Select Your Language

Notifications

webdunia
webdunia
webdunia
webdunia

ಸ್ಥಳೀಯ, ಸಣ್ಣ ಉದ್ಯಮಗಳನ್ನು ಪ್ರೋತ್ಸಾಹಿಸಿ

ಸ್ಥಳೀಯ, ಸಣ್ಣ ಉದ್ಯಮಗಳನ್ನು ಪ್ರೋತ್ಸಾಹಿಸಿ
ಬೆಂಗಳೂರು , ಸೋಮವಾರ, 20 ಜುಲೈ 2020 (09:33 IST)
ಬೆಂಗಳೂರು: ಕೊರೋನಾ ಎಂಬುದು ಸಣ್ಣ ಸಣ್ಣ ಉದ್ಯಮಗಳನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ. ಇದರಿಂದ ಎಷ್ಟೋ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಇಂತಹವರಿಗೆ ನೆರವಾಗಲು ನಮ್ಮ ಸುತ್ತಮುತ್ತಲಿರುವ ಸಣ್ಣ ಉದ್ಯಮಗಳನ್ನು ಪ್ರೋತ್ಸಾಹಿಸಬೇಕಿದೆ.


ಆದಷ್ಟು ಸಣ್ಣ ಉದ್ಯಮಗಳಿಂದ, ಉದ್ಯಮಗಳಿಂದ ನಮ್ಮ ಖರೀದಿ ವ್ಯವಹಾರ ಮಾಡುವುದು, ಅದನ್ನು ಇತರರಿಗೆ ಶೇರ್ ಮಾಡಿಕೊಳ್ಳುವುದು, ಒಂದು ಉತ್ತಮ ಅಭಿಪ್ರಾಯ ಹೇಳುವುದು ಇಷ್ಟು ಮಾಡಿದರೂ ಸಾಕು. ಇದರಿಂದ ನಮ್ಮ ಸುತ್ತಲಿರುವ ನಮ್ಮದೇ ಜನರ ಬದುಕು ಹಸನಾಗುತ್ತದೆ.

ಈಗಾಗಲೇ ಈ ಬಗ್ಗೆ ಕನ್ನಡ ಕಿರುತೆರೆ ಕಲಾವಿದರು ಅಭಿಯಾನವನ್ನೇ ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಸಣ್ಣ ಉದ್ಯಮಗಳನ್ನು ಪ್ರೋತ್ಸಾಹಿಸಿ ಎಂದು ಅಭಿಯಾನಗಳು ಶುರುವಾಗಿದೆ. ಈ ಮೂಲಕ ಕೊರೋನಾ ಬಳಿಕ ಬದುಕು ಕಟ್ಟಿಕೊಳ್ಳಲು ನಮ್ಮವರಿಗೆ ಬೆಂಬಲ ನೀಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ ರಾಹುಲ್ ಗಾಂಧಿ