ಮೊಬೈಲ್ ಮೋಹ ಪ್ರಾಣ ಕಳೆದುಕೊಂಡ ಯುವಕ

Webdunia
ಭಾನುವಾರ, 30 ಜನವರಿ 2022 (18:04 IST)
ಮೊಬೈಲ್ ಮೇಲೆ ಇರುವ ಮೋಹಕ್ಕೆ ಯುವಕನೊಬ್ಬ ಪ್ರಾಣ ಬಿಟ್ಟಿರುವ ಘಟನೆ ನಡೆದಿರೋದು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಅಬ್ಲೂಡು ಗ್ರಾಮಚಾಯ್ತಿ ವ್ಯಾಪ್ತಿಯ ಗುಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.
 
ಗುಡಿಹಳ್ಳಿ ಗ್ರಾಮದ ನಿವಾಸಿ ನವೀನ್ ಮೊಬೈಲ್ ಮೋಹಕ್ಕೆ ಪ್ರಾಣತೆತ್ತ ಯುವಕ. ನವೀನ್ ತನ್ನ ತೋಟದಲ್ಲಿದ್ದ ಮಿಷನ್ ಶೆಡ್ ಮೋಟಾರ್ ಆನ್ ಮಾಡಲು ಹೋಗಿದ್ದಾಗ ತನ್ನ ಕೈಯಲ್ಲಿದ್ದ ಮೊಬೈಲ್ ಜಾರಿ ಶೆಡ್ ಒಳಗಡೆ ಇದ್ದ ಕಿರು ಕೊಳವೇ ಬಾವಿಯ ಒಳಗಡೆ ಬಿದ್ದಿದ್ದೆ. ಹೇಗಾದರೂ ಮಾಡಿ ಮೊಬೈಲ್ ಹೊರಗಡೆ ತೆಗೆಯಬೇಕೆಂದು ಮನೆಗೆ ಹೋಗಿ ಬ್ಯಾಟರಿ ತಂದು ಬಾವಿಯೊಳಗೆ ಇಳಿದಿದ್ದಾನೆ. 65 ಅಡಿ ಆಳ ಇದ್ದ ಬಾವಿಗೆ ಇಳಿದ ನವೀನ್ ಮೇಲೆ ಬರಲೇ ಇಲ್ಲ. ಟಾರ್ಚ್ ತಗೊಂಡು ಹೋದವನು ಮನೆಗೆ ಬರಲೇ ಇಲ್ಲ ಅಂತ ತನ್ನ ಅಣ್ಣ ಅನುಮಾನಗೊಂಡು ಬಾವಿಯ ಬಳಿ ಬಿಟ್ಟಿದ್ದ ಚಪ್ಪಲಿ ಕಂಡು ಗಾಬರಿಯಾಗಿದ್ದಾನೆ.
 
ತಕ್ಷಣ ಬಾವಿಗೆ ಇಳಿಯುವ ಪ್ರಯತ್ನ ಮಾಡಿದ್ದಾನೆ ಆದರೆ ಹುಸಿರುಗಟ್ಟಿದ್ರಿಂದ ಮೇಲೆ ಬಂದಿದ್ದಾನೆ, ಕೂಡಲೆ ಅಗ್ನಿಶಾಮಕ ದಳಕ್ಕೆ ಮಾಹಿತಿ ಮುಟ್ಡಿಸಿದ್ದಾರೆ.
 
ರಾತ್ರಿಯೆಲ್ಲ ಕಾರ್ಯಾಚರಣೆ ಮಾಡಿದ ಅಗ್ನಿಶಾಮಕ ದಳದಿಂದ ಯುವಕ‌ನ್ನು ಹೊರ ತೆಗೆಯಲು ವಿಫಲವಾಗಿದೆ,ಕೊನೆಗೆ ಬೆಂಗಳೂರಿನಿಂದ ಎನ್ ಡಿ ಆರ್ ಎಫ್ ತಂಡ ಬಂದು ಇಂದು ಮುಂಜಾನೆ ನಾಲ್ಕು ಸಮಯಕ್ಕೆ ಸರಿಯಾಗಿ ಯುವನ ಮೃತದೇಹ ಹೊರಗೆ ತೆಗೆದು ತನ್ನ ಕುಟುಂಭಸ್ಥರಿಗೆ ಒಪ್ಪಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹೈಕಮಾಂಡ್ ಆಂತರಿಕ ಕಚ್ಚಾಟವನ್ನು ಸರಿಪಡಿಸಬೇಕೆಂದ ಸತೀಶ್ ಜಾರಕಿಹೊಳಿ

ಮೋಸ್ಟ್‌ ವಾಟೆಂಡ್‌, ಡೇಜಂರಸ್‌ ನಕ್ಸಲ್‌ ಮುಖ್ಯಸ್ಥ ಗಣೇಶ್ ಉಯಿಕೆ ಇನ್ನಿಲ್ಲ, ಆಗಿದ್ದೇನು ಗೊತ್ತಾ

ಬಿಜೆಪಿ ಅಧಿಕಾರದ ಬಳಿಕ ಅಲ್ಪಸಂಖ್ಯಾತರ ವಿರುದ್ಧ ದ್ವೇಷದ ಭಾಷಣ ಹೆಚ್ಚಳ: ಎಂಕೆ ಸ್ಟಾಲಿನ್

ಹುಬ್ಬಳ್ಳಿ ಮರ್ಯಾದೆ ಹತ್ಯೆ ಪ್ರಕರಣ: ಜೈಲಿಗೆ ಹಾಕುವ ಅವಶ್ಯಕತೆಯೇ ಇಲ್ಲ, ಶೂಟೌಟ್ ಮಾಡಲಿ

ಹಿರಿಯೂರ್ ಬಸ್ ದುರಂತ: ಸಜೀವ ದಹನವಾದ ಮಗಳ ಮೃತದೇಹದ ಗುರುತು ಹಿಡಿದ ವಿಚಾರ ತಿಳಿದ್ರೆ ಕಣ್ಣೀರು ಬರುತ್ತೆ

ಮುಂದಿನ ಸುದ್ದಿ
Show comments