Select Your Language

Notifications

webdunia
webdunia
webdunia
webdunia

ಮೋದಿ ಅಭಿಮಾನಿ ಮಲಯಾಳಂ ಸೂಪರ್ ಸ್ಟಾರ್ ಸುರೇಶ್ ಗೋಪಿಗೆ ಎನ್ ಡಿಎ ಟಿಕೆಟ್

ಮೋದಿ ಅಭಿಮಾನಿ ಮಲಯಾಳಂ ಸೂಪರ್ ಸ್ಟಾರ್ ಸುರೇಶ್ ಗೋಪಿಗೆ ಎನ್ ಡಿಎ ಟಿಕೆಟ್
ತ್ರಿಶ್ಶೂರ್ , ಬುಧವಾರ, 3 ಏಪ್ರಿಲ್ 2019 (11:01 IST)
ತ್ರಿಶ್ಶೂರ್: ಪ್ರಧಾನಿ ಮೋದಿಯಿಂದ ಪ್ರಭಾವಿತರಾಗಿ ಬಿಜೆಪಿ ಸೇರಿದ್ದ ಮಲಯಾಳಂ ಸೂಪರ್ ಸ್ಟಾರ್ ಸುರೇಶ್ ಗೋಪಿಗೆ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕೇರಳದ ತ್ರಿಶ್ಶೂರ್ ನಲ್ಲಿ ಎನ್ ಡಿಎ ಅಭ್ಯರ್ಥಿಯಾಗಿ ಟಿಕೆಟ್ ನೀಡಲಾಗಿದೆ.


ಮೋದಿ ಸಿದ್ಧಾಂತಗಳಿಂದ ಪ್ರಭಾವಿತರಾಗಿದ್ದ ಸುರೇಶ್ ಗೋಪಿ 2014 ರಲ್ಲಿ ಬಿಜೆಪಿ ಸೇರಿದ್ದರು. ಆಗಲೇ ಲೋಕಸಭೆಗೆ ಸ್ಪರ್ಧಿಸುತ್ತಾರೆಂದು ಸುದ್ದಿಯಾಗಿತ್ತು. ಆದರೆ ಆಗ ಸ್ಪರ್ಧಿಸಲು ಟಿಕೆಟ್ ಸಿಕ್ಕಿರಲಿಲ್ಲ.

ಆದರೆ ಈ ಬಾರಿ ಮೊದಲು ವಯನಾಡ್ ನಲ್ಲಿ ಸುರೇಶ್ ಗೋಪಿ ಸ್ಪರ್ಧಿಸುತ್ತಾರೆ ಎಂದಿತ್ತು. ಆದರೆ ಇದೀಗ ವಯನಾಡ್ ಗೆ ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತಿರುವ ರಾಹುಲ್ ಗಾಂಧಿ ಎದುರಿಗೆ ತುಷಾರ್ ವೆಲ್ಲಪಲ್ಲಿ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ ಸುರೇಶ್ ಗೆ ತ್ರಿಶ್ಶೂರ್ ನಲ್ಲಿ ಟಿಕೆಟ್ ನೀಡಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಮತ್ತೆ ಪ್ರಧಾನಿಯಾಗಬೇಕು- ಸಿದ್ಧರಾಮಯ್ಯ ರಿಂದ ಎಡವಟ್ಟು ಹೇಳಿಕೆ