Publish Date: Tue, 13 Jul 2021 (15:56 IST)
Updated Date: Tue, 13 Jul 2021 (15:59 IST)
ನಿರ್ಮಾಪಕರನ್ನು ಬಿಟ್ಟು ಕೊಡುವುದಿಲ್ಲ. ಈ ಪ್ರಕರಣಕ್ಕೆ ನಾವು ಮಂಗಳ ಹಾಡಿದ್ದೇವೆ. ಇಲ್ಲಿಗೆ ಬಿಟ್ಟುಬಿಡಿ. ಉಮಾಪತಿ ಯಾವಾಗಲೂ ನಮ್ಮ ನಿರ್ಮಾಪಕರು. ಯಾವಾಗಲೂ ನಾನು ಅವರಿಗೆ ಅಣ್ಣಾನೇ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ
ಮಾತನಾಡಿದ ಅವರು, ಈ ಪ್ರಕರಣದಲ್ಲಿ ಯಾರನ್ನೂ ಅರೆಸ್ಟ್ ಮಾಡಲ್ಲ. ಇದರಲ್ಲಿ ಏನೂ ಇಲ್ಲ. ಹಾಗಾಗಿ ಈ ಪ್ರಕರಣವನ್ನು ಇಲ್ಲಿಗೆ ಬಿಟ್ಟುಬಿಟ್ಟಿದ್ದೇವೆ ಎಂದರು.
ಘಟನೆ ಬಗ್ಗೆ ನಾನು ಮತ್ತು ಉಮಾಪತಿ ಮಾತನಾಡಿಕೊಳ್ಳುತ್ತೇವೆ. ಅವರು ಯಾವಾಗಲೂ ನಮ್ಮ ನಿರ್ಮಾಪಕರೇ. ನಾವು ಈಗಲೂ ಮಾತನಾಡುತ್ತಿದ್ದೇವೆ. ಚೆಂಡು ಅವರ ಅಂಗಳದಲ್ಲೇ ಇದೆ ಎಂದು ದರ್ಶನ್ ಸ್ಪಷ್ಟಪಡಿಸಿದರು.
ಉಮಾಪತಿ ಜೊತೆ ಮಾತು ಬಿಡುವುದಿಲ್ಲ. ನಾವೇನು ಚಿಕ್ಕ ಮಕ್ಕಳಾ? 45 ವರ್ಷ ಆಗಿದೆ. ಚಾಕಲೇಟ್ ಕೊಟ್ಟರೆ ಬರ್ತಿನಿ, ಬರಲ್ಲ ಅನ್ನೋಕೆ ಎಂದು ಅವರು ಹೇಳಿದರು.