Publish Date: Sat, 17 Oct 2026 (21:34 IST)
Updated Date: Sat, 17 Oct 2026 (21:35 IST)
ಮಕ್ಕಳು 'ಆಕಾಶ ಯಾಕೆ ನೀಲಿಯಾಗಿದೆ?' ಎಂದು ಕೇಳಿದಾಗ, ಅವರಿಗೆ ಸಂಕೀರ್ಣವಾದ ವಿಜ್ಞಾನವನ್ನು ಅರ್ಥವಾಗುವಂತೆ ವಿವರಿಸುವುದು ಒಂದು ಸವಾಲು. ಈ ಸಣ್ಣ ಲೇಖನ ಮತ್ತು ಕಥೆಯ ರೂಪದ ವಿವರಣೆ ನಿಮ್ಮ ಮಕ್ಕಳಿಗೆ ಇದನ್ನು ಸುಲಭವಾಗಿ ಅರ್ಥಮಾಡಿಸಲು ನೆರವಾಗುತ್ತದೆ.
ಮಕ್ಕಳಿಗಾಗಿ ಸರಳ ಉತ್ತರ (ಸಣ್ಣ ಉದಾಹರಣೆಯೊಂದಿಗೆ)
ಸೂರ್ಯನ ಬೆಳಕು ಬಿಳಿಯಾಗಿ ಕಂಡರೂ, ಅದರಲ್ಲಿ ಕಾಮನಬಿಲ್ಲಿನ (VIBGYOR - ಏಳು ಬಣ್ಣಗಳು) ಅಡಗಿವೆ. ಭೂಮಿಯ ಸುತ್ತಲೂ ಗಾಳಿ, ಧೂಳು ಮತ್ತು ಸಣ್ಣ ಸಣ್ಣ ಕಣಗಳಿರುವ 'ವಾತಾವರಣ' ಎಂಬ ರಕ್ಷಣಾತ್ಮಕ ಪದರ ಇದೆ.
ಸೂರ್ಯನ ಬೆಳಕು ಈ ವಾತಾವರಣವನ್ನು ಪ್ರವೇಶಿಸಿದಾಗ, ಗಾಳಿಯಲ್ಲಿರುವ ಕಣಗಳು ಬೆಳಕಿನ ಬಣ್ಣಗಳನ್ನು ಎಲ್ಲಾ ದಿಕ್ಕುಗಳಿಗೂ ಹರಡುತ್ತವೆ (Scattering). ನೀಲಿ ಬಣ್ಣವು ಸಣ್ಣ ಅಲೆಗಳನ್ನು (Short wavelengths) ಹೊಂದಿರುವುದರಿಂದ, ಅದು ಇತರ ಬಣ್ಣಗಳಿಗಿಂತ ಹೆಚ್ಚು ಚದುರಿ ಇಡೀ ಆಕಾಶವನ್ನು ನೀಲಿಯಾಗಿ ಕಾಣುವಂತೆ ಮಾಡುತ್ತದೆ!
'ರೇಲೀ ಚದುರುವಿಕೆ' - ಸುಲಭವಾಗಿ ಅರ್ಥೈಸಿ
ವಿಜ್ಞಾನದ ಭಾಷೆಯಲ್ಲಿ ಇದನ್ನು ರೇಲೀ ಚದುರುವಿಕೆ ಎನ್ನುತ್ತಾರೆ.
ಸೂರ್ಯನ ಬೆಳಕಿನ ಪ್ರಯಾಣ: ಬೆಳಕು ಬಾಹ್ಯಾಕಾಶದಿಂದ ಭೂಮಿಗೆ ಬರುವಾಗ ನೇರವಾಗಿ ಬರುತ್ತದೆ.
ಗಾಳಿಯ ಕಣಗಳ ಅಡಚಣೆ: ವಾತಾವರಣದ ಅನಿಲಗಳು (ಸಾರಜನಕ ಮತ್ತು ಆಮ್ಲಜನಕ) ಈ ಬೆಳಕನ್ನು ತಡೆಯುತ್ತವೆ.
ನೀಲಿ ಬಣ್ಣದ ಮೇಲುಗೈ: ಕೆಂಪು, ಹಳದಿ ಬಣ್ಣಗಳು ಚದುರದೆ ನೇರವಾಗಿ ಹಾದುಹೋಗುತ್ತವೆ. ಆದರೆ ನೀಲಿ ಬಣ್ಣವು ಹೆಚ್ಚು ಚದುರಿ ನಮಗೆ ತಲುಪುತ್ತದೆ.
ಸಂಜೆ ಆಕಾಶ ಕೆಂಪಾಗುವುದು ಏಕೆ)
ಸಂಜೆ ಅಥವಾ ಸೂರ್ಯೋದಯದ ಸಮಯದಲ್ಲಿ, ಸೂರ್ಯನು ದೂರದಲ್ಲಿರುತ್ತಾನೆ. ಸೂರ್ಯನ ಬೆಳಕು ಭೂಮಿಗೆ ತಲುಪಲು ಹೆಚ್ಚು ದೂರ ಪ್ರಯಾಣಿಸಬೇಕು. ಆಗ ನೀಲಿ ಬಣ್ಣವು ಮಾರ್ಗಮಧ್ಯದಲ್ಲೇ ಚದುರಿ ಹೋಗುತ್ತದೆ ಮತ್ತು ನಮಗೆ ತಲುಪುವ ಕೆಂಪು ಹಾಗೂ ಕಿತ್ತಳೆ ಬಣ್ಣಗಳು ಆಕಾಶವನ್ನು ಸುಂದರ ಕೆಂಪು ಬಣ್ಣದಲ್ಲಿ ಕಾಣುವಂತೆ ಮಾಡುತ್ತವೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ