Publish Date: Mon, 08 Apr 2019 (17:01 IST)
Updated Date: Mon, 08 Apr 2019 (17:04 IST)
ಚುನಾವಣೆ ಚುನಾವಣೆ ರೀತಿ ನಡೆಯಬೇಕು, ಅದನ್ನು ಬಿಟ್ಟು ಈ ರೀತಿ ನಡೆಯಬಾರದು. ಗಲಾಟೆಗಳು, ಬಡಿದಾಟಗಳು ಆಗಬಾರದು ಅಂತ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಮಂಡ್ಯದ ಕೆಎಂ ದೊಡ್ಡಿಯಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿಕೆ ನೀಡಿದ್ದು, ನಿಜಕ್ಕೂ ನನಗೆ ಆಶ್ಚರ್ಯ ಆಗುತ್ತೆ, ಇಂತಾ ಘಟನೆಗಳು ನಡೆಯಬಾರದು. ಏ. 18 ರಂದು ಜನ ಸರಿಯಾದ ತೀರ್ಮಾನ ಕೈಗೊಳ್ಳಬೇಕು. ಜನಾಭಿಪ್ರಾಯವೇ ಕೊನೆಯ ತೀರ್ಪು ಎಂದರು.
ಗುರುದೇವರಹಳ್ಳಿ ಕಾರ್ತಿಕ್, ಪಾಪು, ಬಾಬು ಅನ್ನೋರಿಗೆ 12 ರಿಂದ 14 ಸ್ಟೀಚ್ ಬಿದ್ದಿದೆ. ಈ ರೀತಿಯ ಘಟನೆ ಮರುಕಳಿಸೋದು ಬೇಡ. ಅವರಿಗೂ ಒಂದು ಕುಟುಂಬ ಇದೆ,ನಿಮಗೂ ಒಂದು ಕುಟುಂಬ ಇದೆ. ಆಕ್ರೋಶ ಭರಿತವಾಗಿ ಯಾವುದೇ ಅನಾಹುತ ಆಗೋದು ಬೇಡ. ಎರಡು ಪಕ್ಷದವರಿಗೂ ಹೇಳ್ತೀನಿ ಈ ರೀತಿಯ ಒಡೆದಾಟದ ರಾಜಕಾರಣಕ್ಕೆ ನಾನು ಬೆಲೆ ಕೊಡಲ್ಲ ಎಂದರು.