Publish Date: Tue, 14 May 2019 (07:11 IST)
Updated Date: Tue, 14 May 2019 (07:12 IST)
ಕಲಬುರಗಿ : ನೋಟ್ ಬ್ಯಾನ್ ಪರಿಣಾಮ ಸರಿ ಮಾಡದ ಮೋದಿ ನೇಣಿಗೇರಲು ಸಿದ್ಧವಾದ್ರೆ ರಸ್ತೆ ರೆಡಿ ಮಾಡಿ ಕೊಡ್ತೀವಿ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಹೇಳುವುದರ ಮೂಲಕ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ.
ಚಿಂಚೋಳಿ ಕ್ಷೇತ್ರದ ಶಾದಿಪುರ ಗ್ರಾಮದಲ್ಲಿ ಮಾತನಾಡಿದ ಅವರು, ನೋಟ್ ಬ್ಯಾನ್ ಪರಿಣಾಮ 50 ದಿನದಲ್ಲಿ ಸರಿಯಾಗದಿದ್ದರೆ ನಡು ರಸ್ತೆಯಲ್ಲಿ ನೇಣು ಹಾಕಿ ಅಂತ ಮೋದಿ ಹೇಳಿದ್ದರು. ಈಗಲೂ ಜನರ ಪರದಾಟ ತಪ್ಪಿಲ್ಲ. ನಾವು ರಸ್ತೆ ರೆಡಿ ಮಾಡಿಕೊಡಲು ಸಿದ್ದರಿದ್ದೇವೆ. ಮೋದಿ ಬರುತ್ತಾರಾ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ನಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಅವರ ಮೇಲೆ ಕೇಸ್ ಹಾಕುವುದಾದರೆ ದಯವಿಟ್ಟು ಮೊದಲು ಹಾಕಿ ಅಂತ ಶೋಭಾ ಕರಂದ್ಲಾಜೆಗೆ ಬಹಿರಂಗವಾಗಿ ಚಾಲೆಂಜ್ ಮಾಡಿದ್ದಾರೆ. ಅಲ್ಲದೇ ಮಲ್ಲಿಕಾರ್ಜುನ ಖರ್ಗೆ ಕ್ಷಮೆಗೆ ಆಗ್ರಹಿಸುವ ಮುನ್ನ ಸೋನಿಯಾಗಾಂಧಿ, ರಾಹುಲ್ ಗಾಂಧಿ ಬಗ್ಗೆ ನಿತ್ಯ ಕೀಳಾಗಿ ನಿಂದಿಸುವ ಮೋದಿ ಸೇರಿ ಬಿಜೆಪಿ ನಾಯಕರು ಕ್ಷಮೆ ಕೇಳಲಿ ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.