Webdunia - Bharat's app for daily news and videos

Install App

ಕಾಂಗ್ರೆಸ್ ಬಾಡಿಗೆ ಜನ ಕರೆತಂದು ಪ್ರಚಾರ ನಡೆಸ್ತಿದೆಯಂತೆ!

Webdunia
ಮಂಗಳವಾರ, 9 ಏಪ್ರಿಲ್ 2019 (18:35 IST)
ನಮ್ಮ ಪ್ರತಿಸ್ಪರ್ಧಿಗಳಿಗೆ ಯಾವುದೇ ಸ್ವತ್ತುಗಳಿಲ್ಲ. ಬಾಡಿಗೆ ಜನ ತಂದು ಪ್ರಚಾರ ಮಾಡುತ್ತಿದ್ದಾರೆ. ಹೀಗಂತ ಡಿ.ವಿ.ಸದಾನಂದಗೌಡ ವ್ಯಂಗ್ಯವಾಡಿದ್ದಾರೆ.

ನಿನ್ನೆ ನಡೆದ ಕಾರ್ಯಕ್ರಮದಲ್ಲಿ 300 ರೂ. ಚೀಟಿ ಕೊಟ್ಟು,  ಸ್ತ್ರೀ ಶಕ್ತಿ ಸಂಘಟನೆಗಳಿಂದ ಪಡೆದುಕೊಳ್ಳುವಂತೆ ಹೇಳಿದ್ದಾರೆ. ಅಂತಹ ಅಧೋಗತಿಗೆ ವಿರೋಧಿಗಳು ಹೋಗಿದ್ದಾರೆ ಎಂದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಚಾರ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ದೇಶದಲ್ಲಿ ಮೋದಿ ಅವರನ್ನ ಮತ್ತೆ ಪ್ರಧಾನಿ ಮಾಡಬೇಕು ಅಂತ ಹೇಗೆ ಜನ ಇದ್ದಾರೋ ಹಾಗೇ ಈ ಕ್ಷೇತ್ರದಲ್ಲಿ ಮತದಾರ ಒಲವು ನನ್ನ ಪರ ಇದೆ ಎಂದಿದ್ದಾರೆ.

ಬುರ್ಕಾ ಹಾಕಿ ಮತ ಕೇಳಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಡಿವಿಎಸ್ ತಿರುಗೇಟು ನೀಡಿದ್ದು, ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಬುರ್ಕಾ ಹಾಕಿಬಿಟ್ಟಿದ್ದಾರೆ. ಹತ್ತು ವರ್ಷಗಳ ಪ್ರಧಾನಿ ಆದವ, ಆಟಕ್ಕೆ ಉಂಟು, ಊಟಕ್ಕಿಲ್ಲ ಎಂಬಂತೆ ಮಾಡಿದ್ದಾರೆ. ಈಗ ನಮಗೆ ಹೇಳೋದಕ್ಕೆ ಬರುತ್ತಿದ್ದಾರೆ. ನಮ್ಮ ಪ್ರಧಾನಿ ಐದು ವರ್ಷ ಕೆಲಸ ಮಾಡಿದ್ದು ನಮಗೆ ಹೆಮ್ಮೆ ಇದೆ. ಅವರ ಹೆಸರಲ್ಲಿ ಮತ ಕೇಳಲು ಧೈರ್ಯ ಇದೆ, ಅವರ ಮುಖವಾಡ ಧರಿಸಿ ಮತ ಕೇಳುತ್ತೇವೆ ಎಂದರು.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ