Select Your Language

Notifications

webdunia
webdunia
webdunia
webdunia

ಮತದಾನ ಮಾಡುವವರಿಗೆ ಇಲ್ಲಿ ಸಿಗುತ್ತಿದೆ ಬಂಪರ್ ಆಫರ್

ಮತದಾನ ಮಾಡುವವರಿಗೆ ಇಲ್ಲಿ ಸಿಗುತ್ತಿದೆ ಬಂಪರ್ ಆಫರ್
ಬೆಂಗಳೂರು , ಬುಧವಾರ, 17 ಏಪ್ರಿಲ್ 2019 (10:16 IST)
ಬೆಂಗಳೂರು : ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಕೇವಲ ಸರ್ಕಾರ ಮಾತ್ರವಲ್ಲದೇ ಕೆಲವು ಜನರು ಹಾಗೂ ಸಂಘಸಂಸ್ಥೆಗಳು ಪ್ರಯತ್ನಿಸುತ್ತಿವೆ.


ಹೌದು. ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ತಪ್ಪದೇ ಮತದಾನ ಮಾಡಿದ ಸಿಲಿಕಾನ್ ಸಿಟಿ ಜನರಿಗೆ ಕೆಲವು ಸಂಸ್ಥೆಗಳು ಬಂಪರ್ ಆಫರ್ ಗಳನ್ನು ನೀಡುವುದಾಗಿ ತಿಳಿಸಿದೆ. ಇತ್ತಿಚೆಗಷ್ಟೇ ನಿಸರ್ಗ ಹೋಟೆಲ್ ಮತದಾನದ ದಿನ ಫ್ರೀ ಬೆಣ್ಣೆದೋಸೆ ಆಫರ್ ನೀಡಿತ್ತು. ಈಗ ಮತದಾನ ಮಾಡಿದವರಿಗೆ ಬೆಂಗಳೂರಿನ ಯಲಹಂಕದ ಸುಮತಿ ಜ್ಯುವೆಲ್ಲರಿ ಶಾಪ್‍ನಲ್ಲಿ ಏಪ್ರಿಲ್ 18 ರಿಂದ 26ರವರೆಗೆ ಚಿನ್ನ ಖರೀದಿಸಿದರೆ ನಿಮಗೆ ಅಷ್ಟೇ ಪ್ರಮಾಣದ ಬೆಳ್ಳಿ ಉಚಿತವಾಗಿ ನೀಡುವುದಾಗಿ ಜ್ಯುವೆಲ್ಲರಿ ಮಾಲೀಕರ ತಿಳಿಸಿದ್ದಾರೆ.


ಇನ್ನು ಯಲಹಂಕದ ರೇಡಿಯಲ್ ಡಯಗ್ನಾಸ್ಟಿಕ್ಸ್ ಸೆಂಟರ್‍ನಲ್ಲಿ ಮತದಾನ ಮಾಡಿದವರಿಗೆ ಉಚಿತವಾಗಿ ಮಧುಮೇಹ ಪರೀಕ್ಷೆ, ಕಿಡ್ನಿ ಪರೀಕ್ಷೆ, ರಕ್ತದೊತ್ತಡ ಪರೀಕ್ಷೆಗಳನ್ನು ಪಡೆಯಬಹುದಾಗಿದೆ. ಮತದಾನದ ಜಾಗೃತಿಗಾಗಿ ಈ ಸ್ಪೆಷಲ್ ಆಫರ್ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



          

Share this Story:

Follow Webdunia kannada

ಮುಂದಿನ ಸುದ್ದಿ

ವಿಜಯ್ ಮಲ್ಯ, ನೀರವ್ ಮೋದಿಯಂತೆ ಭಾರತದ ಬ್ಯಾಂಕ್ ಗಳಿಗೆ ವಂಚಿಸಿ ಪರಾರಿಯಾದವರು ಇನ್ನೆಷ್ಟು ಮಂದಿ ಇದ್ದಾರೆ ಗೊತ್ತಾ?