Publish Date: Thu, 23 Feb 2017 (12:09 IST)
Updated Date: Thu, 23 Feb 2017 (12:12 IST)
ಮೈಸೂರು: ಇಂದಿನ ಯುವ ಜನತೆ ಐಷಾರಾಮಿ ಜೀವನಕ್ಕಾಗಿ ಯಾವ ಮಟ್ಟಕ್ಕೆ ಇಳಿಯುತ್ತಾರೆ ಎನ್ನುವುದಕ್ಕೆ ಇದುವೇ ಸಾಕ್ಷಿ. ದುಬಾರಿ ಹೆಡ್ ಫೋನ್ ಗಾಗಿ ಪ್ರತಿಭಾವಂತ ವಿದ್ಯಾರ್ಥಿಯೊಬ್ಬ ಗೆಳೆಯರ ಜತೆ ದರೋಡೆಗಿಳಿದು ಸಿಕ್ಕಿಬಿದ್ದಿದ್ದಾನೆ.
ಮೈಸೂರಿನ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಸನತ್ ಕುಮಾರ್ ಈ ಕೃತ್ಯ ಎಸಗಿದಾತ. ಈತ ಆನ್ ಲೈನ್ ನಲ್ಲಿ 20 ಸಾವಿರ ಮೌಲ್ಯದ ಹೆಡ್ ಫೋನ್ ಖರೀದಿಸಿದ್ದ. ಇದನ್ನು ತಲುಪಿಸಲು ಬಂದ ವ್ಯಕ್ತಿಯ ಮೇಲೆ ಖಾರದ ಪುಡಿ ಎರಚಿ ನಿರ್ಜನ ಪ್ರದೇಶಕ್ಕೆ ಕರೆ ತಂದು ಹೆಡ್ ಫೋನ್ ಕಿತ್ತು ಕೊಳ್ಳುವ ಯತ್ನ ನಡೆಸಿದ್ದಾನೆ.
ಇದಕ್ಕೆಲ್ಲಾ ಕುಮ್ಮಕ್ಕು ನೀಡಿದ ಆತನ ನಾಲ್ವರು ಸ್ನೇಹಿತರೂ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ