Select Your Language

Notifications

webdunia
webdunia
webdunia
webdunia

ವಿದೇಶದಿಂದಲೇ ಪ್ರಜ್ವಲ್‌ ವಿಡಿಯೊ ಬಿಡುಗಡೆ: 31ರಂದು ವಿಚಾರಣೆಗೆ ಹಾಜರು

Prajwal Revanna

Sampriya

ಬೆಂಗಳೂರು , ಸೋಮವಾರ, 27 ಮೇ 2024 (16:14 IST)
ಬೆಂಗಳೂರು: ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಹಾಸನದ ಸಂಸದ ಕೊನೆಗೂ ಪ್ರತ್ಯಕ್ಷವಾಗಿದ್ದಾರೆ. ಲೋಕಸಭೆ ಮತದಾನ ಬೆನ್ನಲ್ಲೇ ವಿದೇಶಕ್ಕೆ ಹಾರಿದ್ದ ಒಂದು ತಿಂಗಳ ಬಳಿಕ ಕೊನೆಗೂ ಪ್ರತ್ಯಕ್ಷರಾಗಿದ್ದಾರೆ.

ಸದ್ಯಕ್ಕೆ ಅಜ್ಞಾತವಾಗಿರುವ ಪ್ರಜ್ವಲ್‌ ವಿದೇಶದಲ್ಲಿದ್ದುಕೊಂಡೇ ವಿಡಿಯೋ ಬಿಡುಗಡೆ ಮಾಡಿದ್ದಾರೆ. ನಾನು ವಿದೇಶಕ್ಕೆ ತೆರಳುವುದು ಏ.26 ರಂದೇ ಪೂರ್ವನಿಗದಿಯಾಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.

 ಲೈಂಗಿಕ ದೌರ್ಜನ್ಯ ಆರೋಪ ಕುರಿತು ತನಿಖೆ ನಡೆಸುತ್ತಿರುವ ಎಸ್‌ಐಟಿ ಎದುರು ಇದೇ 31ರಂದು ಹಾಜರಾಗುತ್ತೇನೆ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.

ಇದೇ ವೇಳೆ ಮಾಜಿ ಪ್ರಧಾನಿ, ತಾತ ಎಚ್‌.ಡಿ. ದೇವೇಗೌಡ ಪತ್ರ, ಕುಮಾರಸ್ವಾಮಿ ಅವರ ಮನವಿಯ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ಪ್ರಜ್ವಲ್ ರೇವಣ್ಣ, ತಂದೆ-ತಾಯಿ, ತಾತನಿಗೆ ಕ್ಷಮೆಕೋರುತ್ತೇನೆ, ಜನತೆ, ಜೆಡಿಎಸ್ ಕಾರ್ಯಕರ್ತರಿಗೂ ಕ್ಷಮೆ ಕೋರುತ್ತೇನೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ಬಹಿರಂಗ ಪತ್ರ ಪ್ರಕಟಿಸಿದ್ದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಪ್ರಜ್ವಲ್ ರೇವಣ್ಣಗೆ ಎಚ್ಚರಿಕೆ ನೀಡಿದ್ದರು. ತಕ್ಷಣ ಬಂದು ವಿಚಾರಣೆ ಎದುರಿಸುವಂತೆ ತಾಕೀತು ಮಾಡಿದ್ದರು. ಅಲ್ಲದೆ, ಮತ್ತೊಂದೆಡೆ ಪ್ರಜ್ವಲ್‌ ಅವರು ಪಾಸ್‌ಪೋರ್ಟ್‌ ರದ್ದು ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಆರಂಭಿಸಿತ್ತು. ಈ ಬಗ್ಗೆ ಪ್ರಜ್ವಲ್‌ ಅವರಿಗೂ ನೋಟಿಸ್‌ ಜಾರಿ ಮಾಡಿತ್ತು. ಅದರ ಬೆನ್ನಲ್ಲೇ ಭಾರತಕ್ಕೆ ವಾಪಸಾಗಲು ಪ್ರಜ್ವಲ್‌ ಸಿದ್ಧತೆ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೋಲು ಕಾಣುತ್ತಿರುವುದರ ಭಯಕ್ಕೆ ಮೋದಿ ಏನೇನೋ ಮಾತನಾಡುತ್ತಿದ್ದಾರೆ: ಸಿದ್ದರಾಮಯ್ಯ