬೋಹೈಡ್ರೇಟ್ಗಳು ಕೂಡ ಇವೆ ಎಂಬುದನ್ನು ಗಮನಿಸಬೇಕಾಗುತ್ತದೆ. ಆದುದರಿಂದ ನೀವು ಮಧುಮೇಹ ಅಥವಾ ಪೂರ್ವ ಮಧುಮೇಹದಿಂದ ಬಳಲುತ್ತಿದ್ದರೆ, ತೆಂಗಿನ ನೀರನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳುವ ಮೊದಲು ವೈದ್ಯರ ಸಲಹೆ ಪಡೆಯಿರಿ.
4. ಕಿಡ್ನಿ ಕಲ್ಲುಗಳು ಬಾರದಂತೆ ತಡೆಯಬಹುದು
ಕಿಡ್ನಿ ಕಲ್ಲುಗಳು ಬಾರದಂತೆ ತಡೆಯಲು ನೀರು ಸೇವನೆ ಅಗತ್ಯ. ಸಾದಾ ನೀರು ಒಳ್ಳೆಯ ಆಯ್ಕೆ, ಆದರೆ ಎಳನೀರು ಅತ್ಯುತ್ತಮ ಆಯ್ಕೆ ಎನ್ನುತ್ತವೆ ಎರಡು ಚಿಕ್ಕ ಅಧ್ಯಯನಗಳು.
2013ರಲ್ಲಿ ನಡೆಸಿದ ಅಧ್ಯಯನವೊಂದರ ಪ್ರಕಾರ, ಮೂತ್ರ ಪಿಂಡದ ಕಲ್ಲುಗಳನ್ನು ಹೊಂದಿದ್ದ ಇಲಿಗಳಲ್ಲಿ, ತೆಂಗಿನ ನೀರು ಕಲ್ಲುಗಳು ಮೂತ್ರಪಿಂಡಕ್ಕೆ ಮತ್ತು ಮೂತ್ರಕೋಶದ ಇತರ ಭಾಗಗಳಿಗೆ ಅಂಟಿಕೊಳ್ಳದಂತೆ ತಡೆಯಿತು ಹಾಗೂ ಮೂತ್ರದಲ್ಲಿ ರೂಪುಗೊಂಡ ಹರಳುಗಳ ಸಂಖ್ಯೆಯನ್ನು ಕಡಿಮೆ ಮಾಡಿತು. 2018ರಲ್ಲಿ ಮೂತ್ರ ಪಿಂಡದ ಕಲ್ಲುಗಳಿಲ್ಲದ ಎಂಟು ಜನರ ಮೇಲೆ ನಡೆಸಿದ ಅಧ್ಯಯನದಲ್ಲಿ, ತೆಂಗಿನ ನೀರು ಪೊಟ್ಯಾಶಿಯಂ, ಕ್ಲೋರೈಡ್ ಮತ್ತು ಸಿಟ್ರೇಟ್ಯುಕ್ತ ಮೂತ್ರದ ಪ್ರಮಾಣ ಹೆಚ್ಚಿಸಿದ್ದು ಕಂಡು ಬಂತು. ಆದರೆ ಈ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ.
5. ಹೃದಯದ ಆರೋಗ್ಯಕ್ಕೆ ಪೂರಕ
ತೆಂಗಿನ ನೀರು ಕುಡಿಯುವುದರಿಂದ ಹೃದಯದ ಕಾಯಿಲೆಯ ಅಪಾಯ ಕಡಿಮೆ ಆಗಬಹುದು. 2008ರಲ್ಲಿ ಇಲಿಗಳ ಮೇಲೆ ನಡೆಸಿದ ಅಧ್ಯಯನವೊಂದರಿಂದ ಇದು ತಿಳಿದುಬಂದಿದೆ. 2005ರಲ್ಲಿ ನಡೆದ ಅಧ್ಯಯನವೊಂದರ ಪ್ರಕಾರ, ಅಧಿಕ ರಕ್ತದೊತ್ತಡ ಉಳ್ಳವರಲ್ಲಿ, ಎಳನೀರು ರಕ್ತದೊತ್ತಡ ಕಡಿಮೆ ಮಾಡಲು ಸಹಕರಿಸಬಹುದು. ಆದರೆ ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯಬೇಕಿದೆ.
6. ದೀರ್ಘಕಾಲದ ವ್ಯಾಯಾಮದ ನಂತರ ಸಹಕಾರಿ
ವ್ಯಾಯಾಮದ ನಂತರ ದೇಹದಲ್ಲಿನ ತೇವಾಂಶ ಮರು ಸ್ಥಾಪಿಸಲು ಮತ್ತು ಕಳೆದುಕೊಂಡ ಎಲೆಕ್ಟ್ರೋಲೈಟ್ಗಳನ್ನು ಮರು ಪೂರೈಕೆ ಮಾಡಲು ತೆಂಗಿನ ನೀರಿನ ಸೇವನೆ ಪ್ರಯೋಜನಕಾರಿ ಆಗಬಲ್ಲದು. ಏಕೆಂದರೆ ತೆಂಗಿನ ನೀರಿನಲ್ಲಿ ಪೊಟ್ಯಾಶಿಯಂ ಮತ್ತು ಮೆಗ್ನಿಶೀಯಂನಂತಹ ಎಲೆಕ್ಟ್ರೋಲೈಟ್ಗಳು ಇರುವುದರಿಂದ, ವ್ಯಾಯಾಮದ ನಂತರ ನೀರಿಗಿಂತ ತೆಂಗಿನ ನೀರು ಕುಡಿಯುವುದು ಹೆಚ್ಚು ಪ್ರಯೋಜನಕಾರಿ ಎಂಬುವುದು ಕೆಲವು ಅಧ್ಯಯನಗಳಿಂದ ತಿಳಿದುಬಂದಿದೆ.
7. ಜಲ ಸಂಚಯನದ ರುಚಿಕರ ಮೂಲ
ನೈಸರ್ಗಿಕ ಎಳನೀರು ಕೊಂಚ ಸಿಹಿಯಾಗಿರುತ್ತದೆ ಮತ್ತು ಅದರಲ್ಲಿ ಕ್ಯಾಲೋರಿ ಹಾಗೂ ಕಾರ್ಬ್ಗಳು ಕಡಿಮೆ ಇರುತ್ತವೆ. ನೇರವಾಗಿ ತೆಂಗಿನಕಾಯಿ ಒಡೆದು ನೀರನ್ನು ಕುಡಿದರೆ ಇನ್ನಷ್ಟು ತಾಜಾ ಆಗಿರುತ್ತದೆ. ಅದನ್ನು ಸ್ಮೂದಿಗಳಲ್ಲಿ ಅಥವಾ ಚೀಯಾ ಬೀಜದ ಪುಡ್ಡಿಂಗ್ಗಳಲ್ಲೂ ಬಳಸಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಕ್ರಿಸ್ಮಸ್ 2024: ಹೆಚ್ಚು ಖರ್ಚು ಮಾಡದೆ ಸೀಕ್ರೆಟ್ ಸಾಂಟಾ ಉಡುಗೊರೆ ಆಯ್ಕೆಗೆ ಇಲ್ಲಿದೆ ಸಲಹೆ

ತೂಕ ಇಳಿಸಿಕೊಳ್ಳಲು ಸರ್ಕಸ್‌ ಮಾಡುತ್ತಿರುವವರು ಈ ರೀತಿ ಮಾಡಿ

ಚಳಿಗಾಲದಲ್ಲಿ ಇಡ್ಲಿ ಹಿಟ್ಟು ಹುದುಗು ಬರಲು ಇಲ್ಲಿದೆ ಕೆಲ ಟಿಪ್ಸ್‌

ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಚಳಿಗಾಲದ ಆಹಾರಗಳು

ಚಳಿಗಾಲದಲ್ಲೂ ಸನ್ ಸ್ಕ್ರೀನ್ ಲೋಷನ್ ಬಳಸಬೇಕಾ

ಮುಂದಿನ ಸುದ್ದಿ
Show comments