Publish Date: Sun, 14 Apr 2019 (13:35 IST)
Updated Date: Sun, 14 Apr 2019 (13:36 IST)
ಕಾರವಾರ : ಬಿಜೆಪಿ ನಾಯಿಗಳು ಬೊಗಳುತ್ತಿರಲಿ ನಾನು ಆನೆಯಂತೆ ಮುಂದೆ ಹೋಗುತ್ತೇನೆ ಎಂದು ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಮರಿ ಪುಡಾರಿಗಳನ್ನು ಬಿಟ್ಟು ಬೊಗಳುವಂತಹ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರು ಐಟಿಯವರನ್ನು ಬಿಟ್ಟು ನನ್ನ ಸಂಬಂಧಿಕರು ಹಾಗೂ ಸ್ನೇಹಿತರ ಮನೆಯ ಮೇಲೆ ದಾಳಿ ಮಾಡಿಸಿ ಹೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ನಾನು ಹೆದರುವುದಿಲ್ಲ. ಜನರ ಮುಂದೆ ಹೋಗುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅನಂತ್ ಕುಮಾರ್ ಹೆಗ್ಡೆ ತನ್ನ ತಲೆಯಲ್ಲಿರುವ ಎಲ್ಲಾ ಅಸ್ತ್ರವನ್ನು ನನ್ನ ಮೇಲೆ ಪ್ರಯೋಗ ಮಾಡುತ್ತಿದ್ದಾರೆ. ನನ್ನನ್ನು ಮನೆಯಲ್ಲಿ ಕೂರಿಸುವ ವಿಚಾರ ನಡೆಯುತ್ತಿದೆ. ಬಿಜೆಪಿಯವರ ಕುತಂತ್ರವಿದು. ಅವರ ಅಸ್ತ್ರಕ್ಕೆ ನಾನು ಹೆದರುವುದಿಲ್ಲ. ಆನೆ ಮುಂದೆ ಹೋಗುತ್ತಿರಬೇಕು ನಾಯಿ ಬೊಗಳುತ್ತಿರಬೇಕು. ಹಾಗೆ ನಾನು ಮುಂದೆ ಹೋಗುತ್ತಿದ್ದೇನೆ ಬಿಜೆಪಿ ನಾಯಿಗಳು ಬೊಗಳುತ್ತಿದೆ ಎಂದು ಕಾರವಾರದಲ್ಲಿ ಆನಂದ್ ಅಸ್ನೋಟಿಕರ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.