Publish Date: Tue, 02 Apr 2019 (16:37 IST)
Updated Date: Tue, 02 Apr 2019 (17:15 IST)
ಚುನಾವಣೆಯಲ್ಲಿ ರಾಜಕಾರಣಿಗಳ ನಾಲಿಗೆ ಆರಂಭದಲ್ಲಿಯೇ ಎಗ್ಗಿಲ್ಲದೇ ಹರಿದಾಡಲಾರಂಭಿಸಿದೆ.
ವಿಜಯಪುರದಲ್ಲಿ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಪ್ರತಿಕ್ರಿಯೆ ನೀಡಿದ್ದು, ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ನೀಡಿರುವ ಭಯೋತ್ಪಾದಕ ಹೇಳಿಕೆಗೆ ಟಾಂಗ್ ನೀಡಿದ್ದಾರೆ. ಅವರು ಭಯೋತ್ಪಾದಕ ಎಂದು ತಪ್ಪು ಹೇಳಿದ್ದಾರೆ. ಅಭಿವೃದ್ಧಿ ಕೆಲಸ ಮಾಡುವುದರಲ್ಲಿ ಭಯೋತ್ಪಾದಕ ಎಂದಿದ್ದಾರೆ.
ದೇವಾನಂದ ಚವ್ಜಾಣ ಹೆಂಡ್ತಿ ನಿಲ್ಲಿಸಿ ಬಹಳ ಕೆಲಸ ಮಾಡಿದ್ದಾನೆಂದು ಹೇಳ್ತಾನಾ. ಗಾಣದ ಎತ್ತನ ಹಾಗೆ ಕಣ್ಣು ಮುಚ್ಚಿಕೊಂಡು ಕುಳಿತರೆ ಆಗಲ್ಲ. ಕಣ್ಣು ತೆಗೆದು ನನ್ನ ಅಭಿವೃದ್ದಿ ಕಾರ್ಯಗಳನ್ನು ನೋಡಲಿ ಎಂದಿದ್ದಾರೆ.
ಗಂಡು ಮಕ್ಕಳೇ ಬಂದು ನೋಡಿ ನನ್ನ ಅಭಿವೃದ್ಧಿ ಕೆಲಸವನ್ನು ಎಂದು ದೇವಾನಂದ ಚವ್ಹಾಣಗೆ ಸಂಸದ ಟಾಂಗ್ ನೀಡಿದರು.