ಸುಮಲತಾ ಟೂರಿಂಗ್ ಟಾಕೀಸ್ 18 ಕ್ಕೆ ಬಂದ್ !

Webdunia
ಮಂಗಳವಾರ, 2 ಏಪ್ರಿಲ್ 2019 (17:32 IST)
ಅಂಬರೀಶ್ ವಸತಿ ಸಚಿವರಾಗಿದ್ದಾಗ ಬಡವರಿಗೆ ಯಾಕ್ ಮನೆ ಕೊಡಿಸ್ಲಿಲ್ಲ. ಚುನಾವಣೆ ಬಳಿಕ ಸುಮಕ್ಕನೂ ಇರಲ್ಲ, ಪಮಕ್ಕನೂ ಇರಲ್ಲ ಅಂತ ಸಂಸದರೊಬ್ಬರು ವ್ಯಂಗ್ಯವಾಡಿದ್ದಾರೆ.

ಸುಮಲತಾ ವಿರುದ್ಧ ಮತ್ತೆ ಮಾತು ಮುಂದುವರೆಸಿದ ಸಂಸದ ಎಲ್. ಆರ್. ಶಿವರಾಮೇಗೌಡ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮದ್ದೂರು ತಾಲೂಕಿನ ಕೊಪ್ಪದಲ್ಲಿ ನಡೆದ ಜೆಡಿಎಸ್  ಸಭೆಯಲ್ಲಿ ಸುಮಲತಾ ವಿರುದ್ಧ ಮಾತಿನ ಬಾಣ ಹರಿಬಿಟ್ಟರು. 

ಆಗ ಗೌರಮ್ಮನ ಹಾಗೆ ಮನೆಲಿದ್ಬುಟ್ಟು, ಅಂಬರೀಶ್ ಸತ್ತಾಗ ಕುಮಾರಸ್ವಾಮಿಗೆ ಬುದ್ದಿ ಇಲ್ಲದೆ ಮಂಡ್ಯಗೆ ತಂದ ಟೈಂ ನಲ್ಲಿ ಜನ ನೋಡುದ್ರಲ್ಲಾ. ಓ ಹೋ ಇವರೆಲ್ಲಾ ಓಟ್ ಹಾಕ್ತಾರೆ ಅಂತ. ಇದು ಫೀಲ್ಮಿ ಸ್ಟೈಲ್ ನಲ್ಲಿ ನಡೀತಿದೆ ಎಂದ್ರು.

ಸುಮಲತಾ ಟೂರಿಂಗ್ ಟಾಕೀಸ್ ಹದಿನೆಂಟನೇ ತಾರೀಖಿನವರೆಗೂ ನಡೆಯುತ್ತೆ ಶೂಟಿಂಗ್. ಆ ಮೇಲೆ ಸುಮಕ್ಕನೂ ಇಲ್ಲ ಪಮಕ್ಕಾನೂ ಇಲ್ಲ ಎಂದು ಟಾಂಗ್ ನೀಡಿದ್ರು.

ಆ ಮೇಲೆ ಅವರನ್ನ ನೋಡಲು ಗಾಂಧಿನಗರಕ್ಕೆ ಹೋಗಬೇಕಾಗುತ್ತೆ. ಹುಡಕಲು ಹೋಗ್ತಿರಾ ಹೇಳಿ ಅಂತ ಜನರನ್ನು ಕೇಳಿದ್ರು.
ಈ ಟೂರಿಂಗ್ ಟಾಕೀಸ್ ನವರ ಹದಿನೆಂಟನೆ ತಾರೀಖು ಪ್ಯಾಕ್ ಮಾಡಿಸಿ ಕಳಿಸಬೇಕು. ಶೂಟಿಂಗ್ ಮಾಡಿದ ಸಿನಿಮಾ ಎಲ್ಲವೂ ಬಿಡುಗಡೆ ಆಗಲ್ಲ. ಹಾಗೆಯೇ ಇದು. ಇವತ್ತು ದರ್ಶನ್ ಬಂದವನಲ್ಲ. ಇವನೂ ನಾಯ್ಡು. ಸುಮಲತಾ ನಾಯ್ಡು. ಲೇ ಗೌಡ್ರು ಕತೆ ಏನಾಗಬೇಕ್ರೊ ಎಂದು ಕೇಳಿದ್ರು.

ನಾಯ್ಡುಗಳ ಮಯವನ್ನ  ಮಂಡ್ಯದಲ್ಲಿ ಮಾಡಲು ಬಿಡಬಾರದು ಎಂದು ಟೀಕೆ ಮಾಡಿದ್ರು. ಅವಳ ಗಂಡನ ನಂಬಿಕೊಂಡೆ 20 ವರ್ಷ ಹಾಳು ಮಾಡ್ಕೊಂಡೆ ನಾನು ಎಂದ ಅವರು, 20 ವರ್ಷ ಅಧಿಕಾರದಿಂದ ವಂಚಿತರಾಗಿ ಕೂರಲು ಈ ಪುಣ್ಯಾತ್ಮನ ಪಾರ್ಟಿಗೆ ಕರೆತಂದಿದ್ದೇ ಕಾರಣ ಎಂದೂ ಟೀಕೆ ಮಾಡಿದ್ರು.

ಅಮರಾವತಿ ಚಂದ್ರಶೇಖರ್ ಅವರ ಮನೇಲಿ ಅಡುಗೆ ಮಾಡಿ ಹಾಕಿ ಹಾಕಿ ಸೋತೋಗಿದ್ದಾರೆ ಎಂದೂ ಟೀಕೆ ಮಾಡಿದ್ರು. ಸುಮಲತಾ  ಮಂಡ್ಯದ ಗೌಡತಿ ಅಲ್ಲ  ಎಂದು ಪದೇ ಪದೇ ಶಿವರಾಮೇಗೌಡ ಹೇಳಿದ್ರು.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇದೇ ಗುರುವಾರ, ಶುಕ್ರವಾರ ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಸಿಗಲ್ಲ

ಬೆಳಗಾವಿ ಕೃಷ್ಣಮೃಗ ಸಾವು ಪ್ರಕರಣ, ಬಂತು ಪ್ರಯೋಗಾಲಯದ ವರದಿ

60 ಅಡಿ ಆಳದ ಕಾಲುವೆಗೆ ಬಿದ್ದ ಕಾಡಾನೆ, ಕಾರ್ಯಚರಣೆ ಹೇಗೆ ನಡೆದಿತ್ತು ಗೊತ್ತಾ

ಸಹಾಯ ಕೇಳಲು ಬಂದ ಯುವತಿಗೆ ಲೈಂಗಿಕ ದೌರ್ಜನ್ಯ, ಕೋರ್ಟ್‌ಗೆ ಹಾಜರಾಗಲು ಬಿಎಸ್‌ವೈಗೆ ಸಮನ್ಸ್‌

ಸೂಸೈಡ್ ಬಾಂಬರ್ ದಾರಿ ತಪ್ಪಿದ ಮಗ: ಕಾಂಗ್ರೆಸ್ ಸಂಸದನ ಹೇಳಿಕೆ ಕೇಳಿದ್ರೆ ಶಾಕ್

ಮುಂದಿನ ಸುದ್ದಿ
Show comments